ಬಂಟಮದುವೆ ಮುಖಪುಟ

ಬಂಟಮದುವೆ ಮುಖಪುಟ
ದಂಬೆಕ್ಕಾನ ಸದಾಶಿವ ರೈ
ಪುಸ್ತಕ ಓದಲು ಈ ಕೆಳಗಿನ ವಿಷಯಗಳಿಗೆ ಕ್ಲಿಕ್ ಮಾಡಿ

ಆಶಯ ನುಡಿ- ಕುಮುದ ಎಲ್. ಎನ್. ಶೆಟ್ಟಿ

 ಆಶಯ ನುಡಿ

ಕುಮುದ ಎಲ್. ಎನ್. ಶೆಟ್ಟಿ




ಬಂಟರ ವಿವಾಹ ಪದ್ಧತಿ ವಿವಾಹ ಸಂದರ್ಭದಲ್ಲಿ ಅನುಸರಿಸ ಬೇಕಾದ ಕ್ರಮಗಳನ್ನು ತಾವು ತಮ್ಮ ಹಿಂದಿನ ಪುಸ್ತಕದಲ್ಲಿ ಸವಿವರವಾಗಿ ಬರೆದಿರುತ್ತೀರಿ. ಅದು ನಮ್ಮ ಎಲ್ಲಾ ಬಂಟ ಬಾಂಧವರಿಗೆ ಕೈ ಕನ್ನಡಿಯಾಗಿರುತ್ತದೆ, ಅಂತ ನಾನು ಭಾವಿಸುತ್ತೇನೆ. ಈ ಹಿಂದೆ ನಾನು ಮಹಿಳಾ ಘಟಕದ ಅಧ್ಯಕ್ಷೆಯಾಗಿರುವಾಗ ತಾವು ಬಂಟರ ವಿವಾಹ ಪದ್ಧತಿ ಮತ್ತು ಅನುಸರಿಸಬೇಕಾದ ಕ್ರಮಗಳನ್ನು ಸವಿವರವಾಗಿ ಮಾಹಿತಿ ಕೊಟ್ಟಿರುತ್ತೀರಿ. ಇನ್ನು ಮುಂದೆ ತಾವು ಬರೆದು ಪ್ರಕಾಶಿಸಲಿರುವ ಬಂಟರ ವಿವಾಹ ಪದ್ಧತಿಯನ್ನು ಎಲ್ಲಾ ಬಂಟ ಜಾತಿ ಬಾಂಧವರು ಸ್ವೀಕರಿಸಿ ಅನುಷ್ಠಾನಕ್ಕೆ ತರಲಿ ಎಂದು ಆಶಿಸುವ ನಿಮ್ಮ ಸಂಬಂಧಿ. 

ಕುಮುದ ಎಲ್. ಎನ್. ಶೆಟ್ಟಿ

ತಿಂಗಳಾಡಿ ಮನೆ

ಮಾಜಿ ಅಧ್ಯಕ್ಷರು, ಪುತ್ತೂರು ತಾಲೂಕು ಬಂಟರ ಮಹಿಳಾ ಘಟಕ