ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಬೆನ್ನುಡಿಯಿಂದ

 ದಂಬೆಕ್ಕಾನ ಸದಾಶಿವ ರೈ

ದಂಬೆಕ್ಕಾನ ಸದಾಶಿವ ರೈಯವರು 'ಬಂಟ ಮದುವೆ' ಎನ್ನುವ ಕೃತಿಯನ್ನು ಕೇವಲ ಹವ್ಯಾಸಿ ಸಾಹಿತ್ಯವಾಗಿ ಬರೆಯದೆ ಮದುವೆ ಎನ್ನುವ ಧಾರ್ಮಿಕ ಕಾರ್ಯದ ಪವಿತ್ರತೆಯನ್ನು ಎತ್ತಿ ಹಿಡಿದಿದ್ದಾರೆ. ಬಾಳೊಂದು ನಂದನ, ಅನುರಾಗ ಬಂಧನ, ಜೇನುಗೂಡಿನ ಸದನ ಎನ್ನುವಂತೆ ಸಪ್ತಪದಿಯನ್ನು ತುಳಿದು ಬಂಧನಕ್ಕೊಳಗಾಗುವ ಜೋಡಿಗಳ ಬದುಕು ಹೂವಿನ ಹಾಸಿಗೆಯಾಗಬೇಕಾದರೆ ಪರಸ್ಪರ ಹೊಂದಾಣಿಕೆ, ಗುರು-ಹಿರಿಯರ, ಸಮಸ್ತ ದೇವತೆಗಳ ಶುಭಾಶೀರ್ವಾದ ಇರಬೇಕು ಎಂದು ಬರೆಯುತ್ತಾ 'ಮದುವೆ' ಎನ್ನುವ ಕಲ್ಪನೆಗೆ ಮೂರ್ತಸ್ವರೂಪವನ್ನು ನೀಡಿ ಏಕಪತ್ನಿವ್ರತಸ್ಥನಾಗಿ ಪುರುಷನನ್ನು ಪ್ರಭಾವಿತರನ್ನಾಗಿಸುವುದರಲ್ಲಿ ಎರಡು ಮಾತಿಲ್ಲ.

ಎ. ಹೇಮನಾಥ ಶೆಟ್ಟಿ ಕಾವು.

ಉಪಾಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ (ರಿ.)

ಬಂಟ್ಸ್ ಹಾಸ್ಟೆಲ್, ಮಂಗಳೂರು - 575 003

(ಬೆನ್ನುಡಿಯಿಂದ)

ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿವರ

 


ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು 

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು 

ಡಾ. ಪಿ. ಬಿ. ರೈ ಪ್ರತಿಷ್ಠಾನ, ನೂಜಿ ತರವಾಡು, ಕೆಯ್ಯೂರು, ಪುತ್ತೂರು ತಾಲೂಕು

ಇವುಗಳ ಆಶ್ರಯದಲ್ಲಿ

ದಂಬೆಕ್ಕಾನ ಸದಾಶಿವ ರೈಯವರಿಂದ ರಚಿತ

'ಬಂಟ ಮದುವೆ'- 'ಬಂಟ ಗುರಿಕ್ಕಾರ'ನ ಕೈಪಿಡಿ

ಡಾ. ಪಿ. ಬಿ. ರೈ ಪ್ರತಿಷ್ಠಾನ ವತಿಯಿಂದ ನೀಡಲ್ಪಡುವ

'ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ' ಸಮಾರ೦ಭ

ಜರುಗಲಿದೆ.

ದಿನಾಂಕ : 29-01-2022, ಶನಿವಾರ

ಸಮಯ : ಪೂರ್ವಾಹ್ನ ಘಂಟೆ 10:30

ಸ್ಥಳ :

ಅಮೃತೋತ್ಸವ ಸಭಾಭವನ, ಬಂಟರ ಯಾನೆ ನಾಡವರ ಮಾತೃ ಸಂಘ, ಬಂಟ್ಸ್ ಹಾಸ್ಟೆಲ್, ಮಂಗಳೂರು

* ಆಮಂತ್ರಣ ಪತ್ರಿಕೆ *

ಕಾರ್ಯಕ್ರಮ

ಅಧ್ಯಕ್ಷತೆ : ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ

ಉದ್ಘಾಟನೆ: ಶ್ರೀ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ

ಕೈಪಿಡಿ ಲೋಕಾರ್ಪಣೆ :ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ


ಮುಖ್ಯ ಅತಿಥಿಗಳು :

ಶ್ರೀ CA ಸುಧೀರ್ ಕುಮಾರ್ ಶೆಟ್ಟಿ, ಯಣ್ಮಕಜೆ,  ಕಾರ್ಯದರ್ಶಿ, ಜಾಗತಿಕ ಬಂಟ ಪ್ರತಿಷ್ಠಾನ (ರಿ.), ಮಂಗಳೂರು

ಶ್ರೀ ವೈ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ

ಶ್ರೀ ಮಂಜುನಾಥ ಭಂಡಾರಿ, ಶಾಸಕರು, ಕರ್ನಾಟಕ ವಿಧಾನ ಪರಿಷತ್

ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು

ಶ್ರೀ ದಯಾನಂದ ರೈ ಮನವಳಿಕೆಗುತ್ತು, ಸಂಚಾಲಕರು, ಬಂಟರ ಯಾನೆ ನಾಡವರ ಮಾತೃ ಸಂಘ, ಪುತ್ತೂರು ತಾಲೂಕು

ಶ್ರೀ ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷರು, ಬಂಟರ ಸಂಘ, ಪುತ್ತೂರು

ಶ್ರೀ ಸುಧಾಕರ ಪೂಂಜ, ಅಧ್ಯಕ್ಷರು, ಬಂಟರ ಸಂಘ, ಸುರತ್ಕಲ್

ಶ್ರೀ ವಿವೇಕ್ ರೈ ನಗ್ರಿಗುತ್ತು. ಅಧ್ಯಕ್ಷರು, ತಾಲೂಕು ಬಂಟರ ಸಂಘ, ಬಂಟ್ವಾಳ


ಕಾರ್ಯಕ್ರಮದ ಪ್ರಸ್ತಾವನೆ : ಶ್ರೀ ಹೇಮನಾಥ ಶೆಟ್ಟಿ ಕಾವು, ಉಪಾಧ್ಯಕ್ಷರು, ಬಂಟರ ಯಾನೆ, ನಾಡವರ ಮಾತೃ ಸಂಘ, ಮಂಗಳೂರು

ತಮ್ಮನ್ನು ಆದರದಿಂದ ಬರಮಾಡಿಕೊಳ್ಳುವ

* ಶ್ರೀ ಹೇಮನಾಥ ಶೆಟ್ಟಿ ಕಾವು, ಉಪಾಧ್ಯಕ್ಷರು

* ಶ್ರೀ ಗೋಪಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ

* ಶ್ರೀ ಕೃಷ್ಣಪ್ರಸಾದ್ ರೈ, ಕೋಶಾಧಿಕಾರಿಗಳು

* ಶ್ರೀ ಸಂಜೀವ ಶೆಟ್ಟಿ, ಸಂಪಿಗೇಡಿ, ಜೊತೆ ಕಾರ್ಯದರ್ಶಿ

ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು

* ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ

* ಶ್ರೀ ಸತೀಶ್ ಅಡಪ ಸಂಕಬೈಲು, ಜೊತೆ ಕಾರ್ಯದರ್ಶಿ

* ಶ್ರೀ ಮೋಹನ್ದಾಸ ಶೆಟ್ಟಿ ವಳತ್ತೂರು, ಕೋಶಾಧಿಕಾರಿಗಳು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು

* ಶ್ರೀ ದಂಬೆಕ್ಕಾನ ಸದಾಶಿವ ರೈ, ಅಧ್ಯಕ್ಷರು

* ಶ್ರೀ ಅಕ್ಷಯ್ ರೈ ದಂಬೆಕ್ಕಾನ, ಪ್ರಧಾನ ಕಾರ್ಯದರ್ಶಿ

* ಶ್ರೀಮತಿ ಪ್ರಭಾ ಎಸ್. ರೈ, ಕೋಶಾಧಿಕಾರಿ

ಡಾ. ಪಿ. ಬಿ. ರೈ ಪ್ರತಿಷ್ಠಾನ

ಬೆನ್ನುಡಿ- ಎ. ಹೇಮನಾಥ ಶೆಟ್ಟಿ, ಕಾವು

 ಬೆನ್ನುಡಿ

ಎ. ಹೇಮನಾಥ ಶೆಟ್ಟಿ, ಕಾವು

ಸರಸ-ವಿರಸ ಸಾಮರಸ್ಯದ ಮಧುರ ಬಾಂಧವ್ಯ 'ಮದುವೆ'. ಪ್ರಾಚೀನ ಯುಗದಲ್ಲಿ ಮದುವೆ ಎನ್ನುವುದು ಮರೀಚಿಕೆಯಾಗಿತ್ತು. ಋಷಿ-ಮುನಿಗಳ ಸುಜ್ಞಾನದ ಪ್ರತೀಕವಾಗಿ ಹೆಣ್ಣು-ಗಂಡಿನ ಮದುವೆ ಎನ್ನುವ ಪರಸ್ಪರ ಸ್ಪಂದನದ ಅನುಬಂಧ ಹುಟ್ಟಿಕೊಂಡಿತು. ಹೆಣ್ಣನ್ನು ಪಶುಸಮಾನವಾಗಿ ಅನುಭವಿಸುತ್ತಿದ್ದ ಪುರುಷ ಪ್ರಪಂಚದ ಅಂಧಕಾರದಿಂದ 'ಮದುವೆ' ಎನ್ನುವ ದೀವಟಿಗೆ ಪ್ರಜ್ವಲಿಸ ಲಾರಂಭಿಸಿತು ಎಂದು ಪ್ರಸ್ತಾವನೆಯಲ್ಲಿ ಬಿಂಬಿಸಿದ ದಂಬೆಕ್ಕಾನ ಸದಾಶಿವ ರೈಯವರು ಆಧುನಿಕ ಯುವ ಪೀಳಿಗೆ ಪಾತಿವ್ರತ್ಯದ ಮಹತ್ವವನ್ನು ಧಿಕ್ಕರಿಸಿ ಸ್ವಚ್ಛಂದ ಬದುಕಿನತ್ತ, ಸ್ಟೇಚ್ಛೆಯತ್ತ ವಾಲುತ್ತಿರುವುದಕ್ಕೆ ವಿಷಾದಿಸುತ್ತಾ ವಿವಾಹದ ಮಹತ್ವವನ್ನು ಮನೋಜ್ಞವಾಗಿ ವರ್ಣಿಸಿದ್ದಾರೆ.

ನಾಗರಿಕ ಬಂಟ ಸಮಾಜದ ವಿವಾಹ ವ್ಯವಸ್ಥೆಯನ್ನು ಕೂಲಂಕುಷವಾಗಿ ವಿಶ್ಲೇಷಿಸುತ್ತಾ ವಿವಾಹದಲ್ಲಿ ಶ್ರೀ ದೇವರ, ಗುರು-ಹಿರಿಯರ ಕೃಪಾಕಟಾಕ್ಷ ಮತ್ತು ಮಹತ್ವವನ್ನು ಮನದಟ್ಟು ಮಾಡಿರುತ್ತಾರೆ. ಹಿಂದೆ ಹೆಣ್ಣು-ಗಂಡಿನ ಮುಖಾಮುಖಿ ಮದುವೆ ಮಂಟಪದಲ್ಲಿ ಅಥವಾ ಮೊದಲ ರಾತ್ರಿಯಾಗಿದ್ದರೆ ಇಂದು ಪರಸ್ಪರ ಆಯ್ಕೆ ಅವರವರೇ ತೀರ್ಮಾನಿಸಿ ಹಿರಿಯರನ್ನು ಅಸಡ್ಡೆ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.

ವಿವಾಹ ಬಂಧನಕ್ಕೊಳಗಾದ ಹೆಣ್ಣು, ಸರ್ವರಿಗೂ ಮಾತೃ ಸದೃಶಳಾಗಿ ಬದುಕಿ ಮುತ್ತೈದೆ ಭಾಗ್ಯವನ್ನು ಅನುಭವಿಸಿ ಎಲ್ಲರ ಆರಾಧ್ಯ ದೇವತೆಯಂತೆ ಬದುಕಿ ಗಂಡನ ಪ್ರೀತ್ಯಾದರಗಳಿಗೆ ಪಾತ್ರಳಾಗಿ ಅನ್ನೋನ್ಯ ದಾಂಪತ್ಯ ಜೀವನದ ರಸದೌತಣವನ್ನು ಅನುಭವಿಸಿ ಪರಸ್ಪರ ಹೊಂದಿಕೊಂಡು ಬಾಳುವ ಮನೋಭಾವ ವನ್ನು ತೋರಬೇಕು ಎನ್ನುತ್ತಾರೆ.

ಸಾಮರಸ್ಯವೇ ಸಂಸಾರವೆಂದು ಹೊಂದಾಣಿಕೆಯೇ ದಾಂಪತ್ಯ ವೆಂದು ವಿವಾಹದ ವಿಭಿನ್ನ ಅರ್ಥಗಳನ್ನು ಬಹಳ ಮಾರ್ಮಿಕವಾಗಿ ಬರೆದ ಸಾಹಿತಿ ದಂಬೆಕ್ಕಾನ ಸದಾಶಿವ ರೈಯವರು ದಾಂಪತ್ಯದ ಒಳಗುಟ್ಟನ್ನು ಅರಿತು ಪರಸ್ಪರ ಆಧಾರ-ವಿಶ್ವಾಸದಿಂದ ದಂಪತಿ ಬದುಕಿ ಬಾಳಬೇಕು ಎನ್ನುತ್ತಾರೆ. ಸಾಮಾಜಿಕ ಸದಾಚಾರದಿಂದ ಗಂಡ-ಹೆಂಡತಿಯನ್ನು ಬೆಸೆದ ಬಾಂಧವ್ಯ ಬೆಸುಗೆಯೇ ವಿವಾಹ ಎನ್ನುವ ಲೇಖಕರು 'ಮದುವೆ'ಯ ಹರಿಕಾರನಾದ ಬಂಟ ಗುರಿಕ್ಕಾರನ ಮಾರ್ಗಸೂಚಿಯಲ್ಲಿ ಮೂವತ್ತೆರಡು ಹಂತಗಳನ್ನು ವರ್ಣಿಸುತ್ತಾ ಪ್ರಾರಂಭದಲ್ಲಿ ವೇದಿಕೆಯ ದಿಕ್ಕಿನಿಂದ ಹಿಡಿದು ಮದುಮಗ-ಮದುಮಗಳು ಎಲ್ಲ ಹಿರಿಯರ ಕಾಲಿಗೆ ನಮಸ್ಕರಿಸಿ ಶುಭಾಶೀರ್ವಾದವನ್ನು ಪಡೆಯುವವರೆಗೆ ತಿಳಿಸಿರುತ್ತಾರೆ.

ಗಂಡು-ಹೆಣ್ಣಿನ ನಿಶ್ಚಿತಾರ್ಥದ ರೂಪುರೇಷೆಗಳ ಬಗ್ಗೆ ಬರೆಯುತ್ತಾ ನಿಶ್ಚಯದ ಸಾಹಿತ್ಯಗಳ ಪಟ್ಟಿಯನ್ನು ನೀಡಿ ಕಾರ್ಯಕ್ರಮದ ವೈಖರಿಯ ಬಗ್ಗೆ ಬರೆಯುತ್ತಾ ವಿವಿಧ ಹಂತಗಳ ಮಾಹಿತಿ ನೀಡುತ್ತಾ ದೇವತಾರಾಧನೆಯನ್ನು ವಿಸ್ತರಿಸುತ್ತಾ ಹೆಣ್ಣನ್ನು ಕೂರಿಸುವ ರೀತಿ, ಎಲ್ಲರೂ ನಿಲ್ಲುವ ವಿವಿಧ ದಿಕ್ಕುಗಳು, ದೀಪ ಪ್ರಜ್ವಲನ ಇತ್ಯಾದಿಗಳನ್ನು ಸವಿಸ್ತಾರವಾಗಿ ವರ್ಣಿಸಿರುತ್ತಾರೆ. ಪಂಚಭೂತಗಳ ಸಾಕ್ಷಿಯಾಗಿ ದೈವ ದೇವರುಗಳ ಸಾಕ್ಷಿಯಾಗಿ ಜವಾಬ್ದಾರಿಯುತ ಹಿರಿಯರಾಗಿ ಗಂಡು-ಹೆಣ್ಣಿಗೆ ಮದುವೆ ಮಾಡಿಕೊಡುವ ಸಂಕಲ್ಪವನ್ನು ಬದ್ಧತೆಯಿಂದ ಮಾಡುವುದನ್ನು ವರ್ಣಿಸಿರುತ್ತಾರೆ.

ಮದುವೆ ಮಂಟಪಕ್ಕೆ ಬೇಕಾದ ಪರಿಕರಗಳ ಪಟ್ಟಿಯನ್ನು ನೀಡಿ ಮದುವೆ ಕಾರ್ಯಕ್ರಮವನ್ನು ಹೃದಯಂಗಮವಾಗಿ ವಿಸ್ತರಿಸುತ್ತಾ ವೇದಿಕೆಯಲ್ಲಿರುವ ಎಲ್ಲಾ ಹಿರಿಯರೂ ಅಕ್ಷತೆ ಕಾಳನ್ನು ವಧು-ವರರಿಗೆ ಹಾಕುವ ಮೂಲಕ ಕಾರ್ಯೋನ್ಮುಖರಾಗಿ ಮುಂದೆ ಧಾರಾಕಲಶದ ಬಗ್ಗೆ ಸವಿಸ್ತಾರವಾಗಿ ಬರೆದು ಒಡ್ಡಿ ಉಂಗುರವನ್ನು ವರನು ವಧುವಿಗೆ ತೊಡಿಸುವ ಹಂತವನ್ನು ಬರೆದಿರುತ್ತಾರೆ.

ಮದುವೆ ಎಂದರೆ ಮಾಂಗಲ್ಯ ಬಂಧನವೆನ್ನುತ್ತಾ ವರನು ವಧುವಿನ ಕೊರಳಿಗೆ ಕರಿಮಣಿ ಸರವನ್ನು ಅಂದರೆ ತಾಳಿಯನ್ನು "ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ ನಾತಿಚರಾಮಿ” ಎಂದು ಹೇಳಿ ಕಟ್ಟುವುದನ್ನು ಹಾಗೂ ಈ ಶ್ಲೋಕದ ತಾತ್ಪರ್ಯವನ್ನು ಬರೆಯುತ್ತಾ ಬಂಟ ವಧು ಮಾಂಗಲ್ಯ ಬಂಧನದಿಂದ ಗೃಹಿಣಿ ಪಟ್ಟವನ್ನು ಅಲಂಕರಿಸುವುದನ್ನು ಶತವರ್ಷ ಸೌಭಾಗ್ಯವತಿಯಾಗಿ ಇರುವಂತೆ ಸಮಸ್ತ ದೇವತೆಗಳು ಆಶೀರ್ವದಿಸಲಿ ಎಂದು ವರನು ಶ್ಲೋಕದ ರೂಪದಲ್ಲಿ ಹೇಳುತ್ತಾ ವಧುವಿಗೆ ತಾಳಿಯನ್ನು ಕಟ್ಟುವುದನ್ನು ಅರ್ಥಪೂರ್ಣವಾಗಿ ಬರೆದಿರುತ್ತಾರೆ.

ಪಂಚ ಮುತ್ತೈದೆಯರು ಲಕ್ಷ್ಮೀನಾರಾಯಣ, ಈಶ್ವರ-ಪಾರ್ವತಿ ದೇವಸ್ವರೂಪರಾದ ನವದಂಪತಿಗಳಿಗೆ ಆರತಿಯನ್ನು ಎತ್ತಿ ಹೊಸ ಬಾಳಿನ ಹೊಸ ಬದುಕಿನ ಹೊಸ್ತಿಲಲಿ ನಿಂತಿರುವ ಇವರ ಬಾಳ ಪಯಣಕ್ಕೆ 'ಆರತಿ'ಯೇ ದಾರಿದೀಪ ಮತ್ತು ಶ್ರೀರಕ್ಷೆ ಎಂದು ಪ್ರಾರ್ಥಿಸಿ ದೇಸೆಯ ಪರಿಕರಗಳ ಬಗ್ಗೆ ಬರೆದು, ಸಭಾಸದರಿಂದ ದೇಸೆಯ ಮೂಲಕ ಶುಭಾಶೀರ್ವಾದವನ್ನು ಪಡೆದು ಮಂಟಪ ಇಳಿಸುವಿಕೆ ಬಗ್ಗೆ ವಿವರಿಸುತ್ತಾರೆ.

ವಧು ಬಿಟ್ಟು ಕೊಡುವುದು ಮುಂದಿನ ಮನೋಜ್ಞ ಹಂತ. ಬಾಲ್ಯವನ್ನು ದಾಟಿ ಹದಿಹರೆಯವನ್ನು ದಾಟಿ ಯೌವನಕ್ಕೆ ಕಾಲಿಟ್ಟ ಮನೆ ಮಗಳನ್ನು ಗಂಡನ ಮನೆಗೆ ಮುಂದಿನ ದಾಂಪತ್ಯ ಬದುಕನ್ನು ಬಾಳಲು ಕಳುಹಿಸಿ ಕೊಡುವ ಹೃದಯಂಗಮ ದೃಶ್ಯ ಸೇರಿದ ಎಲ್ಲರ ಕಣ್ಣಲ್ಲೂ ಭಾಷ್ಪಾಂಜಲಿಯನ್ನು ಬರಿಸುತ್ತದೆ. ಕೈಹಿಡಿದು, ತಾಳಿಕಟ್ಟಿ, ಸಪ್ತಪದಿಯನ್ನು ತುಳಿದು ಬಾಳ ಪಯಣದಲ್ಲಿ ಜೊತೆಗಾರನಾಗಿರುವ ಗಂಡನಿಗೆ ತಕ್ಕ ಹೆಂಡತಿಯಾಗಿ, ಅತ್ತೆ-ಮಾವಂದಿರ ಒಲುಮೆಯ ಸೊಸೆಯಾಗಿ ವಿಧೇಯತೆ-ವಿನಯ ಗಳನ್ನು ಮೈಗೂಡಿಸಿ ಬಾಳಬೇಕು ಎನ್ನುವ ಮಾರ್ಗದರ್ಶನವನ್ನು ನೀಡಿ ವಧುವನ್ನು ಮಗಳಂತೆ ಕಾಣಿ ಎನ್ನುತ್ತಾ ವಧುವನ್ನು ಗಂಡಿನ ಮನೆಯವರ ಸುಪರ್ದಿಗೆ ಒಪ್ಪಿಸುವ ಹಂತ ಬಹಳ ಮಹತ್ವ ಪೂರ್ಣವಾಗಿದೆ.

ಬಾಳು ತಿಳಿನೀರಿನಂತೆ ಶಾಂತವಾಗಿರಬೇಕು. ಹಿಂದೆ ನವ ವಧೂವರರಿಗೆ ಹಾಲನ್ನು ಕುಡಿಯಲು ಕೊಡುತ್ತಿದ್ದರೆ ಈಗ ಕಲ್ಪವೃಕ್ಷದಿಂದ ಇಳಿಸಿದ ಸೀಯಾಳದ ಮೂಲಕ ಪರಸ್ಪರ ಬದುಕು ಪ್ರಾರಂಭಗೊಳ್ಳುತ್ತದೆ.

ಒಟ್ಟಿನಲ್ಲಿ ದಂಬೆಕ್ಕಾನ ಸದಾಶಿವ ರೈಯವರು 'ಬಂಟ ಮದುವೆ' ಎನ್ನುವ ಕೃತಿಯನ್ನು ಕೇವಲ ಹವ್ಯಾಸಿ ಸಾಹಿತ್ಯವಾಗಿ ಬರೆಯದೆ ಮದುವೆ ಎನ್ನುವ ಧಾರ್ಮಿಕ ಕಾರ್ಯದ ಪವಿತ್ರತೆಯನ್ನು ಎತ್ತಿ ಹಿಡಿದಿದ್ದಾರೆ. ಬಾಳೊಂದು ನಂದನ, ಅನುರಾಗ ಬಂಧನ, ಜೇನುಗೂಡಿನ ಸದನ ಎನ್ನುವಂತೆ ಸಪ್ತಪದಿಯನ್ನು ತುಳಿದು ವಿವಾಹ ಬಂಧನಕ್ಕೊಳಗಾಗುವ ಜೋಡಿಗಳ ಬದುಕು ಹೂವಿನ ಹಾಸಿಗೆಯಾಗಬೇಕಾದರೆ ಪರಸ್ಪರ ಹೊಂದಾಣಿಕೆ, ಗುರು-ಹಿರಿಯರ, ಸಮಸ್ತ ದೇವತೆಗಳ ಶುಭಾಶೀರ್ವಾದ ಇರಬೇಕು ಎಂದು ಬರೆಯುತ್ತಾ 'ಮದುವೆ' ಎನ್ನುವ ಕಲ್ಪನೆಗೆ ಮೂರ್ತ ಸ್ವರೂಪವನ್ನು ನೀಡಿ ಏಕಪತ್ನಿವ್ರತಸ್ಥನಾಗಿ ಪುರುಷನನ್ನು ಪ್ರಭಾವಿತರನ್ನಾಗಿಸುವುದರಲ್ಲಿ ಎರಡು ಮಾತಿಲ್ಲ.

- ಎ. ಹೇಮನಾಥ ಶೆಟ್ಟಿ ಕಾವು

ಉಪಾಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ (ರಿ.)

ಬಂಟ್ಸ್ ಹಾಸ್ಟೆಲ್, ಮಂಗಳೂರು 575 003

ಸಹಕಾರ

 ನನಗೆ ಮಾಹಿತಿ ಕೊಟ್ಟ ಬಂಟ ಮಹನೀಯರು

1. ದಿ। ಏರ್ಯ ಲಕ್ಷ್ಮೀನಾರಾಯಣ ಆಳ್ವ

2. ದಿ| ಕಯ್ಯಾರ ಕಿಂಞಣ್ಣ ರೈ

3. ದಿ| ಅಣಿಲೆ ವೆಂಕಪ್ಪ ರೈ

4. ದಿ| ಕೆದಂಬಾಡಿ ಜತ್ತಪ್ಪ ರೈ

5. ದಿ| ಮೂಲ್ಕಿ ಹರಿ ಪೂಂಜ

6. ದಿ। ಅಗ್ರಾಳ ಪದ್ಮನಾಭ ರೈ

7. ಡಾ. ಪಿ. ಎಸ್. ರೈ, ಬೆಂಗಳೂರು

8. ದಿ| ಬೆಳ್ಳಿಪ್ಪಾಡಿ ಸಂಕಪ್ಪ ರೈ

9. ದಿ। ಕುದ್ಯಾಡಿ ವಿಶ್ವನಾಥ ರೈ

10. ದಿ| ಬಂಬ್ರಾಣಬೈಲು ದೇವಪ್ಪ ಆಳ್ವ

11. ದಿ| ಬಂಬ್ರಾಣಬೈಲು ಮದನ ಶೆಟ್ಟಿ

12. ದಿ| ಪಡ್ಡಂಬೈಲುಗುತ್ತು ದೂಮಣ್ಣ ರೈ

13. ದಿ| ಎಣ್ಮಕಜೆ ನಾರಾಯಣ ರೈ

14. ದಿ। ಅಜಿಲಾಡಿಬೀಡು ಜಯರಾಮ ರೈ

15. ದಿ। ಆನಾಜೆ ಗಣೇಶ ರೈ

16. ದಿ। ಇಟ್ರಾಡಿ ಬಾಲಕೃಷ್ಣ ರೈ

17. ದಿ| ನೆಕ್ರಾಜೆ ಜಗನ್ನಾಥ ಶೆಟ್ಟಿ

18. ದಿ। ದಂಬೆಕ್ಕಾನ ಕಾಂತಪ್ಪ ರೈ


ಪುಸ್ತಕ ಬರೆಯಲು ಪ್ರೇರೇಪಿಸಿದವರು

1. ಶ್ರೀ ಹೇಮನಾಥ ಶೆಟ್ಟಿ, ಕಾವು

2. ಶ್ರೀ ಮೋಹನ ಆಳ್ವ, ಮೂಡಬಿದ್ರೆ

3. ಶ್ರೀ ಬಿ. ನಾಗರಾಜ ಶೆಟ್ಟಿ, ಮಾಜಿ ಮಂತ್ರಿಗಳು

4. ಶ್ರೀ ನಾರಾಯಣ ರೈ ಕುಕ್ಕುವಳ್ಳಿ

5. ಶ್ರೀ ಚಿಲ್ಕೆತ್ತಾರು ಸಂಜೀವ ರೈ

6. ಶ್ರೀ ಚಿಲ್ಕೆತ್ತಾರು ನಾರಾಯಣ ರೈ

7. ಶ್ರೀ ಎ. ಕೆ. ಜಯರಾಮ ರೈ, ಕೆಯ್ಯರು

8. ಶ್ರೀ ಆನಂದ ರೈ ಕೈಕಂಬ, ಕೆಯ್ಯರು

9. ಶ್ರೀ ಯಸ್. ಬಿ. ಜಯರಾಮ ರೈ, ಕೆಯ್ಯರು

10. ದಿ। ಜೀವನ್ ಭಂಡಾರಿ ಅಗರಿ

11. ದಿ| ಕಟ್ಟತ್ತಾಡೆಗುತ್ತು ಸದಾನಂದ ರೈ

12. ದಿ। ಅಗಲ್ಪಾಡಿ ಸುಬ್ಬಯ್ಯ ರೈ








ಕಾರ್ಯಕ್ರಮ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬಂಟ ಮಹನೀಯರು

1. ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ

2. ಶ್ರೀ ಸದಾನಂದ ಶೆಟ್ಟಿ, ಮಂಗಳೂರು

3. ಶ್ರೀ ಶೆಡ್ಡೆ ಮಂಜುನಾಥ ಭಂಡಾರಿ

4. ಶ್ರೀ ನಳಿನ್ ಕುಮಾರ್ ಕಟೀಲು, ಎಂ.ಪಿ., ಮಂಗಳೂರು

5. ಶ್ರೀ ಜಾರಪ್ಪ ಶೆಟ್ಟಿ, ಖಂಡಿಗೊ

6. ಶ್ರೀ ಅರಿಯಡ್ಕ ಚಿಕ್ಕಪ್ಪ ನ್ಯಾಕ

7. ಶ್ರೀ ಬೆಳ್ಳಿಪ್ಪಾಡಿ ರಮಾನಾಥ ರೈ, ಮಾಜಿ ಮಂತ್ರಿಗಳು

8. ಶ್ರೀ ಬೈಲುಗುತ್ತು ವಿಠಲ ರೈ

9. ಶ್ರೀ ಪ್ರಹ್ಲಾದ ಶೆಟ್ಟಿ, ಮಾಣಿ

10. ಶ್ರೀ ಬಿ. ಆರ್. ಶೆಟ್ಟಿ ಅಬುದಾಬಿ

11. ಶ್ರೀ ಅಮರನಾಥ ಶೆಟ್ಟಿ, ಮೂಡಬಿದ್ರೆ

12. ಶ್ರೀ ಕೆ. ಸೀತಾರಾಮ ರೈ ಸವಣೂರು

13. ಡಾ. ಮುಂಡಾಳಗುತ್ತು ತಿಮ್ಮಪ್ಪ ರೈ

14. ದಿ। ಐ. ರಾಮ ರೈ, ಮಾಜಿ ಎಂ.ಪಿ., ಕಾಸರಗೋಡು

15. ದಿ| ಎಂ. ರಾಮಣ್ಣ ರೈ, ಮಾಜಿ ಎಂ.ಪಿ., ಕಾಸರಗೋಡು

16. ದಿ। ನೆಟ್ಟಾಳ ನಾರಾಯಣ ರೈ

17. ದಿ| ದಂಬೆಕ್ಕಾನ ಶಂಕರಮೋಹನದಾಸ ಆಳ್ವ

18. ದಿ। ಯಂ. ಸೀತಾರಾಮ ಶೆಟ್ಟಿ, ವಕೀಲರು, ಮಂಗಳೂರು

19. ದಿ। ಐತ್ತಪ್ಪ ಶೆಟ್ಟಿ, ಕಡಾರುಬೀಡು

ನೀತಿಪಾಠ

1. ಸತ್ಯ - ನ್ಯಾಯ - ಧರ್ಮಕ್ಕೆ ಜಯವಾಗಲಿ

2. ತಾಯಿಗಿಂತ ಮಿಗಿಲಾದ ದೇವರಿಲ್ಲ

3. ಮನೆಯೇ ಮೊದಲ ಪಾಠಶಾಲೆ

4. ಕಷ್ಟಕಾಲದಲ್ಲಿ ಸಹಕರಿಸುವವನೇ ಮಿತ್ರ

5. ಉಪಕಾರ ಮಾಡಿದವರನ್ನು ಎಂದೂ ಮರೆಯದಿರು

6. ಹೊಗಳುಭಟರನ್ನು ನಂಬದಿರು

7. ಆರ್ಥಿಕ ಶ್ರೀಮಂತಿಕೆ ಶಾಶ್ವತವಲ್ಲ

8. ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊ

9. ದುಡ್ಡಿನ ಹಿಂದೆ ಹೋಗದಿರು

10. ನಾನು ಸೊನ್ನೆ ನೀನು ಸನ್ನೆ

11. ನಾನು ವಿದ್ಯಾರ್ಥಿ - ನೀವು ಗುರುಗಳು

12. ನಿನಗೊಂದು ಗುರಿಯಿರಲಿ. ನಿನಗೊಬ್ಬ ಗುರು ಇರಲಿ

13. ಗುರುಹಿರಿಯರನ್ನು ಆದರದಿಂದ ಗೌರವಿಸು

14. ತಂದೆ ತಾಯಿಗೆ ಎಂದಿಗೂ ತಲೆಬಾಗುತ್ತಿರು

15. ದೇವರ ಅನುಗ್ರಹ - ಹಿರಿಯರ  ಆಶೀರ್ವಾದ, 

ಕಿರಿಯರ ಶುಭಕಾಮನೆಗಳು ಅದುವೇ ನಮಗೆ ಶ್ರೀರಕ್ಷೆ

16. ಇನ್ನೊಬ್ಬರ ತಪ್ಪನ್ನು ಹುಡುಕಬೇಡ, ನಿನ್ನ ತಪ್ಪನ್ನು ಸರಿಪಡಿಸಿಕೊ.

ಬೊಂಡ

 ಬೊಂಡ

ಹಿಂದಿನ ಕಾಲದಲ್ಲಿ ಮದುವೆಯಾದ ಹೆಣ್ಣನ್ನು ವರನ ಮನೆಗೆ ಕರೆದುಕೊಂಡು ಬಂದು ಆರತಿ ಬೆಳಗಿ ಮನೆಯೊಳಗೆ ಕರೆಸಿ ಕೊಳ್ಳುವುದು. ಅವರಿಬ್ಬರೂ ದೇವರಕೋಣೆಯಲ್ಲಿ ಪ್ರಾರ್ಥಿಸಿ ನಮಸ್ಕರಿಸುವುದು. ಆಮೇಲೆ ಇಬ್ಬರಿಗೂ ಒಟ್ಟಿಗೆ ಕೂರಿಸಿ ಹಾಲು ನೀಡುವುದು. ಅದು ವರನ ತಾಯಿಯಿಂದ ನಿರ್ವಹಣೆಯಾಗುತ್ತದೆ.

ರಾತ್ರಿ ಊಟದ ಸಮಯದಲ್ಲಿ ಕೊಡಿ ಬಾಳೆ ಎಲೆ ಹಾಕಿ ವರನಿಗೆ ವಧುವಿನ ಕೈಯಲ್ಲಿ ವರನ ತಾಯಿ ಊಟ ಬಡಿಸಲು ಹೇಳಬೇಕು. ಊಟವಾದ ಮೇಲೆ ಅದೇ ಎಲೆಯಲ್ಲಿ ವರನ ತಾಯಿ ವಧುವಿಗೆ ಊಟ ಬಡಿಸಬೇಕು. ಆಗ ಅತ್ತೆ ಸೊಸೆಗೆ ಬಹುಮಾನ ಕೊಡುವ ಪದ್ಧತಿಯಿದೆ. ಸಟ್ಟುಗದ ಪಣವು. ಆಮೇಲೆ ಅವಳು ಅದೇ ಎಲೆಯಲ್ಲಿ ಊಟ ಮಾಡುವುದು.

ಆದರೆ ಈಗೀಗ ಅದು ಬೊಂಡ ಕುಡಿಸುವುದರಲ್ಲಿಯೇ ಮುಕ್ತಾಯವಾಗುತ್ತದೆ. ಮದುವೆ ಮಂಟಪದ ಕೆಳಗಿನ ಚಾವಡಿಯಲ್ಲಿ ವರನ ತಾಯಿ ಬೊಂಡವನ್ನು ವಧುವಿನ ಕೈಗೆ ನೀಡಬೇಕು. ಮದುಮಗನು ಪಡುಮುಖವಾಗಿ ಕುಳಿತಿರಬೇಕು. ಮದುಮಗಳು ಬೊಂಡವನ್ನು ಮದುಮಗನ ಕೈಗೆ ಕುಳಿತಲ್ಲಿಗೆ ಕೊಡುವುದು. ಆ ಬೊಂಡವನ್ನು ಆತ ಅರ್ಧ ಕುಡಿದು ಅವಳ ಕೈಗೆ ಕೊಟ್ಟು ಆಕೆ ಕುಡಿಯುವುದು. ಆಗ ಅತ್ತೆ ಅವಳಿಗೆ ಬಹುಮಾನ ಕೊಡುವುದು ಇದೆ. ಅದುವೇ ಸಟ್ಟುಗದ ಪಣವು. ಅಂದರೆ, ಈ ಕ್ಷಣದಿಂದ ವರನ ತಾಯಿಯ ಸ್ಥಾನವನ್ನು ವಧು ವಹಿಸಿಕೊಂಡಿದ್ದಾಳೆ. ಎನ್ನುವಂತಹ ಭಾವಾರ್ಥದಲ್ಲಿ ಈ ಕಾರ್ಯ ನಡೆಯುತ್ತದೆ. ಇದು ಸತ್ಯ.

ಮದುವೆಯೆಂದರೆ, ಒಂದು ಗಂಡು ಮತ್ತು ಒಂದು ಹೆಣ್ಣಿನ ಬಾಳಿನ ಸಂಗಾತಿಯಾಗುವುದೊಂದೇ ಅಲ್ಲ. ಮದುವೆಯೆಂಬುದು ಒಂದು ಪವಿತ್ರ ಧರ್ಮಕಾರ್ಯ. ಜೀವನದ ಕೊನೆಯ ಘಳಿಗೆಯ ವರೆಗೂ ಮರೆಯಲಾರದ ಹಾಗೂ ಮರೆಯಬಾರದ ಒಂದು ದಿವ್ಯ ಅನುಬಂಧ! ಈ ಮಧುರ ಬಾಂಧವ್ಯದ ಅರ್ಥವನ್ನು ಹೇಳುವುದಾದರೂ ಹೇಗೆ? ಯಾರಿಗೆ ಸಾಧ್ಯ? ಶಬ್ದ-ಮಾತುಗಳಿಗೆ ನಿಲುಕದ ಋಣಾನುಬಂಧ!!!

ವಿವಾಹ ಎಂಬುದೊಂದು 'ಧರ್ಮಾವಿಷ್ಕಾರಣ'! ಮಾತಾ ಪಿತೃಗಳು ಹಣ ಲಕ್ಷಾಂತರ ಖರ್ಚು ಮಾಡುವುದೇ ಮುಖ್ಯವಲ್ಲ. ಮಕ್ಕಳಿಗೆ ಮದುವೆಯ ಬಗ್ಗೆ ತಿಳಿವಳಿಕೆ ಕೊಡುವುದು ಬಹಳ ಮುಖ್ಯವಾಗಿರುತ್ತದೆ. ಇಂದಿನ ದಿನಮಾನಸಗಳಲ್ಲಿ ಇದು ಬಹಳ ಮುಖ್ಯವೆನಿಸುತ್ತದೆ.

ಎಲ್ಲರಿಗೂ ಶುಭವಾಗಲಿ.

ಸತ್ಯ - ನ್ಯಾಯ - ಧರ್ಮಕ್ಕೆ ಜಯವಾಗಲಿ.

ವಧು ಬಿಟ್ಟು ಕೊಡುವುದು (ಪೊನ್ನು ಒಚ್ಚಿದ್ ಕೊರ್ಪುನಿ)

 ವಧು ಬಿಟ್ಟು ಕೊಡುವುದು

(ಪೊನ್ನು ಒಚ್ಚಿದ್ ಕೊರ್ಪುನಿ)

ವಧೂವರರ ಹಿರಿಯ ಮುತ್ತೈದೆ ಹೆಂಗಳೆಯರು ಎದುರು-ಬದುರು ನಿಂತು (ವಧುವಿನ ಕಡೆಯವರು ಮೂಡುಮುಖವಾಗಿ) ವಧುವಿನ ಹಿರಿಯರು ವಧುವಿನ ಬಲಕೈಯನ್ನು ವರನ ಕಡೆಯ ಹಿರಿಯರ ಕೈಗಳಿಗಿತ್ತು ಈ ರೀತಿ ಹೇಳಬೇಕು. "ಓ ಎಮ್ಮ ಹೊಸ ಬಂಧುಗಳೇ, ನಮ್ಮ ಈ ಹುಡುಗಿಯನ್ನು ಇಲ್ಲಿತನಕ ಬಹಳ ಕಷ್ಟಪಟ್ಟು, ಪ್ರೀತಿಯಿಂದ, ಮಮತೆಯಿಂದ, ವಿದ್ಯೆ ಬುದ್ಧಿ ಕಲಿಸಿ, ಇಷ್ಟು ದೊಡ್ಡವಳನ್ನಾಗಿ ಬೆಳೆಸಿದ್ದೇವೆ. ಈ ಕನ್ಯಾಮಣಿಯನ್ನು ಇಂದು ನಿಮ್ಮ ಕೈಗಳಿಗೆ ಒಪ್ಪಿಸುತ್ತಿದ್ದೇವೆ. ತಿಳಿದೋ ತಿಳಿಯದೆಯೋ ಅವಳಿಂದಾಗುವ ಯಾವುದೇ ತಪ್ಪು ವಿಚಾರಗಳಿಗೆ ಅನ್ಯಥಾ ಭಾವಿಸದೇ ನೀವು ದೊಡ್ಡ ಮನಸ್ಸಿನಿಂದ ಕ್ಷಮಿಸಿ ನಿಮ್ಮ ಮನೆಯ ಕುಡಿಯೆಂದು ಭಾವಿಸಿ, ನಿಮ್ಮಗಳ ಎಲ್ಲಾ ಆಗುಹೋಗುಗಳ ಬೆಳವಣಿಗೆಯಲ್ಲಿ ಅವಳ ಪಾತ್ರತೆಯನ್ನು ತಿಳಿಸಿ. ಇನ್ನು ಮುಂದಿನ ಅವಳ ಜೀವನ ಉತ್ತರೋತ್ತರ ಅಭಿವೃದ್ಧಿಯತ್ತ ಸಾಗುವಂತೆ ತಾವೆಲ್ಲರೂ ಅವಳಿಗೆ ಮಾರ್ಗದರ್ಶನ ಮತ್ತು ಆಶೀರ್ವಾದ ಮಾಡಿ ಬೆಳಗಿಸುವಿರೆಂಬ ವಿಶ್ವಾಸ, ನಂಬಿಕೆಯಿಂದ ಇಂದು ಈ ಕ್ಷಣದಿಂದ ತಮ್ಮ ಸುಪರ್ದಿಗೆ ಒಪ್ಪಿಸುತ್ತಿದ್ದೇವೆ. ತಮಗಿದೋ ನಮ್ಮೆಲ್ಲರ ಅನಂತಾನಂತ ಪ್ರಣಾಮಗಳು" ಎಂದು ಹೇಳಿ ಅವರ ಕೈಗೆ ಕೊಡುವುದು.

ಅದೇ ಸಮಯದಲ್ಲಿ ವಧುವಿಗೂ ಒಂದು ಮಾತು ಹೇಳಬೇಕು. "ಓ ಎಮ್ಮ ಕುಲದ ಭಾಗ್ಯದ ಸಿರಿಯೇ. ಇಂದಿನವರೆಗೆ ನೀನು ನಮ್ಮ ಮನೆಗೆ ಸರ್ವ ರೀತಿಯಲ್ಲೂ ಪ್ರಾಮಾಣಿಕವಾಗಿ ದುಡಿದಿರುವೆ. ನಿನಗಿದೋ ನಮ್ಮೆಲ್ಲರ ಕೃತಜ್ಞತೆಗಳು. ಇಂದಿನಿಂದ ನಿನಗೆ ನಿನ್ನ ಗಂಡನ ಮನೆಯೂ ಸಹ ನಿನ್ನ ಮನೆಯೇ ಆಗಿದೆ. ಆ ಮನೆಯಲ್ಲಿ ನೀನು ಗಂಡನಿಗೆ ಆದರ್ಶ ಹೆಂಡತಿಯಾಗಿ, ಅತ್ತೆ ಮಾವಂದಿರಿಗೆ ಪ್ರೀತಿಯ ಸೊಸೆಯಾಗಿ, ಗಂಡನ ಒಡಹುಟ್ಟುಗಳಿಗೆ ಆದರದ ಅತ್ತಿಗೆಯಾಗಿ, ಆ ಮನೆಗೆ ಬಂದು ಹೋಗುವವರಿಗೆ ಆದರ್ಶದ ಗೃಹಿಣಿಯಾಗಿ, ನೆರೆಕರೆಯವರಿಗೆ ಸದ್ಗುಣವಂತೆ ಮಾತೆಯಾಗಿ, ಗಂಡನ ಮನೆಗೂ ಕೀರ್ತಿ ತಂದು ನಮ್ಮ ಕುಟುಂಬದ ಹೆಸರನ್ನು ಮೇಲಕ್ಕೆತ್ತಿ ಒಳ್ಳೆಯ ಹೆಸರನ್ನು ಸಂಪಾದಿಸಿ ಕೀರ್ತಿವಂತಳಾಗಿ ಬಾಳು ಮಗಳೇ'' ಎಂದು ಹೇಳಿ ಅವಳ ಕೈಯನ್ನು ಬಿಡಬೇಕು.

ಆಗ ವರನ ಹಿರಿಯರು “ನಿಮ್ಮ ಕುಟುಂಬದ ಈ ಪ್ರೀತಿಯ ಕುಡಿಯನ್ನು ಇನ್ನು ಮುಂದೆ ನಮ್ಮ ಮನೆಯ ಮಗಳಾಗಿ, ಮಹಾಲಕ್ಷ್ಮಿಯಾಗಿ ಬೆಳಗುವಂತೆ ನಮ್ಮೆಲ್ಲರ ದೈವ ದೇವರುಗಳು ಅನುಗ್ರಹಿಸಲಿ, ಆಶೀರ್ವದಿಸಲಿ ಮತ್ತು ಶ್ರೀರಕ್ಷೆ ನೀಡಿ ಹರಸಲಿ ಎಂದು ಪ್ರಾರ್ಥಿಸಿ ಇವಳನ್ನು ಸ್ವೀಕರಿಸುತ್ತಿದ್ದೇವೆ. ಎಲ್ಲರಿಗೂ ಶುಭವಾಗಲಿ” ಎಂದು ಹೇಳಿ ವಧುವನ್ನು ಸ್ವೀಕರಿಸುತ್ತಾರೆ. ಮದುಮಗಳು ಅತ್ತೆಯ ಕಾಲಿಗೆರಗಿ ನಮಸ್ಕರಿಸಬೇಕು.


ಮಂಟಪ ಇಳಿಸುವುದು

 ಮಂಟಪ ಇಳಿಸುವುದು

(ದೊಂಪ ಜಪ್ಪಾವುನಿ)

ಬಂಧು ಬಾಂಧವರ ಅಕ್ಷತೆ ಹಾಕಿ ಆದ ಮೇಲೆ ನವದಂಪತಿಗಳನ್ನು ಮಂಟಪದಿಂದ ಕೆಳಗಿಳಿಸಿ ಕೈಹಿಡಿದು ಹೊರಗಡೆ ಕರೆದುಕೊಂಡು ಬಂದು ಒಂದು ತೆಂಗಿನಮರ ಅಥವಾ ಹಲಸಿನಮರ ಅಥವಾ ಒಂದು ತುಲಸೀ ಗಿಡಕ್ಕೆ ಪ್ರದಕ್ಷಿಣೆ ಬಂದು ಸೂರ್ಯದೇವರಿಗೆ ಹಾಗೂ ಪಂಚಭೂತಗಳಿಗೆ ವಂದಿಸಿ ವಾಪಾಸು ಒಳಗೆ ಪ್ರವೇಶಿಸಬೇಕು.

ಪ್ರವೇಶದ್ವಾರದಲ್ಲಿ ವಧುವಿನ ತಮ್ಮ ದಂಪತಿಗಳ ಕಾಲಿಗೆ ನೀರು ಹಾಕಿ ಸ್ವಾಗತಿಸುವುದು. ಕಾಲಿಗೆ ನೀರು ಹಾಕಿದವರಿಗೆ ಮದುಮಗನು ಬಹುಮಾನ ಕೊಡುವ ಪದ್ಧತಿಯಿದೆ. ಆಮೇಲೆ ಒಳಗಡೆ ಬಂದು ಕೆಳಗಿನ ಚಾವಡಿಯಲ್ಲಿ ಕೂರಿಸುವುದು.



ಕರಿಮಣಿ

 ಕರಿಮಣಿ

ಬಂಟ ಗುರಿಕ್ಕಾರನು ಎಲ್ಲ ಹಿರಿಯರಿಗೆ ಅಕ್ಷತೆ ಕಾಳು ಕೊಡುವುದು. ವಧುವಿನ ತಾಯಿಯ ಕೈಯಲ್ಲಿ ಕರಿಮಣಿ ಸರವನ್ನು ಕೊಟ್ಟು ಕನಿಷ್ಠ ಒಂಬತ್ತು ಮಂದಿ ಮುತ್ತೈದೆಯರ ಕೈಗೆ ಕೊಟ್ಟು ಪ್ರಾರ್ಥಿಸಿ ತರುವಂತೆ ಹೇಳುವುದು.

ತಂದಂತಹ ಕರಿಮಣಿ ಸರವನ್ನು ವಧುವಿನ ತಾಯಿ ಅವರ ಕುಟುಂಬದ ದೈವ ದೇವರುಗಳನ್ನು ಪ್ರಾರ್ಥಿಸಿ ವರನ ತಾಯಿಯ ಕೈಯಲ್ಲಿ ಕೊಡುವುದು. ವರನ ತಾಯಿ ಅವರ ಕುಟುಂಬದ ದೈವ ದೇವರುಗಳನ್ನು ಪ್ರಾರ್ಥಿಸಿ ವರನ ಕೈಯಲ್ಲಿ ಕೊಡುವುದು. ಆಗ ವರ ಅಕ್ಷತೆಕಾಳುಗಳನ್ನು ವಧುವಿನ ತಲೆಗೆ ಹಾಕಿ ದೈವ ದೇವರುಗಳನ್ನು ಪ್ರಾರ್ಥಿಸಿ ಕರಿಮಣಿ ಕಟ್ಟುವುದು. ಆ ಸಂದರ್ಭದಲ್ಲಿ “ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ, ನಾತಿಚರಾಮಿ" ಎಂದು ಹೇಳಿ ತಾಳಿ ಕಟ್ಟಬೇಕು- ಓ ಧರ್ಮಪತ್ನಿ, ಧರ್ಮ ದಾನಾದಿ ವಿಷಯಗಳಲ್ಲಿ, ಧನ ಧಾನ್ಯಾದಿ ಸಂಪತ್ತುಗಳ ವಿಷಯದಲ್ಲಿ, ಶಾರೀರಿಕ ಸುಖ ಸಂತೋಷಗಳಲ್ಲಿ, ದಾನಧರ್ಮದ ಪುಣ್ಯಫಲಗಳ ವಿಷಯಗಳಲ್ಲಿ ಇಂದಿನಿಂದ ನೀನು ನನ್ನ ಸಮಭಾಜನಳು ಆಗಿರುವೆ. ನಿನ್ನನ್ನು ಅತಿಕ್ರಮಿಸಿ ನಾನು ನಡೆಯಲಾರೆ. ನೀನೂ ಸಹ ನನ್ನಂತೆಯೇ ಇರಬೇಕು ಎಂದು ದೈವಸಾಕ್ಷಿಯಾಗಿ ಪ್ರಮಾಣ ಮಾಡಿ ಮಾಂಗಲ್ಯಧಾರಣೆ ಮಾಡುತ್ತಾನೆ.

"ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತು ನಾ, ಕಂಠೇ ಭಾಮಿ ಶುಭಗೇ ತ್ವಂ ಜೀವ ಶರದಶ್ಚತಂ.'

ಓ ಮಾಂಗಲ್ಯವೇ, ನನ್ನ ಜೀವನ ಸೌಭಾಗ್ಯಕ್ಕೆ ಕಾರಣಳಾಗಿರುವ ಈ ನನ್ನ ಧರ್ಮಪತ್ನಿಯ ಕೊರಳಲ್ಲಿ ಅಲಂಕರಿಸುತ್ತಿದ್ದೇನೆ. ನೀನು ಈ ಸೌಭಾಗ್ಯವತಿಗೆ ರಕ್ಷೆಯಾಗಿ ನೂರು ವರ್ಷಗಳ ಕಾಲ ಇರುವಂತಾಗಲಿ. ಸಮಸ್ತ ದೇವತೆಗಳೂ ನಿನ್ನನ್ನು ಆಶೀರ್ವದಿಸಲಿ ಎಂದು ಹೇಳಿ ತಾಳಿ ಕಟ್ಟುತ್ತಾನೆ.

ತಕ್ಷಣ ವಧುವಿನ ಹಣೆಗೆ ತಿಲಕವಿಡುವುದು. ಆಗ ಎಲ್ಲಾ ಹಿರಿಯರು ಅಕ್ಷತೆಕಾಳು ಹಾಕಿ ಹರಸಬೇಕು.

ಮುಂದೆ ಅವರವರ ಕೈಯಲ್ಲಿ ತಂದ ತಾಂಬೂಲವನ್ನು ಅವರವರ ಬಲಕೈಗೆ ಕೊಟ್ಟು ವಧು-ವರರ ಬಲಕೈಗಳನ್ನು ಒಟ್ಟುಗೂಡಿಸಿ, ಬಂಟ ಗುರಿಕ್ಕಾರನು ನವದಂಪತಿಗಳಿಗೆ ಮುಂದಿನ ಜೀವನದ ಬಗ್ಗೆ ಒಂದೆರಡು ಹಿತವಚನಗಳನ್ನು ನೀಡಿ ಹರಸುವುದು. ಆಮೇಲೆ ಅವರೇ ಕೈ ಕೈ ಹಿಡಿದುಕೊಂಡು ಪೀಠಕ್ಕೆ ಮೂರು ಪ್ರದಕ್ಷಿಣೆ ಬರುವುದು. ಆಮೇಲೆ ಸಭಾಸದರಿಗೆ ನಮಸ್ಕರಿಸಿ, ವೇದಿಕೆಯ ಪೀಠದಲ್ಲಿ ಕುಳಿತುಕೊಳ್ಳುವುದು.

ವಧುವಿನ ಬಲಭಾಗದಲ್ಲಿ ವರನು ಕುಳಿತುಕೊಳ್ಳತಕ್ಕದ್ದು.

ಮುಂದೆ ಐದು ಜನ ಮುತ್ತೈದೆಯರಿಂದ ಆರತಿ ಬೆಳಗಿಸಬೇಕು. ಆ ಸಂದರ್ಭದಲ್ಲಿ ನವದಂಪತಿಗಳು ಲಕ್ಷ್ಮೀನಾರಾಯಣ, ಈಶ್ವರ ಪಾರ್ವತಿ, ದೇವಸ್ವರೂಪಿಗಳು ಎಂಬ ಭಾವನೆಯಿಂದ ಅವರಿಗೆ ಆರತಿಯೆತ್ತಬೇಕು.

ಶುಭಮುಹೂರ್ತದ ಶುಭಕಾರ್ಯಗಳು ಮುಗಿದು ನವದಂಪತಿಗಳು ಹೊಸ ಪೀಠದಲ್ಲಿ ಆಸೀನರಾದಾಗ ಅವರನ್ನು ಹೊಸ ಬಾಳಿನ – ಹೊಸ ಬದುಕಿನ ಆಶಾಗೋಪುರದ ಮಜಲಿಗೆ ಕಾಲಿಡಲು ಸನ್ನದ್ಧರಾಗಿರುವ ಇವರ ಪಯಣದ ಹಾದಿಗೆ ಈ 'ಆರತಿ' ದಾರಿದೀಪ ಮತ್ತು ಶ್ರೀರಕ್ಷೆ. ಹಾಗೂ ದೈವದೇವರು ಗಳನ್ನು ಪ್ರಾರ್ಥಿಸಿ ಸಂಕಲ್ಪಿಸಿದ ದಿವ್ಯಜ್ಯೋತಿಯೇ ಆಗಿದೆ.

ಆ ಕ್ಷಣಗಳಲ್ಲಿ ನವದಂಪತಿಗಳು ಪವಿತ್ರರು, ಪಾವನರು, ದೇವಸಮಾನರು ಎಂದು ಭಾವಿಸಿ ಆರತಿ ಮಾಡುವುದು. ಆ ಆರತಿ ಮಾಡುವಾಗ ದೈವ ದೇವರುಗಳ ಸಂಕಲ್ಪಿತ ಶುಭದಾಯಕ ಆರತಿ ಅದಾಗಲೆಂದೇ ಆರತಿ ಮಾಡುವವರ ಪ್ರಾರ್ಥನೆಯಾಗಬೇಕು.

ದೇಸೆ

ಒಂದು ಹರಿವಾಣದಲ್ಲಿ ಒಂಬತ್ತು ಕುಡ್ಡೆ ಕುಚ್ಚಲಕ್ಕಿ, ಐದು ವೀಳ್ಯದೆಲೆ, ಒಂದು ಅಡಿಕೆಯಿಟ್ಟು ವಧು-ವರರ ತಂದೆ ತಾಯಿ ಒಟ್ಟಾಗಿ ಸಭೆಯ ಅಪ್ಪಣೆ ಪಡೆದು ಎದುರು ಭಾಗದ ಟೀಪಾಯಿ ಯಲ್ಲಿಟ್ಟು ನಾಲ್ಕು ಜನರೂ ಒಟ್ಟಿಗೆ ಸೇಸೆ-ದೇಸೆ ಹಾಕಬೇಕು. ಆಗ ವಧು-ವರರು ತಂದೆ-ತಾಯಿ, ಅತ್ತೆ-ಮಾವನ ಕಾಲು ಮುಟ್ಟಿ ನಮಸ್ಕರಿಸುವುದು. ಮತ್ತೆ ಸಭಾಸದರಿಂದ ದೇಸೆ.





ಧಾರಾಕಲಶ

 ಧಾರಾಕಲಶ

ಧಾರಾಕಲಶದಲ್ಲಿ - ಐದು ತೆಂಗಿನ ಹಿಂಗಾರದ ಎಸಳು 

ಐದು ಮಾವಿನ ಎಲೆಗಳು 

ಐದು ಹಲಸಿನ ಎಲೆಗಳು

ಗಂಗಾಜಲ ತುಂಬಿಸಿ, ಒಂದು ನಾಣ್ಯ ಹಾಕಿ, ಅದರ ಮೇಲಿಂದ ಒಂದು ಮುಗುಡದ ತೆಂಗಿನ ಕ್ಯಾ, ಅದರ ಮೇಲೆ ತುದಿಯಲ್ಲಿ ಮಲ್ಲಿಗೆ ಹೂವು ಇಡಬೇಕು.

ಮುಂದಿನ ನಡೆ, ಧಾರಾಕಲಶವನ್ನು ವಧುವಿನ ಮಾವನ ಕೈಯಲ್ಲಿ ಕೊಟ್ಟು, ಸಭಾಂಗಣದಲ್ಲಿ ಸೇರಿದ ಎಲ್ಲಾ ಬಂಧು-ಮಿತ್ರರ ಒಪ್ಪಿಗೆಯನ್ನು ಪಡೆಯಲೋಸುಗ ಸಭೆಗೆ ಹೋಗಿ ಬರುವುದು. ಅವರ ಜೊತೆಯಲ್ಲಿ ಹೆಣ್ಣಿನ ತಂದೆ ತಾಯಿ ಹೋಗಬಹುದು.

ವೇದಿಕೆಯಲ್ಲಿ ಬಂಟ ಗುರಿಕ್ಕಾರನು ವಧು-ವರರ ಕೈಯಲ್ಲಿದ್ದ ತಾಂಬೂಲವನ್ನು ಕೆಳಗಿಳಿಸಿ, ವಧುವಿನ ಕೈಯಲ್ಲಿರುವ ಒಡ್ಡಿ ಉಂಗಿಲವನ್ನು ತೆಗೆಸಿ, ಐದು ವೀಳ್ಯದೆಲೆ, ಒಂದು ಅಡಿಕೆ, ಒಡ್ಡಿ ಉಂಗಿಲ ಸಹಿತ- ವರನ ಎಡಗೈ ಮೇಲೆ ವಧುವಿನ ಎಡಗೈ ಅದರ ಮೇಲೆ ವರನ ಬಲಗೈ ಅದರ ಮೇಲೆ ವಧುವಿನ ಬಲಗ್ಗೆ, ಅದರ ಮೇಲೆ ಬಂಟ ಗುರಿಕ್ಕಾರನ ಕೈಯಲ್ಲಿರುವ ವೀಳ್ಳದರೆ ಅಡಿಕೆ, ಒಡ್ಡಿಂಗಿಲವನ್ನು ಅವರ ಕೈಯ ಮೇಲಿಟ್ಟು ಅದರ ಮೇಲೆ ಧಾರಾಕಲಶ ಇಡಬೇಕು.

ತಕ್ಷಣ ವೇದಿಕೆ ಮೇಲಿರುವ ಎಲ್ಲಾ ಹಿರಿಯರಿಗೆ ಅಕ್ಷತೆ ಕಾಳು ಕೊಡಬೇಕು. ಒಂದು ಹರಿವಾಣವನ್ನು ಧಾರಾಕಲಶದ ಕೈಗಳ ಅಡಿಯಲ್ಲಿ ಕೈಹಿಡಿದ ಬಾವನಿಂದ ಹಿಡಿಸುವುದು.

ಎಲ್ಲ ಹಿರಿಯರು ಗಂಡು ಹೆಣ್ಣನ್ನು ಮುಟ್ಟಿಕೊಂಡಿರಬೇಕು. ಆಗ ಬಂಟ ಗುರಿಕ್ಕಾರನು ಭಾರತೀಯ ಸಂಸ್ಕೃತಿಯ ಪಂಚನದಿ ಗಳನ್ನು ಸಂಕಲ್ಪಿಸಿ, ಪ್ರಾರ್ಥಿಸಿ ಆ ನದಿಗಳ ನೀರು ಈ ಕಲಶದಲ್ಲಿ ತುಂಬಿದೆ ಎಂಬ ಪ್ರಾರ್ಥನೆಯೊಂದಿಗೆ ವಧು-ವರರನ್ನು ಮೂರು ಬಾರಿ ಧಾರಾಕಲಶ ಸಮೇತ ಕುಳಿತುಕೊಳ್ಳಿಸಿ ಎಬ್ಬಿಸುವುದು.

ಹಾಗೆ ಕುಳಿತು ಮೇಲೇರುವಾಗ ಕಲಶದಿಂದ ನೀರು ಅಡಿಕೆ, ಉಂಗುರ, ವೀಳ್ಯದೆಲೆಗಳ ಮೇಲೆ ಧಾರೆಯಾಗಿ ಬೀಳುತ್ತಿರಬೇಕು. ಕೆಳಗೆ ಹೋಗುವಾಗ ಬೀಳಬಾರದು. ಏಳುವಾಗ ಮಾತ್ರ ನೀರು ಬೀಳತಕ್ಕದ್ದು.

ಕುಳಿತು ಏಳುತ್ತಿರುವಾಗ ಬಾವನ ಕೈಯಲ್ಲಿದ್ದ ಹರಿವಾಣ ಕೈಗಳ ಜೊತೆಯಲ್ಲಿಯೇ ಮೇಲೆ ಕೆಳಗೆ ಹೋಗತಕ್ಕದ್ದು.

ಮೂರು ಬಾರಿ ಕುಳಿತು ಎದ್ದಾದ ಮೇಲೆ ಧಾರಾಕಲಶವನ್ನು ತೆಗೆದು ತಾಂಬೂಲ ಮತ್ತು ಉಂಗುರವನ್ನು ಹರಿವಾಣಕ್ಕೆ ಬಿಡಬೇಕು. ಬಂಟ ಗುರಿಕ್ಕಾರನು ಆ ಉಂಗುರವನ್ನು ತೆಗೆದು ವರನ ಕೈಯಲ್ಲಿ ಕೊಡುವುದು. ವರನು ಆ ಉಂಗುರವನ್ನು ವಧುವಿನ ಒಡ್ಡಿ ಉಂಗಿಲದ ಬೆರಳಿಗೆ ತೊಡಿಸಬೇಕು.

ಆಗ ಎಲ್ಲಾ ಹಿರಿಯರು ಕೈಯಲ್ಲಿದ್ದ ಅಕ್ಷತೆಗಳನ್ನು ವಧು-ವರರ ಮೇಲೆ ಹಾಕುವುದು.

ಮದುವೆ ಕಾರ್ಯಕ್ರಮ

 ಮದುವೆ ಕಾರ್ಯಕ್ರಮ

ಮನೆಯಿಂದ ವಧು-ವರರು ಹೊರಡುವ ಮುನ್ನ ಮನೆ ದೇವರಿಗೆ, ದೈವಗಳಿಗೆ ಮತ್ತು ನಾಗದೇವರ ಚಾವಡಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಡಬೇಕು. ಎಲ್ಲಾ ಹಿರಿಯರು ಮುಂಡಾಸು ಕಟ್ಟಿಕೊಳ್ಳುವುದು ಸಂಸ್ಕೃತಿ.

ಮದುವೆ ಸಭಾಭವನದ ಮುಖ್ಯದ್ವಾರದಲ್ಲಿ ಸ್ವಾಗತಿಸುವ ಸಂದರ್ಭ ಕಾಲಿಗೆ ನೀರು ಹಾಕುವುದು ಚಿಕ್ಕಮ್ಮ ಅಥವಾ ಸೋದರತ್ತೆ. ಕೈಹಿಡಿಯುವುದು ಗಂಡಿನ ಸಹೋದರಿ ಮತ್ತು ಬಾವ. ಆರತಿ ಬೆಳಗುವುದು ಹೆಣ್ಣಿನ ಕಡೆಯ ಮುತ್ತೈದೆ ಹೆಂಗಸರಿಂದ.

ವೇದಿಕೆಯಲ್ಲಿ ಕಾಲುದೀಪವನ್ನು ವಧು-ವರರ ಮಾತಾ ಪಿತೃಗಳು ಬಂಟ ಗುರಿಕ್ಕಾರನ ನೇತೃತ್ವದಲ್ಲಿ ಎಲ್ಲಾ ದೈವ-ದೇವರುಗಳನ್ನು ಪ್ರಾರ್ಥಿಸಿ ಬೆಳಗಿಸಬೇಕು. ಅಲ್ಲಿಯೇ ಗಣಪತಿಗೆ ಸುತ್ಯೆ ಇಟ್ಟು ಪ್ರಾರ್ಥಿಸುವುದು. ಹಿರಿಯರು ಮುಂಡಾಸು ಧರಿಸಿರಬೇಕು.

ವಧು-ವರರನ್ನು ಒಟ್ಟಾಗಿಯೂ ಅಥವಾ ಬೇರೆ ಬೇರೆಯಾಗಿಯೂ ವೇದಿಕೆಗೆ ಕರೆದುಕೊಂಡು ಹೋಗಬಹುದು. ಮುಖ್ಯ ದ್ವಾರದಲ್ಲಿ ಆರತಿ ಮಾತ್ರ ಪ್ರತ್ಯೇಕ ಪ್ರತ್ಯೇಕ ಆಗತಕ್ಕದ್ದು. ವರನು ವೇದಿಕೆಯ ಬಲಭಾಗದಲ್ಲಿಯೂ, ವಧುವು ಎಡಭಾಗ ದಲ್ಲಿಯೂ ಕುಳಿತುಕೊಳ್ಳತಕ್ಕದ್ದು. ಅಲ್ಲಿ ವಧುವಿಗೆ ವರನ ಕಡೆಯಿಂದ ಉಡುಗೊರೆ ಕೊಟ್ಟು ಸತ್ಕರಿಸಬಹುದು.

ಆಮೇಲೆ ಎರಡೂ ಕಡೆಯ ಹಿರಿಯರು ವೇದಿಕೆಯಲ್ಲಿ ಸಭಾಂಗಣಕ್ಕೆ ಮುಖ ಮಾಡಿ ನಿಂತು ಬಂಟ ಗುರಿಕ್ಕಾರನ ನೇತೃತ್ವದಲ್ಲಿ ಒಂದು ಶ್ರದ್ಧಾ - ಭಕ್ತಿಪೂರ್ವಕ ಪ್ರಾರ್ಥನೆ ನಡೆಯಬೇಕು.

ಮುಂದಿನ ಕಾರ್ಯಕ್ರಮ ಮೂರು ಪ್ರದಕ್ಷಿಣೆ ಬರುವುದು. ಇಲ್ಲಿ ಮೂರು ಹೆಣ್ಣುಮಕ್ಕಳನ್ನು ಕರೆದು ಒಬ್ಬರ ಕೈಯಲ್ಲಿ ಹಚ್ಚಿದ ಕಾಲುದೀಪ, ಎರಡನೆಯವಳ ಕೈಯಲ್ಲಿ ಒಂಬತ್ತು ಕುಡ್ಲೆ ಕುಚ್ಚಲಕ್ಕಿ, ಒಂದು ತೆಂಗಿನಕ್ಕಾ, ಐದು ವೀಳ್ಯದೆಲೆ, ಒಂದು ಅಡಿಕೆಯಿಟ್ಟ ಹರಿವಾಣ ಕೊಡುವುದು. ಮೂರನೆಯವಳ ಕೈಯಲ್ಲಿ ಒಂದು ಹರಿವಾಣದಲ್ಲಿ ನಲುವತ್ತೆಂಟು ವೀಳ್ಯದೆಲೆ ಹಾಗೂ ಐದು ಅಡಿಕೆಯಿಟ್ಟು ಕೊಡುವುದು. ಆ ಮೂರು ಹೆಣ್ಣುಮಕ್ಕಳ ಹಿಂದಿನಿಂದ ಮದುಮಗನ ಬಾವ ಮದುಮಗನನ್ನು, ಅವನ ಪತ್ನಿ (ಮದುಮಗನ ಸಹೋದರಿ ಕೈಹಿಡಿದ ಬಾವನ ಹೆಂಡತಿ) ಮದುಮಗಳನ್ನೂ ಬಲಗೈ ಹಿಡಿದುಕೊಂಡು ಮೂರು ಪ್ರದಕ್ಷಿಣೆ ಬರಬೇಕು.

ವಧೂವರರು- ವಧು ವರನ ಬಲಭಾಗದಲ್ಲಿ ಇರುವಂತೆ ನಿಲ್ಲಬೇಕು. ವರನ ಎಡಭಾಗದಲ್ಲಿ ಕೈಹಿಡಿದ ಬಾವನೂ, ವಧುವಿನ ಬಲಭಾಗದಲ್ಲಿ ಕೈಹಿಡಿದ ವರನ ಸಹೋದರಿಯೂ ನಿಲ್ಲುವುದು. 

ಆ ಸಮಯದಲ್ಲಿ ಬಂಟ ಗುರಿಕ್ಕಾರನು ಅವರ ಕೈಯಲ್ಲಿ (ಕೈಹಿಡಿದವರ ಕೈಯಲ್ಲಿ) ಹೂವಿನ ಹಾರ ಕೊಡುವುದು. ವೇದಿಕೆಯಲ್ಲಿ ಬಂಟ ಗುರಿಕ್ಕಾರ ಉತ್ತರಾಭಿಮುಖವಾಗಿ ನಿಂತು ವಧುವನ್ನು ಮೂಡು ಮುಖವಾಗಿಯೂ, ವರನನ್ನು ಪಡುಮುಖವಾಗಿಯೂ ಅವನ ಎದುರು ನಿಲ್ಲಿಸಿಕೊಳ್ಳುವುದು.

ವೇದಿಕೆಯಲ್ಲಿರುವ ಎಲ್ಲಾ ಹಿರಿಯರ ಕೈಗೂ ಅಕ್ಷತೆಕಾಳು ಕೊಡಬೇಕು. ತಕ್ಷಣ ಹೂವಿನ ಹಾರಗಳನ್ನು ವಧು-ವರರ ಕೈಗೆ ಹಸ್ತಾಂತರಿಸಬೇಕು.

ಬಂಟ ಗುರಿಕ್ಕಾರ ವಧುವಿನ ಕೈಗೆ ಅಕ್ಷತೆಕಾಳು ಕೊಟ್ಟು ವರನ ತಲೆಗೆ ಅಕ್ಷತೆ ಹಾಕಿ ಹಾರಾರ್ಪಣೆ ಮಾಡಿಸುವುದು.

ಅದೇ ರೀತಿ ವರನಿಗೆ ಅಕ್ಷತೆ ಕಾಳು ಕೊಟ್ಟು ವಧುವಿನ ತಲೆಗೆ ಅಕ್ಷತೆ ಕಾಳು ಹಾಕಿ ಹಾರಾರ್ಪಣೆ ಮಾಡಿಸುವುದು.

ವಧು-ವರರು ಅಕ್ಷತೆ ಹಾಕುವ ಸಂದರ್ಭದಲ್ಲಿ ಅವರವರ ದೈವದೇವರುಗಳಿಗೆ ಮನಸಾ ವಂದಿಸಿ ಪ್ರಾರ್ಥಿಸುವುದು ಬಹಳ ಮುಖ್ಯ. ಆ ಸಮಯದಲ್ಲಿ ಬಂಟ ಗುರಿಕ್ಕಾರನು ಹಿರಿಯರ ಮತ್ತು ಸೇರಿದಂತಹ ಎಲ್ಲ ಬಂಧು ಮಿತ್ರರ ಪರವಾಗಿ ಪ್ರಾರ್ಥಿಸಬೇಕು.

ಆಗ ವೇದಿಕೆಯಲ್ಲಿರುವ ಎಲ್ಲಾ ಹಿರಿಯರು ಅಕ್ಷತೆಕಾಳನ್ನು ವಧು-ವರರಿಗೆ ಹಾಕಿ ಆಶೀರ್ವದಿಸಬೇಕು.

ಮದುವೆ ಮಂಟಪಕ್ಕೆ ಸಾಹಿತ್ಯ

 ಮದುವೆ ಮಂಟಪಕ್ಕೆ ಸಾಹಿತ್ಯ

1. ಕಾಲುದೀಪ – 1 ಅಥವಾ 2

2. ಶೃಂಗಾರ ಕುರ್ಚಿಗಳು - 2

3. ಹೂವಿನ ಹಾರ- 2

4. ದೀಪದ ಎಣ್ಣೆ – 1 ಲೀ

5. ಬತ್ತಿಕಟ್ಟು - 4

6. ಏಕಾರತಿ - 1

7. ಬೆಂಕಿಪೆಟ್ಟಿಗೆ - 1

8. ಆರತಿ ತಟ್ಟೆ- 1

9. ಕುಂಕುಮ – 50 ಗ್ರಾಂ

10. ಬೆಳ್ತಿಗೆ ಅಕ್ಕಿ - 1 ಕೆ.ಜಿ.

11. ಕುಚ್ಚಲಕ್ಕಿ-  2 ಕೆ.ಜಿ.

12. ವೀಳ್ಯದೆಲೆ- 1 ಸೂಡಿ

13. ಅಡಿಕೆ - 12

14. ಕಲಶ ಚೆಂಬು- 1

15. ನೀರಿನ ಚೆಂಬು - 2

16. ತೆಂಗಿನ ಕಾಯಿ (ಮುಗುಡ ಇದ್ದು)- 2

17. ತೆಂಗಿನ ಹಿಂಗಾರ - 1

18. ಹಲಸಿನ ಕುಡಿ- 5

19. ಮಾವಿನ ಕುಡಿ - 5

20. ಟೀಪಾಯ್ - 1

21. ಮಲ್ಲಿಗೆ ಚೆಂಡು - 2

22. ಹರಿವಾಣಗಳು- 3

23. ಎಳನೀರು - 1

24. ಬೊಂಡ ಕುಡಿಯಲು ಸ್ಟ್ರಾ- 2

25. ಎಲ್ಲ ಹಿರಿಯರಿಗೆ ಮುಂಡಾಸು (ಗಂಡಸರಿಗೆ)




ನಿಶ್ಚಿತಾರ್ಥ (ಬದ್ದೊ)

 ನಿಶ್ಚಿತಾರ್ಥ (ಬದ್ದೊ)

ನೇತೃತ್ವ - ಬಂಟ ಗುರಿಕ್ಕಾರ

ನಿಶ್ಚಯದ ಸಾಹಿತ್ಯ :

1. ಕಾಲುದೀಪ - 1

2. ಏಕಾರತಿ - 1

3. ಎಳ್ಳೆಣ್ಣೆ- 100 ಮಿ.ಲೀ.

4. ಬತ್ತಿಕಟ್ಟು- 1

5. ಬ್ಲೇಡು ಅಥವಾ ಕತ್ತರಿ- 1

6. ಬೆಂಕಿಪೆಟ್ಟಿಗೆ- 1

7. ತೆಂಗಿನಕಾಯಿ- 1

8. ಬೆಳ್ತಿಗೆ – 1 ಕೆ.ಜಿ.

9. ವೀಳ್ಯದೆಲೆ-  1 ಸೂಡಿ

10. ಅಡಿಕೆ - 3

11. ಕುಂಕುಮ ಕರಡಿಗೆ - 2

12. ಮಲ್ಲಿಗೆ ಚೆಂಡು - 3

13. ಹರಿವಾಣ- 3

14. ಟೀಪಾಯಿ- 1

15. ಹಿರಿಯರಿಗೆಲ್ಲಾ ಮುಂಡಾಸು


ನಿಶ್ಚಯದ ವೇದಿಕೆಗೆ ಗಂಡು ಮತ್ತು ಹೆಣ್ಣನ್ನು ಕರೆತರುವುದು ಅವರವರ ಹಿರಿಯ ಮುತ್ತೈದೆ ಹೆಂಗಳೆಯರು, ಗಂಡಿನ ಬಲಭಾಗದಲ್ಲಿ ಹೆಣ್ಣನ್ನು ಕೂರಿಸುವುದು.

ನಿಶ್ಚಿತಾರ್ಥಕ್ಕೆ ನಿಲ್ಲುವ ದಿಕ್ಕುಗಳು :

ಬಂಟ ಗುರಿಕ್ಕಾರ - ಉತ್ತರಾಭಿಮುಖವಾಗಿ

ವಧುವಿನ ಹಿರಿಯರು-  ಪೂರ್ವಾಭಿಮುಖವಾಗಿ

ವರನ ಹಿರಿಯರು - ಪಶ್ಚಿಮಾಭಿಮುಖವಾಗಿ

ಎಲ್ಲಾ ಹಿರಿಯರನ್ನು ವೇದಿಕೆಗೆ ಆಹ್ವಾನಿಸುವುದು. ಮಾತಾ ಪಿತೃಗಳಿಂದ ದೀಪ ಬೆಳಗಿಸುವುದು. ದೀಪ ಬೆಳಗಿಸುವಾಗ ಪೂರ್ವದಿಂದ ಆರಂಭಿಸಿ ಪ್ರದಕ್ಷಿಣಾಕಾರವಾಗಿ ಉರಿಸಬೇಕು.

ಗಣಪತಿ ಸ್ತುತಿ : ಸುತ್ಯೆ ಇಡುವುದು

ಪ್ರಾರ್ಥನೆ : ಗುರುಪೀಠಕ್ಕೆ, ಕುಲದೇವರಿಗೆ, ಕುಲದೈವಕ್ಕೆ

ಗುರು ಕಾರ್ನವರಿಗೆ : ಸೀಮೆ ದೇವರಿಗೆ, ಗ್ರಾಮ ದೇವರಿಗೆ

ಗಂಡು ಹೆಣ್ಣಿನ ತಂದೆ ತಾಯಂದಿರ ಕುಟುಂಬದ ನಾಗಶಕ್ತಿಗಳು, ದೈವ ದೈವತಾ ಶಕ್ತಿಗಳು, ದೇವ ದೇವತಾ ಶಕ್ತಿಗಳು ಹಾಗೂ ಸ್ಥಳ ಸಾನಿಧ್ಯಕ್ಕೆ ಕ್ಷಮಾಪಣೆ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಬೇಕು.

ಗಂಡು ಹೆಣ್ಣಿನ ಪರಿಚಯವನ್ನು ಸಭೆಯ ಮುಂದಿಡುವುದು. ಎರಡು ಹರಿವಾಣಗಳಲ್ಲಿ 5+5 ವೀಳ್ಯದೆಲೆ, 1+1 ಅಡಿಕೆ, 1+1 ಕುಂಕುಮದ ಕರಡಿಗೆ, 1+1 ಮಲ್ಲಿಗೆ ಚೆಂಡು ಇವುಗಳನ್ನು ಇಟ್ಟು ಟೀಪಾಯಿ ಮೇಲಿಡತಕ್ಕದ್ದು.

ತಾಂಬೂಲದ ಒಂದು ಹರಿವಾಣವನ್ನು ಹೆಣ್ಣಿನ ಹಿರಿಯರ ಕೈಯಲ್ಲಿ ಇಟ್ಟು, ಅದರ ಮೇಲೆ ಗಂಡಿನ ಹಿರಿಯರು ಕೈಗಳನ್ನಿಟ್ಟು ಗಂಡಿನ ಹಿರಿಯರು ಈ ಮಾತುಗಳನ್ನು ಹೇಳಬೇಕು.

ನಮ್ಮ ಆತ್ಮೀಯ ಬಂಧುಗಳೇ,

…………………………………. ಇಂತಹವರ ಪುತ್ರಿ (ತಂದೆ ತಾಯಿಯ ಹೆಸರು)

…………………………………..ಇಂತಹವರ ಮೊಮ್ಮಗಳು (ಅಜ್ಜನ ಹೆಸರು)

…………………………………..ಇಂತಹವರ ಸೊಸೆ (ಸೋದರಮಾವನ ಹೆಸರು)

ಚಿ|ಸೌ| …………………………….. (ಹೆಣ್ಣಿನ ಹೆಸರು)ಯನ್ನು

……………………………………….ಇಂತಹವರ ಪುತ್ರ (ತಂದೆ ತಾಯಿ ಹೆಸರು)

…………………………………………ಇಂತಹವರ ಮೊಮ್ಮಗ (ಅಜ್ಜನ ಹೆಸರು)

………………………………………….ಇಂತಹವರ ಅಳಿಯ (ಸೋದರಮಾವನ ಹೆಸರು)

……………………………………………(ಗಂಡಿನ ಹೆಸರು) ಇವನಿಗೆ

ಗೌರವಾದರಗಳಿಂದ ಪ್ರೀತಿಪೂರ್ವಕ ಆಶೀರ್ವಾದ ಮಾಡಿ, ಧಾರೆಯೇರಿಸಿ ಮದುವೆ ಮಾಡಿಕೊಡುವುದಕ್ಕೆ ತಾವುಗಳು ತಯಾರಿದ್ದರೆ ನಾವುಗಳು ಗಂಡಿನ ಜವಾಬ್ದಾರಿಯುತ ಹಿರಿಯರಾಗಿ ಅದೇ ರೀತಿಯ ಗೌರವಾದರಗಳಿಂದ ಪ್ರೀತಿಪೂರ್ವಕ ಆಶೀರ್ವಾದ ಮಾಡಿ ಧಾರೆಯೇರಿಸಿ ಮದುವೆ ಮಾಡಿ ಸ್ವೀಕಾರ ಮಾಡಿಕೊಳ್ಳಲು ತಯಾರಿದ್ದೇವೆ ಎನ್ನುವ ಮಾತನ್ನು ಪಂಚಭೂತಗಳ ಸಾಕ್ಷಿಯಾಗಿ, ನಾವು ನಂಬಿಕೊಂಡು ಬಂದಿರುವಂತಹ ದೈವದೇವರುಗಳ ಸಾಕ್ಷಿಯಾಗಿ ಕೊಡುತ್ತಿದ್ದೇವೆ. ಈ ಮಾತಿಗೆ ನಾವು ಬದ್ಧರು-ಬದ್ಧರು-ಬದ್ಧರು.

ಆ ಹರಿವಾಣವನ್ನು ಹೆಣ್ಣಿನ ಕಡೆಯವರು ಇಟ್ಟುಕೊಳ್ಳುವುದು. ಈಗ ಮತ್ತೊಂದು ಹರಿವಾಣವನ್ನು ಗಂಡಿನ ಹಿರಿಯರ ಕೈಯಲ್ಲಿಟ್ಟು ಅದರ ಮೇಲೆ ಹೆಣ್ಣಿನ ಹಿರಿಯರು ಕೈಯಿಟ್ಟು ಈ ಮಾತುಗಳನ್ನು ಹೇಳಬೇಕು.

ಆತ್ಮೀಯ ಬಂಧುಗಳೇ,

ನಿಮ್ಮಗಳ ಕೋರಿಕೆಯಂತೆ

……………………………………. ಇಂತಹವರ ಪುತ್ರ (ತಂದೆ ತಾಯಿಯ ಹೆಸರು)

…………………………………….. ಇಂತಹವರ ಮೊಮ್ಮಗ (ಅಜ್ಜನ ಹೆಸರು)

………………………………………. ಇಂತಹವರ ಅಳಿಯ (ಸೋದರಮಾವನ ಹೆಸರು)

ಚಿ|……………………………………..  (ಹೆಸರು) ಎಂಬ ವರನಿಗೆ

…………………………………. ಇಂತಹವರ ಪುತ್ರಿ (ತಂದೆ ತಾಯಿಯ ಹೆಸರು)

…………………………………………. ಇಂತಹವರ ಮೊಮ್ಮಗಳು (ಅಜ್ಜನ ಹೆಸರು)

………………………………………… ಇಂತಹವರ ಸೊಸೆ (ಸೋದರಮಾವನ ಹೆಸರು)

ಚಿ|ಸೌ| …………………………………………  (ಹೆಸರು) ಎಂಬ ವಧುವನ್ನು

ಗೌರವಾದರಗಳಿಂದ ಪ್ರೀತಿಪೂರ್ವಕ ಆಶೀರ್ವಾದ ಮಾಡಿ, ಧಾರೆಯೇರಿಸಿ ಮದುವೆ ಮಾಡಿ ಕೊಡಲು ಹೆಣ್ಣಿನ ಜವಾಬ್ದಾರಿಯುತ ಹಿರಿಯರಾಗಿ ನಾವು ತಯಾರಿದ್ದೇವೆ ಅನ್ನುವಂತಹ ಮಾತುಗಳನ್ನು ಪಂಚಭೂತಗಳ ಸಾಕ್ಷಿಯಾಗಿ ನಾವು ನಂಬಿಕೊಂಡು ಬಂದಿರತಕ್ಕಂತಹ ದೈವದೇವರುಗಳ ಸಾಕ್ಷಿಯಾಗಿ ಕೊಡುತ್ತಿದ್ದೇವೆ. ಈ ಮಾತಿಗೆ ನಾವುಗಳೆಲ್ಲರೂ ಬದ್ಧರು-ಬದ್ಧರು-ಬದ್ಧರು.

ಗಂಡಿನ ಹಿರಿಯರು ಹಾಗೂ ಹೆಣ್ಣಿನ ಹಿರಿಯರು ಹರಿವಾಣ ದಲ್ಲಿರುವ ಕುಂಕುಮ ಕರಡಿಗೆಯಿಂದ ಗಂಡು-ಹೆಣ್ಣಿಗೆ ಕುಂಕುಮ ಹಣೆಗಿಟ್ಟು ಆಶೀರ್ವದಿಸಬೇಕು. ಗಂಡು-ಹೆಣ್ಣು ಎಲ್ಲಾ ಹಿರಿಯರ ಆಶೀರ್ವಾದ ಪಡೆಯುವುದು.

ಹರಿವಾಣದಲ್ಲಿರುವ ಸಾಹಿತ್ಯಗಳು ಅವರವರ ಮನೆಯ ದೇವರ ಪೀಠಕ್ಕೆ ಹೋಗತಕ್ಕದ್ದು. ಮದುವೆಯ ಮಾರನೆಯ ದಿನ ದೇವರ ಪೀಠದಿಂದ ಅದನ್ನು ತೆಗೆದು ವಿಸರ್ಜಿಸುವುದು.







ಬಂಟ ಗುರಿಕ್ಕಾರನ ಮಾರ್ಗಸೂಚಿ

 ಬಂಟ ಗುರಿಕ್ಕಾರನ ಮಾರ್ಗಸೂಚಿ

1. ವೇದಿಕೆಯ ದಿಕ್ಕುಗಳನ್ನು ತಿಳಿದುಕೊಳ್ಳಿ

2. ಮುಹೂರ್ತ ತಿಳಿದುಕೊಳ್ಳಿ

3. ವೇದಿಕೆಗೆ ಬರಿಗಾಲಿನಿಂದ ಹೋಗಬೇಕು

4. ಸಭಿಕರಿಗೆ ವಂದನೆ

5. ವೇದಿಕೆಯಲ್ಲಿರುವ ಸಾಹಿತ್ಯಗಳಿಗೆ ವಂದನೆ

6. ಗಂಡು-ಹೆಣ್ಣಿನ ಹಿರಿಯರನ್ನು ವೇದಿಕೆಗೆ ಆಮಂತ್ರಿಸುವುದು

7. ವೇದಿಕೆಯಲ್ಲಿರುವ ಎಲ್ಲಾ ಹಿರಿಯ ಗಂಡಸರಿಗೆ ಮುಂಡಾಸು

8. ದೀಪ ಬೆಳಗಿಸುವುದು : ಗಂಡು-ಹೆಣ್ಣಿನ ಮಾತಾಪಿತರು ಹಾಗೂ ಹಿರಿಯರಿಂದ

9. ಗಣಪತಿ ಪ್ರತಿಷ್ಠಾಪನೆ - ಹಿರಿಯರಿಂದ

10. ಮುಖ್ಯದ್ವಾರದಲ್ಲಿ ವಧು-ವರರನ್ನು ಕಾಲಿಗೆ ನೀರು ಕೊಟ್ಟು ಸ್ವಾಗತ

11. ಆರತಿ

12. ವೇದಿಕೆಯ ಬಲಭಾಗದಿಂದ ಪ್ರವೇಶ

13. ಮದುಮಗಳಿಗೆ ಉಡುಗೊರೆ

14. ಪ್ರಾರ್ಥನೆ - ಎಲ್ಲರೂ ಒಟ್ಟು ಸೇರಿ

15. ವಧೂ-ವರರ ಪ್ರದಕ್ಷಿಣೆ

16. ಹಾರ ಬದಲಾವಣೆ

17. ಧಾರಾಕಲಶ ಎತ್ತಿ ಕೊಡುವುದು

18. ಧಾರೆ ಏರಿಸುವುದು

19. ಉಂಗುರ (ಒಡ್ಡಿ ಉಂಗಿಲ) ಧಾರಣೆ

20. ಕರಿಮಣಿ ಕಟ್ಟುವುದು

21. ತಿಲಕವಿಟ್ಟು ಒಂದು ಮಾಡುವುದು

22. ನವ ದಂಪತಿಗಳಿಂದ ಮೂರು ಪ್ರದಕ್ಷಿಣೆ

23. ಸಭೆಗೆ ವಂದಿಸಿ ಆಸೀನರಾಗುವುದು

24. ಆರತಿ-  3 5, 7, 9 ಜನ ಮುತ್ತೈದೆಯರಿಂದ

25. ಮಾತಾ-ಪಿತರಿಂದ ದೇಸೆ

26. ಸಭಿಕರಿಂದ ಶುಭ ಕೋರಿಕೆ

27. ವೇದಿಕೆಯಿಂದ ಇಳಿಸುವುದು (ದೊಂಪ ಜಪ್ಪಾವುನಿ)

28. ದ್ವಾರದಲ್ಲಿ ಕಾಲಿಗೆ ನೀರು ಕೊಟ್ಟು ಬರಮಾಡಿಕೊಳ್ಳುವುದು

29. ಕೆಳಗಿನ ಚಾವಡಿಯಲ್ಲಿ ಕೂರಿಸಿ ಹೆಣ್ಣು ಬಿಟ್ಟುಕೊಡುವುದು (ಪೊನ್ನು ಒಚ್ಚಿದ್ ಕೊರ್ಪುನಿ)

30. ಬೊಂಡ ಕೊಡುವುದು

31. ಉಡುಗೊರೆ ಕೊಡುವುದು : ವಧುವಿಗೆ ವರನ ತಾಯಿ ಕೊಡುವ ಉಡುಗೊರೆ (ಸಟ್ಟುಗದ ಪಣವು)

32. ಎಲ್ಲ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು.

ಪ್ರಸ್ತಾವನೆ

 ಪ್ರಸ್ತಾವನೆ

ಮಾನವರಿಗೆ ಮದುವೆ ಒಂದು ಸಾಮಾಜಿಕ ಸದಾಚಾರ, ಮನುಷ್ಯನಿಗೆ ನಾಗರೀಕತೆ ತಿಳಿಯದ ಆ ಕಾಲಘಟ್ಟದಲ್ಲಿ ಸ್ತ್ರೀ-ಪುರುಷರ ಮಧ್ಯೆ ಮದುವೆಯೆನ್ನುವುದೇ ಇರಲಿಲ್ಲ. ಸಾಮಾನ್ಯ ಪ್ರಾಣಿಗಳಂತೆ ಇಚ್ಛಾ ಕಾಮುಕರಾಗಿ ಇರುತ್ತಿದ್ದರು. ಮಕ್ಕಳನ್ನು ಸಾಕುವುದು, ಬೆಳೆಸುವುದು ಕೇವಲ ಹೆಂಗಸರ ಕೆಲಸವಾಗಿತ್ತು. ಹೆಣ್ಣನ್ನು ಸಂಭೋಗ ಸುಖಕ್ಕೋಸ್ಕರ ಮಾತ್ರ ಗಂಡಸು ಉಪಯೋಗಿಸುತ್ತಿದ್ದ ಕಾಲವದು. ಹೆಣ್ಣನ್ನು ಬಲಾತ್ಕಾರವಾಗಿ ಅನುಭವಿಸುತ್ತಿದ್ದರು. ಪುರುಷರು ಹೆಣ್ಣಿಗಾಗಿ ತಮ್ಮ ತಮ್ಮೊಳಗೆ ಕಾದಾಡುತ್ತಿದ್ದರು. ಪುರುಷರ ಜೊತೆ ಕಾದಾಡುವ ಶಕ್ತಿಯಿಲ್ಲದ ಹೆಣ್ಣು ಅಸಹಾಯಕಳಾಗಿ ಪುರುಷರ ಕಾಮದಾಹಕ್ಕೆ ಬಲಿಯಾಗು ತ್ತಿದ್ದಳು. ಹೆಣ್ಣಿಗೆ ರಕ್ಷಣೆಯೇ ಇರುತ್ತಿರಲಿಲ್ಲ. ಇದನ್ನು ಅರಿತ ಋಷಿ ಸಮೂಹ ಒಂದು ಗಂಡಿಗೆ ಒಂದು ಹೆಣ್ಣು ಎಂಬಂತೆ ಕಟ್ಟಳೆಯನ್ನು ವಿಧಿಸಿದರು. ಅಲ್ಲಿಂದ ಹೆಣ್ಣಿಗೆ ರಕ್ಷಣೆಯ ಹಾದಿ ಸುಗಮವಾಯಿತು. ಸುಖಜೀವನಕ್ಕೆ ಹೆಣ್ಣು ಪಾದಾರ್ಪಣೆ ಮಾಡಿದಳು.

ಸ್ತ್ರೀಯರನ್ನು ಪರಪುರುಷರ ಕಾಮಲಾಲಸೆಯಿಂದ ಕಾಪಾಡು ವುದಕ್ಕಾಗಿ ಆ ಸಮಯದಲ್ಲಿ ಪಾತಿವ್ರತ್ಯ ಎಂಬ ಏಕಪುರುಷ ನಿಯಮವನ್ನು ಮಾಡಿದರು. ಈ ನಿಯಮದಿಂದಾಗಿ ಸ್ತ್ರೀಯರನ್ನು  ಮನೆಯಲ್ಲಿ ಬಿಟ್ಟು ಪುರುಷ ಆಹಾರ ಸಂಪಾದನೆ ಮಾಡಿಕೊಂಡು ಬಂದು ರಕ್ಷಣೆ ನೀಡುವಂತಾಯಿತು. ಮುಂದೆ ಇದಕ್ಕೆ ಋಷಿಮುನಿ ಗಳು ಶಾಸ್ತ್ರೀಯತೆ ಕಲ್ಪಿಸುವುದಕ್ಕಾಗಿ ವಿವಾಹವೆಂಬ ಧಾರ್ಮಿಕ ವಿಧಿಯನ್ನು ಮಾಡಿದರು. ಅದೇ ಸಮಯದಲ್ಲಿ ಪುರುಷರನ್ನು ಪರಸ್ತ್ರೀ ವ್ಯಾಮೋಹದಿಂದ ದೂರವಿಡುವ ನಿಟ್ಟಿನಲ್ಲಿ 'ಏಕಪತ್ನಿ' ಧರ್ಮವನ್ನು ನಿರ್ದೇಶಿಸಿದರು.

ಸ್ತ್ರೀ ಪುರುಷರಿಗೆ ವಿವಾಹವೆನ್ನುವುದು ಮರ್ಯಾದೆ-ಗೌರವ-ಸಂಪ್ರದಾಯ ಹಾಗೂ ಧಾರ್ಮಿಕ ವಿಧಿ. ಇದನ್ನು ಎಲ್ಲರೂ ಗೌರವಿಸಬೇಕು. ಇತ್ತೀಚೆಗಿನ ನವೀನ ನಾಗರೀಕತೆಯ ಹುಚ್ಚಿನಲ್ಲಿರುವ ಕೆಲವಾರು ಯುವಪೀಳಿಗೆ ಮದುವೆಯಿಲ್ಲದೇನೇ ಸ್ಟೇಚ್ಛಾಕಾಮಸುಖಗಳನ್ನು ಅನುಭವಿಸುತ್ತಿರುವುದನ್ನು ಪೇಟೆ-ಪಟ್ಟಣಗಳಲ್ಲಿ ಅಸಂಖ್ಯಾತವಾಗಿ ನಾವುಗಳು ಕಾಣುತ್ತಿದ್ದೇವೆ! ಇದು ತಪ್ಪು! ಇದು ಅನಾಗರಿಕ! ಇದು ಅಸಂಸ್ಕೃತಿ! ಇದು ಅರಾಜಕ! ಇದು ಅಧರ್ಮ! ಇದು ನೀಚ ಪ್ರವೃತ್ತಿ!

ಬೇರೆ ಕೆಲವು ದೇಶಗಳಲ್ಲಿ ವಿವಾಹ ವಿಚ್ಛೇದನವನ್ನು ಬಹಳ ಸುಲಭವಾಗಿ ಪಡೆಯುತ್ತಾರೆ. ತಕ್ಷಣ ಇನ್ನೊಂದು ಮದುವೆ ಯಾಗುತ್ತಾರೆ. ನಮ್ಮ ದೇಶದಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ.

ಭಾರತೀಯ ಸಾಂಸಾರಿಕ ಧರ್ಮದಲ್ಲಿ ಮಕ್ಕಳನ್ನು ದೊಡ್ಡ ಆಸ್ತಿಯನ್ನಾಗಿ ಪರಿಗಣಿಸಿದೆ. ಹಿಂದಿನ ಕಾಲದಲ್ಲಿ ಹೆಚ್ಚು ಮಕ್ಕಳನ್ನು ಹೆತ್ತ ಸ್ತ್ರೀಯರನ್ನು ಅಥವಾ ಮಾತೆಯರನ್ನು ದೇವತೆಗಳೆಂದು ಭಾವಿಸಿ ಗೌರವಿಸುತ್ತಿದ್ದರು. ನಮ್ಮ ಸಂಸ್ಕೃತಿಯಲ್ಲಿ ತಂದೆ-ತಾಯಂದಿರು ದೇವತಾ ಸಮಾನರು. ಮಕ್ಕಳೇ ತಂದೆ ತಾಯಂದಿರ ದೊಡ್ಡ ಸಂಪತ್ತೆಂದು ಪರಿಗಣಿಸಲಾಗಿದೆ. ನಮ್ಮದು ಧರ್ಮ ಸಂಸ್ಕೃತಿ. ಭಾರತೀಯ ವಿವಾಹ ಧರ್ಮದಲ್ಲಿ ರಕ್ಷಣೆಯಿದೆ, ಹಿರಿಯರ ಮನ್ನಣೆಯಿದೆ, ಗುರುಹಿರಿಯರ ಆಶೀರ್ವಾದವಿದೆ. ಬಂಧುಮಿತ್ರರ ಶುಭಕಾಮನೆಗಳು ಇವೆ. ಎಲ್ಲಕ್ಕಿಂತ ಮಿಗಿಲಾಗಿ ನಾವು ಹಾಗೂ ನಮ್ಮ ಹಿರಿಯರು ನಂಬಿಕೊಂಡು ಬಂದಿರತಕ್ಕಂತಹ ನಾಗಶಕ್ತಿ -ದೈವಶಕ್ತಿ ದೇವತಾ ಶಕ್ತಿಗಳ ಅನುಗ್ರಹ, ದೈವತಾಶಕ್ತಿ - ದೇವಶಕ್ತಿ ಶ್ರೀರಕ್ಷೆಯಿದೆಯೆಂಬ ಸಾವಿರಾರು ವರ್ಷಗಳ ನಂಬಿಕೆ ನಮ್ಮದಾಗಿದೆ. ಇದು ಸತ್ಯ.

ಕೆಲವರು ಹೆಣ್ಣನ್ನು ಅಡುಗೆ ಮನೆಗೆ ಸೀಮಿತ ಮಾಡಬಾರದು, ಹೆಣ್ಣೆಂದರೆ ಮಕ್ಕಳನ್ನು ತಯಾರಿಸುವ ಯಂತ್ರವಲ್ಲ ಎಂದು ಹೇಳುತ್ತಾರೆ. ನಿಜ! ಗಂಡಸು ಎಂದರೆ ಶ್ರಮವಹಿಸಿ ಎಲ್ಲರನ್ನೂ ಸಾಕುವ ಆಳೇ? ಈ ಪ್ರಶ್ನೆ ಮೂಡುತ್ತದೆ.

ಸಂಸಾರವೆಂದರೆ ಮೇಲು ಕೀಳು ಎಂಬ ಭಾವನೆಗಳೇ ಬರಬಾರದು. ಸಹಕಾರ ಮನೋಭಾವ ಇರಬೇಕೇ ಹೊರತು ಸ್ಪರ್ಧಾ ಮನೋಭಾವ ಇರಬಾರದು. ಇದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕಾಗಿದೆ. ಹೆಣ್ಣು+ಗಂಡು ಒಬ್ಬರಿಗೊಬ್ಬರು ಹೊಂದಿಕೊಂಡು ಹೋದಾಗ ಮಾತ್ರ ಸಂಸಾರ ಸುಖ ಸಂತೋಷದಿಂದ ಕೂಡಿರಲು ಸಾಧ್ಯವಾಗುತ್ತದೆ.

ವಿವಾಹವು ಮಹೋನ್ನತವಾದ ಅನುಬಂಧಗಳ ಬೆಳವಣಿಗೆಗೆ, ವಿಶ್ವಾಸಾರ್ಹವಾದ ಬಂಧನಕ್ಕೆ, ಕುಟುಂಬ ಸಮೈಕ್ಯತಾ ಭಾವನೆಗೆ, ಜಾತಿಯ ಪುರೋಭಿವೃದ್ಧಿಗೆ, ಆರೋಗ್ಯವಂತವಾದ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ. ಇದನ್ನೆಲ್ಲ ಯೋಚಿಸಿಯೇ ನಮ್ಮ ಪೂರ್ವಜರು ಪ್ರಾಚೀನ ಕಾಲದಿಂದಲೂ ವಿವಾಹ ವ್ಯವಸ್ಥೆಯನ್ನು ಆರಂಭ ಮಾಡಿದರು. ಸದಾಲೋಚನೆ, ದೂರದೃಷ್ಟಿಗಳೇ ವಿವಾಹಕ್ಕೆ ನಾಂದಿಯಾಗಿದೆ. ಈ ವ್ಯವಸ್ಥೆ ಇಲ್ಲದಿರುತ್ತಿದ್ದರೆ ಈಗಿರುವ ನಾಗರೀಕತೆಯನ್ನು ನಾವು ಕಾಣುತ್ತಿರಲಿಲ್ಲವೇನೋ? ಪಶು ಪಕ್ಷಿಗಳಂತೆಯೇ ಇರಬೇಕಾಗಿತ್ತೇನೋ?

ವಿವಾಹವೆಂದರೆ, ಸ್ತ್ರೀ ಪುರುಷರಿಬ್ಬರಲ್ಲಿ ನಡೆಯುವ ಸಂಸ್ಕಾರ, ಕಾಡಲ್ಲೇ ಹುಟ್ಟಿದ ಮಾವಿನಕಾಯಿಗೆ ಸಮುದ್ರದಲ್ಲಿ ಹುಟ್ಟಿದ ಉಪ್ಪಿನ ಜೊತೆಯಾಗುವ ವೈವಿಧ್ಯಮಯ ಬೆಸುಗೆ! ಎಲ್ಲೋ ಹುಟ್ಟಿದ ಮಾಮರವು ಎಲ್ಲೋ ಹುಟ್ಟಿದ ಕೋಗಿಲೆಗೆ ಆಶ್ರಯದ ಅನುಮೋದನೆ ನೀಡುವ ಸುಮಧುರ ಬಾಂಧವ್ಯವೇ ವಿವಾಹವೆನ್ನಬಹುದು.

ಯಾವುದೇ ಒಂದು ಸಂಪ್ರದಾಯ-ಸಂಸ್ಕೃತಿಗಳು ಸಮಾಜದ ಒಳಿತಿಗೆ ಹೊರತು ಅವನತಿಗೆ ಅಲ್ಲವೆಂಬುದನ್ನು ನಾವು ತಿಳಿದು ಕೊಂಡು ಬದುಕುವುದು ಮುಖ್ಯ. ಹಿರಿಯರು ನಡೆದುಕೊಂಡು ಬಂದ ಹಾದಿ, ಹೇಳಿಕೊಟ್ಟ ಪಾಠ. ನಾವು ಅವರಿಂದ ತಿಳಿದುಕೊಂಡ ವಿಚಾರಗಳು- ಇವೆಲ್ಲವನ್ನೂ ನಮ್ಮ ಜೀವನದಲ್ಲಿ ಕಾಲಕಾಲಕ್ಕೆ ತಕ್ಕಂತೆ ಅಳವಡಿಸಿಕೊಂಡು ಬಂದಾಗ ಅದು ಮುಂದಿನ ಪೀಳಿಗೆಗೂ ಒಂದು ಸಂದೇಶವಾಗಿ ರವಾನೆಯಾಗುತ್ತದೆ. ಸಮಾಜಕ್ಕೆ ಅದರಿಂದ ಒಳಿತಾದರೆ ಮಾತ್ರ ಅದನ್ನು ಸ್ವೀಕರಿಸುತ್ತಾರೆ. ನಮ್ಮ ಅನುಭವವೇ ನಮಗೆ ಪ್ರಮುಖ ಆಧಾರವಾಗಿ ಮುಂದೆ ನಿಂತಾಗ ಅದರ ಆನಂದವೇ ಪರಮಾನಂದ! ಅದೇ ಸತ್ಯ.

ಹಿಂದಿನ ಕಾಲದಲ್ಲಿ ಹೆಣ್ಣು-ಗಂಡು ಮದುವೆಗೆ ಮುಂಚಿತವಾಗಿ ಸರಿಯಾಗಿ ಮುಖ ಮುಖ ನೋಡಿಕೊಳ್ಳುವುದು ಮದುವೆ ಮಂಟಪದಲ್ಲೋ ಅಥವಾ ಮೊದಲ ರಾತ್ರಿ ದಿನವೋ ಆಗಿರ ಬಹುದು. ಕಾರಣ ಹಿರಿಯರು ತೀರ್ಮಾನಿಸಿದಂತೆ ನಡೆಯುತ್ತಿತ್ತು. ಹಿರಿಯರ ಮಾತಿಗೆ ಮನ್ನಣೆಯಿತ್ತು. ಹಿರಿಯರ ಮಾತೇ ಅಂತಿಮ. ಹಿರಿಯರ ಮಾತುಗಳಿಗೆ ಗೌರವಾದರಗಳಿದ್ದವು. ಇತ್ತೀಚಿನ ಜನಮಾನಸದಲ್ಲಿ ಹುಡುಗಿ ಮತ್ತು ಹುಡುಗನೇ ಆಯ್ಕೆ ಮಾಡುವಲ್ಲಿಗೆ ಬಂದು ಮುಟ್ಟಿದ್ದೇವೆ. ಹಿರಿಯರ ಅನುಭವದ ಮಾತಿಗೆ, ಅವರ ತೀರ್ಮಾನಕ್ಕೆ ತಲೆಬಾಗುವಂತಹ ಮಕ್ಕಳು ಕಡಿಮೆಯಾಗುತ್ತಾ ಇದ್ದಾರೆ ಅಂದರೆ ತಪ್ಪಾಗಲಾರದೇನೋ?! ವಿದ್ಯಾವಂತರೆನಿಸಿಕೊಂಡ ಯುವಪೀಳಿಗೆ ಮದುವೆ ವಿಚಾರದಲ್ಲಿ ತಂದೆ-ತಾಯಿ ಹಾಗೂ ಹಿರಿಯರ ಅನುಭವದ ಮಾತಿಗೆ ತಲೆಬಾಗುವುದು ಸೂಕ್ತ ಎಂಬ ವಿಚಾರ ಸತ್ಯವೂ, ಸಮಂಜಸವೂ ಹೌದು.

ಮದುವೆಯಾದ ಕ್ಷಣದಿಂದಲೇ ಗಂಡು ಮತ್ತು ಹೆಣ್ಣಿನ ಜೀವನದಲ್ಲಿ ಒಂದು ಬದಲಾವಣೆಯ ಹಂತ ಆರಂಭವಾಗುತ್ತದೆ. ಮದುವೆಯಾದ ಹೆಣ್ಣು ಒಂದು ರೀತಿಯ ತಪಸ್ವಿಯಂತೆ ಎಲ್ಲರಿಗೂ  ತಾಯಿಯಾಗಬೇಕು, ಶಾಂತಿ, ಸಹನೆಯ ಗಣಿಯಾಗಬೇಕು! ಗೃಹಿಣಿ ಧರ್ಮದಲ್ಲಿರುವ ಮಹಿಳೆಯನ್ನು ಪರಪುರುಷರು ನೋಡಿದಾಗ ಇವಳು ಮತ್ತೊಬ್ಬರ ಅರ್ಧಾಂಗಿ ಎಂದು ತಿಳಿಯುವುದಕ್ಕಾಗಿ "ಮುತ್ತೈದೆ ಭಾಗ್ಯ"ವನ್ನು ನಮ್ಮ ಹಿರಿಯರು ಕರುಣಿಸಿದ್ದಾರೆ. ಇದು ಒಂದು ಸಂಪ್ರದಾಯವಾಗಿ ಹಿಂದಿನ ಕಾಲದಿಂದಲೇ ಅನುಸರಿಸಿಕೊಂಡು ಬಂದಿರತಕ್ಕಂತಹ ವಿಚಾರ. ಇಂತಹ ಮಹಿಳೆಯರನ್ನು ಅನ್ಯ ಪುರುಷರು ಕಾಮದೃಷ್ಟಿಯಿಂದ ನೋಡುವುದಾಗಲೀ, ಛೇಡಿಸುವುದಾಗಲೀ ಮಾಡುವುದಿಲ್ಲ. ಬದಲಾಗಿ ಗೌರವದಿಂದ ವರ್ತಿಸುತ್ತಾರೆ. ಇದಕ್ಕೆ ವಿರುದ್ಧವಾಗಿ ಯಾರೇ ನಡೆದರೂ ಅದು ಧರ್ಮಸಮ್ಮತವಲ್ಲ ಎಂಬುದು ನಿತ್ಯ ಸತ್ಯ.

ಗಂಡನೆಂಬವನು ಹೆಂಡತಿಯನ್ನು ಆದರದಿಂದ, ಪ್ರೀತಿಯಿಂದ, ಸುಮನಸ್ಸಿನಿಂದ ನೋಡುತ್ತಿರಬೇಕು, ರಕ್ಷಿಸಿಕೊಳ್ಳಬೇಕು, ಆದರಿಸ ಬೇಕು, ಸೋತು ಗೆಲ್ಲುತ್ತಿರಬೇಕು, ಗೆದ್ದು ಸೋಲುತ್ತಿರಬೇಕು, ಹಾಗಿಲ್ಲದಿದ್ದರೆ ಸುಪುತ್ರರನ್ನು, ಸುಖ ಸಂಸಾರವನ್ನು, ಸುಖ ಸಂತೋಷಗಳನ್ನು ಪಡೆಯಲಾರ. ಇಲ್ಲಿ ಅನ್ನೋನ್ಯತೆ ಬಹಳ ಮುಖ್ಯವಾದ ಅಂಶವಾಗಿರುತ್ತದೆ. ಇಬ್ಬರಲ್ಲೂ ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳುವ ಮನೋಭಾವ ಇರಬೇಕು.

ಸಂಸಾರವೆಂದರೆ- ಸಾಮರಸ್ಯ

ದಾಂಪತ್ಯವೆಂದರೆ - ಹೊಂದಿಕೊಳ್ಳುವಿಕೆ

ಗೃಹಸ್ಥ ಜೀವನವೆಂದರೆ - ಮಧುರ ಒಪ್ಪಂದ

ಬಾಳ ಬಂಧನವೆಂದರೆ - ಬಾಹು ಬಂಧನವಲ್ಲ

ದಾಂಪತ್ಯವೆಂದರೆ -ಕಾಮ ಸುಖಗಳೇ ಅಲ್ಲ

ನವದಂಪತಿಗಳೇ, ಬದುಕೆಂದರೆ ವರ್ಣರಂಜಿತ ಚಲನಚಿತ್ರವಲ್ಲ, ಅತಿ ಆಸೆಗಳ ಗೂಡಲ್ಲ, ಹೂವಿನ ಹಾಸಿಗೆ ಯಂತೂ ಅಲ್ಲವೇ ಅಲ್ಲ, ಅದನ್ನು ತಲುಪಲೋಸುಗ ನಿಮ್ಮ ಜಂಟಿ ಕ್ರಿಯೆಗಳು ಮುಂದುವರಿಯಲಿ.

ಕಷ್ಟ-ಸುಖ, ನೋವು-ನಲಿವು, ದುಃಖ-ದುಮ್ಮಾನ, ಆನಂದ-ಬೇಸರ ಹಾಗೂ ಸಮಸ್ಯೆಗಳ ಸರಮಾಲೆಗಳನ್ನು ಸಮನಾಗಿ ಹಂಚಿಕೊಂಡು ಮುಂದಕ್ಕೆ ಸಾಗುತ್ತಿರಬೇಕು. ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಿ. ಏನೇ ಬರಲಿ, ಒಟ್ಟಾಗಿ ಒಂದೇ ಮನಸ್ಸಿನಿಂದ ಇರಿ. ನಿಮ್ಮ ದಾಂಪತ್ಯದ ಒಳಗುಟ್ಟನ್ನು ಯಾರಿಗೂ ಹೊರಗೆಡಹದಿರಿ. ಒಬ್ಬರಿಗೊಬ್ಬರು ಆಧಾರವಾಗಿರಿ.

ಧೈರ್ಯ ತುಂಬಿರಿ, ಸತ್ಯ-ನ್ಯಾಯ-ಧರ್ಮದ ಗುರಿಯೆಡೆಗೆ ಮುನ್ನುಗ್ಗಿ. ಜಯ ಖಂಡಿತ ನಿಮ್ಮದಾಗುತ್ತದೆ. ನೀವು ನಿಮ್ಮ ಗುರಿಯನ್ನು ಮುಟ್ಟುವಿರಿ.

"ವಿವಾಹವೆಂದರೆ - ಒಂದು ಪವಿತ್ರ ಒಪ್ಪಂದ

ವಿವಾಹವೆಂದರೆ - ಒಂದು ಧಾರ್ಮಿಕ ಅಂಗೀಕಾರ

ವಿವಾಹವೆಂದರೆ - ಒಂದು ಸಂಕಲ್ಪದ ಬೆಸುಗೆ

ವಿವಾಹವೆಂದರೆ-  ಒಂದು ಸಾಮಾಜಿಕ ಸದಾಚಾರ ಅದು ಚಿರಾಯುವಾಗಲಿ."


ಮುತ್ತೈದೆ ಭಾಗ್ಯ

 ಮುತ್ತೈದೆ ಭಾಗ್ಯ

1. ಕರಿಮಣಿ

2. ಕೈಬಳೆ

3. ಹಣೆಗೆ ತಿಲಕ

4. ಕಾಲುಂಗುರ

5. ಮೂಗುತಿ

6. ಒಡ್ಡಿ ಉಂಗುರ

7. ತಲೆಗೆ ಮಲ್ಲಿಗೆ ಹೂ

8. ಮುಂದಾಳೆ

9. ಕಾಲುಗೆಜ್ಜೆ

ಶುಭಕಾರ್ಯದ ನೇತೃತ್ವ ವಿದುರ-ವಿಧವೆ ಮತ್ತು ಸೂತಕಾದಿ ಇದ್ದವರು ವಹಿಸಬಾರದು.

ಗುರುಪೀಠ -  ಶ್ರೀ ಕ್ಷೇತ್ರ ಶೃಂಗೇರಿ

ಕುಲದೇವರು - ತಿರುಪತಿ ವೆಂಕಟರಮಣ

ಕುಲದೈವ -  ಕಲ್ಲುರ್ಟಿ


ಪ್ರಶ್ನೆಗಳು

 


ಪ್ರಶ್ನೆಗಳು

1. ಮದುವೆ ಎಂದರೇನು?

2. ಮದುವೆ ಯಾಕೆ ಬೇಕು?

3. ಮದುವೆ ಇಲ್ಲದೇ ಬದುಕಬಾರದೆ?

4. ಮದುವೆ ಹೇಗೆ ಆಗಬೇಕು?

5. ವಿಜಾತಿ ಮದುವೆ ಸರಿಯೇ?

6. ಪ್ರೀತಿ ವಿವಾಹ ಸರಿಯೇ?

7. ರಿಜಿಸ್ಟರ್ ಮದುವೆ ಬೇಕೇ?

8. ಒಂದು ನಿಶ್ಚಿತ ಪದ್ಧತಿ ಮದುವೆಗೆ ಬೇಕೇ?

9. ಮದುವೆಗೆ ಮುಹೂರ್ತ ಬೇಕೇ?

10. ಮದುವೆಗೆ ಸಾಕ್ಷಿ ಯಾವುದು?

11. ಆಮಂತ್ರಣ ಪತ್ರಿಕೆಯ ಕ್ರಮ ನಿಯಮಗಳೇನು?

ನಲ್ನುಡಿ- ಕುಂಬ್ರ ದುರ್ಗಾಪ್ರಸಾದ್ ರೈ

 ನಲ್ನುಡಿ

ಕುಂಬ್ರ ದುರ್ಗಾಪ್ರಸಾದ್ ರೈ

ಹಿರಿಯರಾದ ದಂಬೆಕ್ಕಾನ ಸದಾಶಿವ ರೈಗಳು “ಬಂಟ ಗುರಿಕ್ಕಾರನ ಮಾಹಿತಿ" ಕಿರುಹೊತ್ತಗೆಯನ್ನು ಮುದ್ರಿಸಿ ಹೊರತರಲು ಸಂಕಲ್ಪಿಸಿರುವುದು ಬಹಳ ಸಂತೋಷದ ವಿಚಾರವಾಗಿದೆ. ಜೀವನದ ಅನೇಕ ಮಜಲುಗಳನ್ನು ದಾಟಿ, ಅನೇಕ ವೈವಿಧ್ಯಮಯ ವ್ಯವಹಾರಗಳಿಗೆ ನಾಂದಿ ಹಾಡಿ ಇಂದು ಸಂತೃಪ್ತ ಜೀವನ ನಡೆಸುತ್ತಿರುವ ರೈಗಳು ಬಂಟ ಸಮಾಜದ ಮೇಲಿಟ್ಟಿರುವ ಕಳಕಳಿ ನಿಜವಾಗಿಯೂ ಮೆಚ್ಚುವಂತಹುದು. ಆ ಕಳಕಳಿ ಯಿಂದಾಗಿಯೇ ಈ ಪುಸ್ತಕವನ್ನು ಹೊರತರಲು ಶ್ರಮಪಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ಸಮಾಜದಲ್ಲಿ “ಬಂಟ ಜಾತಿಗೆ" ಒಂದು ವಿಶೇಷ ಸ್ಥಾನವಿದೆ. ಪ್ರೀತಿವಿಶ್ವಾಸದಿಂದ ಸಮಾಜದ ಎಲ್ಲಾ ವರ್ಗದವರನ್ನು ನಡೆಸಿ ಕೊಳ್ಳುವ ಬಂಟರು ಎಲ್ಲರ ಅಭಿಮಾನವನ್ನು ಗಳಿಸಿಕೊಂಡಿದ್ದಾರೆ. 

ಅಂತಹ ಬಂಟ ಸಮುದಾಯದವರಿಗೆ ಮದುವೆ ಅನ್ನುವ ಪವಿತ್ರ ಕಾರ್ಯ ಜೀವನದ ಬಹಳ ಪ್ರಮುಖ ಘಟ್ಟವಾಗಿದೆ. ಬಂಟರ ನಡುವೆ ಅನೇಕ ವೈವಿಧ್ಯಗಳಿಂದ ಕೂಡಿದ್ದರೂ ಸಾಮಾಜಿಕ ಬದಲಾವಣೆಗಳಿಂದಾಗಿ ಅನೇಕ ಮಾರ್ಪಾಡುಗಳನ್ನು ಕಂಡಿದೆ.

ಬಂಟರ ಮದುವೆ ಶಾಸವು ಗುರುವಿನ ಉಪದೇಶದಿಂದ ಕಲಿಸಲಟ್ಟ ವಿದ್ಯೆ ಅಲ್ಲದೆ ಇರುವುದರಿಂದ, ಬಂಟ ಗುರಿಕ್ಕಾರರು ತಮ್ಮ ಹಿರಿಯರಿಂದ ಕೇಳಿದ್ದನ್ನು ಮತ್ತು ತಮ್ಮ ನಂಬಿಕೆಯ ತಳಹದಿಯಲ್ಲಿ ತಮ್ಮ ಇತಿಮಿತಿಯಲ್ಲಿ ಮದುವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಬಂಟರ ಮದುವೆ ಶಾಸ್ತ್ರಕ್ಕೆ ಯಾವುದೇ ಲಿಖಿತ ವ್ಯಾಖ್ಯಾನಗಳು ಲಭ್ಯವಿಲ್ಲ. ಆದುದರಿಂದ ಅನೇಕ ವೈರುಧ್ಯಗಳನ್ನು ಬಂಟರ ಮದುವೆ ಕ್ರಮಗಳಲ್ಲಿ ನಾವು ಗಮನಿಸಬಹುದು. ಬಂಟರ ಮದುವೆ ಶಾಸ್ತ್ರವು ಏಕರೂಪದಲ್ಲಿ ಆಗಬೇಕೆನ್ನುವ ಕೂಗು ಇದೆ. ಆದರೆ ಅದು ಕಾರ್ಯರೂಪಕ್ಕೆ ಬರುವುದರಲ್ಲಿ ತಡವಾಗುತ್ತದೆ.

ಇದನ್ನೆಲ್ಲ ಗಮನಿಸಿ ಹಿರಿಯರಾದ ದಂಬೆಕ್ಕಾನ ಸದಾಶಿವ ರೈಯವರು ಈ ಕಿರುಹೊತ್ತಗೆಯನ್ನು ಹೊರ ತರುತ್ತಿದ್ದಾರೆ ಅನ್ನುವ ಅನಿಸಿಕೆ ನನ್ನದು. ಮದುವೆಯ ಕ್ರಮವನ್ನು ಕಾಲಕಾಲಕ್ಕೆ ಬದಲಾಯಿಸಿ ಕೊಳ್ಳಲು ಸಾಧ್ಯವಾಗಬಾರದು. ಏಕೆಂದರೆ ಮದುವೆಗೆ ತನ್ನದೇ ಆದ ಪವಿತ್ರತೆ ಇದೆ. ಆ ಪವಿತ್ರತೆಯನ್ನು ಕಾಪಾಡಿಕೊಳ್ಳಲು ಸದಾಶಿವ ರೈಗಳ ಈ ಹೊತ್ತಗೆ ಉಪಯೋಗವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅನೇಕ ಹಿರಿಯರ ಮಾರ್ಗದರ್ಶನವನ್ನು ಪಡೆದು ತಾನೇ ಗುರಿಕ್ಕಾರನಾಗಿ ಅನೇಕ ಮದುವೆಯ ಪುಣ್ಯ ಕಾರ್ಯವನ್ನು  ನೆರವೇರಿಸಿ ಧನ್ಯತಾಭಾವದೊಂದಿಗೆ ದಂಬೆಕ್ಕಾನ ಸದಾಶಿವ ರೈಗಳು ಈ ಪುಸ್ತಕವನ್ನು ಬರೆದಿದ್ದಾರೆ. "ವಸ್ತುನಿಷ್ಠ ಟೀಕೆಗೆ ನನ್ನ ಸ್ವಾಗತವಿದೆ" ಅನ್ನುವ ಮಾತನ್ನು ಸದಾಶಿವ ರೈಗಳು ತನ್ನ ಭಾಷಣದಲ್ಲಿ ಹೇಳಿದ್ದನ್ನು ಈ ಹಿಂದೆ ನಾನು ಕೇಳಿದ್ದೇನೆ. ಇದು ಅವರಿಗೆ ಬಂಟ ಸಮಾಜದ ಮೇಲಿರುವ ಅಭಿಮಾನವನ್ನು ತೋರಿಸಿಕೊಡುತ್ತದೆ.

ದಂಬೆಕ್ಕಾನ ಸದಾಶಿವ ರೈಗಳು ಈ ಕಿರುಹೊತ್ತಗೆಯ ಮೂಲಕ "ಬಂಟರ ಮದುವೆಗೆ" ಒಂದು ನಿರ್ದಿಷ್ಟ ದಿಕ್ಕನ್ನು ತೋರಿಸಿ ಕೊಟ್ಟಿದ್ದಾರೆ. ಈ "ಬಂಟರ ಮದುವೆ ಮಾರ್ಗದರ್ಶಿ" ಪುಸ್ತಕ ಅನೇಕರಿಗೆ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ ಅನ್ನುವ ನಂಬಿಕೆಯಿದೆ.

ಶುಭಾಶಯಗಳು.

ಕುಂಬ್ರ ದುರ್ಗಾಪ್ರಸಾದ್ ರೈ

ಕಾರ್ಯಕಾರಿ ಸಮಿತಿ ಸದಸ್ಯ

ಬಂಟರ ಮಾತೃ ಸಂಘ, ಮಂಗಳೂರು, ದ. ಕ.

ವಿಳಾಸ : ನ್ಯಾಯವಾದಿ

'ಕುಂಬ್ರ ಜನನ', ಅಂಚೆ : ಕುಂಬ್ರ, ಒಳಮೊಗ್ರು ಗ್ರಾಮ

ಪುತ್ತೂರು ತಾಲೂಕು, ದ. ಕ.

ಮೊ: 9480164641




ಶುಭ ಹಾರೈಕೆಗಳು- ರಾಜಶ್ರೀ ಟಿ. ರೈ, ಪೆರ್ಲ

 ಶುಭ ಹಾರೈಕೆಗಳು

ರಾಜಶ್ರೀ ಟಿ. ರೈ, ಪೆರ್ಲ

ಎಲ್ಲವೂ ಎಲ್ಲದರೊಂದಿಗೆ ಬೆರೆತುಕೊಂಡು ಸ್ವಂತ ಅಸ್ಮಿತೆ ಯೆಂಬುದು ಗೌಣವಾಗುತ್ತಾ ಆಧುನಿಕ ವರ್ತಮಾನ ತನ್ನತನ ತೋರಿಸುತ್ತಿರುವ ಹೊತ್ತಿಗೆ ಸಂಸ್ಕೃತಿಯ ಆವರಣದ ಒಳಗೆ ಭದ್ರವಾಗಿರುವ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಕಾಪಿಟ್ಟುಕೊಳ್ಳುವ ಔಚಿತ್ಯ ಏನು ಮತ್ತು ಎಷ್ಟರ ಮಟ್ಟಿನದು ಎಂಬುದು ಚಿಂತಿಸಬೇಕಾದ ವಿಚಾರ.

ಖ್ಯಾತ ಮಾನವಶಾಸ್ತ್ರಜ್ಞ ಯುವಾಲ್ ನೋವಾ ಹರಾರಿ ಅವರ Bees don't need lawyers, because there is no danger that they might forget or violate the hive constitution. The queen does not chear the cleaner bees of their food, and they never go on strike demanding higher wages.

But humans do such things all the time. Because the Sapiens social order is imagined, humans cannot preserve the critical information for running it simply by making copies of their DNA and passing these on to their progeny A conscious effort has to be made to sustain laws, customs, procedures and manners, otherwise the social order would quickly collapse ಎಂಬ ಮಾತಿನ ಒಳಮರ್ಮವನ್ನು ನಾವು ಅರ್ಥಮಾಡಿಕೊಳ್ಳಬೇಕು.

ನಮ್ಮ ಬದುಕನ್ನು ಸುಸಂಸ್ಕೃತ ಶಿಸ್ತಿನ ಚೌಕಟ್ಟಿನಲ್ಲಿ ಇರಿಸಿ ಕೊಳ್ಳಲು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಒಪ್ಪಿ ಅಪ್ಪಿಕೊಳ್ಳುವುದು ಬಹುಮಟ್ಟಿಗೆ ಸಾಧುವೆನ್ನಿಸುತ್ತದೆ.

ವಿವಾಹವೆನ್ನುವುದು ಆಚರಣೆಯ ಜೊತೆ ಜೊತೆಗೆ ಮನಸ್ಸಿಗೆ ಆಹ್ಲಾದಕತೆ ನೀಡುವ ಸಂಭ್ರಮ. ಬಾಹ್ಯ ಸಂಭ್ರಮಕ್ಕಿಂತ ಮನುಷ್ಯನ ಮಾನಸಿಕ ದೈಹಿಕ ಸಂಬಂಧದ ಬದ್ಧತೆಯೇ ಇಲ್ಲಿ ಕೊನೆಯವರೆಗೆ ಪ್ರಸ್ತುತವಾಗುವುದು ಎನ್ನುವುದನ್ನು ನಾವು ಮರೆಯುವಂತಿಲ್ಲ.

ಬಂಟ ಸಮಾಜದ ಆಚರಣೆ, ಜೀವನಶೈಲಿ ಮತ್ತು ಸಂಪ್ರದಾಯಗಳು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯೊಂದಿಗೆ ಉತ್ತಮ, ಆರೋಗ್ಯಪೂರ್ಣ ಮಾನವ ಜನ್ಮದ ಆಶಯಗಳನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಹತ್ತು ಹೆಜ್ಜೆ ಹಾದಿಗೊಂದು ಇಂಚು ಬದಲಾವಣೆ ಸಹಜವಾಗಿ ಸಂಭವನೀಯವಾದರೂ ಬಂಟರಲ್ಲಿ ಮದುವೆಯ ಕಟ್ಟಳೆಯ ನಿಖರ ಮತ್ತು ಸಮಗ್ರ ಕೈಪಿಡಿಯನ್ನು ಸಿದ್ಧಪಡಿಸುವ ಈ ಪ್ರಯತ್ನ ಒಳ್ಳೆಯ ನಡೆ. ಇದು ಓರ್ವ ವ್ಯಕ್ತಿಯ ಮನಸ್ಥಿತಿಯ ಫಲಿತವಲ್ಲ. ಹಲವು ಹಿರಿಯರ ಮಥಿತ ಅರಿವಿನ ಫಲ. ಕಾಲದ ಪ್ರವಾಹದಲ್ಲಿ ಆದ ಕಲಬೆರಕೆಯ ಕೊಳೆ ಇರದೆ ಉತ್ತಮ ಆಶಯ ಮತ್ತು ಸದುದ್ದೇಶದಿಂದ ಮೂಡಿ ಬಂದ ಈ ಕೃತಿ ಸಹಜವಾಗಿಯೇ ಒಂದು ಸಮುದಾಯದ ನಡವಳಿಕೆಯಲ್ಲಿ ಏಕತೆಯ ಶಿಸ್ತನ್ನು ಕಟ್ಟಿಕೊಡುವ ದೃಷ್ಟಿಯಲ್ಲಿ ಬಹು ಅಮೂಲ್ಯ. ಹಿರಿಯರಿಗೆ ಒಪ್ಪಿಗೆಯಾಗುವ ಅಂತೆಯೇ ಕಿರಿಯರಿಗೆ ದಾರಿದೀಪ ವಾಗುವ ಹೊತ್ತಗೆಯ ಹೂರಣವನ್ನು ಬಡಿಸುತ್ತಿರುವ ಹಿರಿಯರಾದ ದಂಬೆಕ್ಕಾನ ಸದಾಶಿವ ರೈ ಅವರಿಂದ ಆಶೀರ್ವಾದ ವನ್ನು ಬೇಡುತ್ತಾ ಶುಭ ಹಾರೈಕೆಗಳೊಂದಿಗೆ-

- ಶ್ರೀಮತಿ ರಾಜಶ್ರೀ ಟಿ. ರೈ, ಪೆರ್ಲ

ಬಂಟ ಮದುವೆ ಕೈಪಿಡಿಯ ಬಗ್ಗೆ -ದಯಾನಂದ ರೈ ಮನವಳಿಕೆಗುತ್ತು

 ಬಂಟ ಮದುವೆ ಕೈಪಿಡಿಯ ಬಗ್ಗೆ

ದಯಾನಂದ ರೈ ಮನವಳಿಕೆಗುತ್ತು

ತುಳು ಮತ್ತು ಕನ್ನಡ ಲೇಖಕರಾದ ನೂಜಿ ತರವಾಡು ಮನೆಯ ದಂಬೆಕ್ಕಾನ ಸದಾಶಿವ ರೈಗಳ ಕೃತಿ "ಬಂಟ ಮದಿಮೆ" (ತುಳು) ಹಾಗೂ "ನಾವು ಬಂಟರು" ಎನ್ನುವ ಶೀರ್ಷಿಕೆಯ ಪುಸ್ತಕಗಳನ್ನು ಈ ಹಿಂದೆ ಓದಿದ ನೆನಪಿದೆ. ಲೇಖಕರು ಬಂಟ ಮದುವೆ-ಬಂಟ ಗುರಿಕ್ಕಾರನ ಗುರ್ಕಾರ್ಮೆದ ಅಪ್ರಕಟಿತ ಕೈಪಿಡಿಯನ್ನು ಓದಿದೆ. ಈ ಕೈಪಿಡಿಯನ್ನು ಲೇಖಕರು ಬಂಟರ ಹಲವಾರು ಹಿರಿಯ ಅನುಭವಿಗಳು ಮತ್ತು ಲೇಖಕರಿಂದ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ ಬಂಟ ಸಮುದಾಯದ ಮದುವೆಯ ಕ್ರಮಗಳನ್ನು ತಮ್ಮ ಕೃತಿಯಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.

ಲೇಖಕರು ತಮ್ಮ ಪ್ರಸ್ತಾವನೆಯಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲಿರುವ ವಧೂ-ವರರಿಗೆ ವಿವಾಹವು ಮಹೋನ್ನತವಾದ ಅನುಬಂಧಗಳ ಬೆಳವಣಿಗೆಗೆ, ವಿಶ್ವಾಸಾರ್ಹ ವಾದ ಬಂಧನ, ಕುಟುಂಬದ ಐಕ್ಯತೆ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣದ ಕುರಿತಾಗಿ, ತಮ್ಮ ದೂರದೃಷ್ಟಿಗಳ ಆಯಾಮಗಳ ಕುರಿತಾಗಿ ವಿವಾಹದ ನಾಂದಿಯ ಬಗ್ಗೆ ತಮ್ಮ  20

ಅಭಿಪ್ರಾಯ ನೀಡಿರುತ್ತಾರೆ. ಮುಂದುವರಿಸುತ್ತಾ ಕುಟುಂಬದ ಸುಖ-ಕಷ್ಟ, ನೋವು-ನಲಿವು, ದುಃಖ-ದುಮ್ಮಾನ ಹಾಗೂ ಸಮಸ್ಯೆಗಳ ಸರಮಾಲೆಯನ್ನು ಸಮನಾಗಿ ಹಂಚಿಕೊಂಡು ದಾಂಪತ್ಯದ ಒಳಗುಟ್ಟನ್ನು ಹೊರಗೆ ಹೇಳದೆ ದಂಪತಿಗಳೇ ಪರಸ್ಪರ ಪರಿಹರಿಸಿಕೊಳ್ಳಬೇಕೆಂದು ನೂತನ ವಧೂವರರಿಗೆ ಕೌಟುಂಬಿಕ ಮಾರ್ಗದರ್ಶನಗಳನ್ನು ನೀಡಿರುತ್ತಾರೆ.

ಸದರಿ ಅಪ್ರಕಟಿತ ಕಿರುಪುಸ್ತಕ ಬಂಟ ಗುರಿಕ್ಕಾರನ ಗುರ್ಕಾರ್ಮೆದ ಕೈಪಿಡಿಯಲ್ಲಿ ಉತ್ತಮ ಮಾರ್ಗಸೂಚಿಯನ್ನು ನೀಡಿರುವುದು ಬಂಟ ಮದುವೆಯಲ್ಲಿ ನಿರ್ವಾಹಕ ನಿರೂಪಕರಿಗೆ ಮಾರ್ಗಸೂಚಿಯಾಗಿರುತ್ತಾರೆ. ಹಾಗೂ ಬಂಟ ಸಮುದಾಯದ ಮದುವೆ ರೀತಿ ನೀತಿ, ರಿವಾಜುಗಳಿಗೆ ಸಂಬಂಧಿಸಿದಂತೆ ವಸ್ತುಗಳು, ನಿಶ್ಚಿತಾರ್ಥದ ಸಂದರ್ಭದಲ್ಲಿ ವಧೂವರರ ಕುಟುಂಬದ ಹಿರಿಯರು ಪಾಲಿಸಬೇಕಾದ ಮಾಹಿತಿಯನ್ನು ಹಾಗೂ ದೈವದೇವರುಗಳ ಸಾಕ್ಷಿಯಾಗಿ ಬದ್ಧರು ಎನ್ನುವ ವಿಷಯಗಳ ಮಾಹಿತಿ ಅದ್ಭುತ ವಾಗಿದೆ.

ಮದುವೆಯ ದಿನದಂದು ಮದುವೆ ಸಿದ್ಧತೆಗೆ ಮಂಟಪದಲ್ಲಿ ಇರಬೇಕಾದ ಸಾಹಿತ್ಯ ಪರಿಕರ ವಸ್ತುಗಳ ಪಟ್ಟಿಯನ್ನೇ ಲೇಖಕರು ಮಾಡಿಸುತ್ತಾ ವಧೂ-ವರರ ದಿಬ್ಬಣಗಳ ಮನೆಯಿಂದ ಹೊರಡುವ ಮುನ್ನ ಪಾಲಿಸುತ್ತಿದ್ದ ಕ್ರಮಗಳು, ದಿಬ್ಬಣವು ದೇವಸ್ಥಾನ ಅಥವಾ ಸಭಾಭವನಕ್ಕೆ ಬರುವಾಗ ಸ್ವಾಗತಿಸುವ ಕ್ರಮಗಳನ್ನು ನಂತರ ಬಂಟ-ಧಾರಾ ಪದ್ಧತಿಯ ಪೂರ್ಣ ಮಾಹಿತಿಯನ್ನು ಲೇಖಕರು ತಮ್ಮ ಕೃತಿಯಲ್ಲಿ ನೀಡಿರುವುದು ಬಂಟ ಸಂಸ್ಕೃತಿಯನ್ನು ಮುಂದಿನ ದಿನಗಳಲ್ಲಿ ಮರೆಯದೆ ಪಾಲಿಸಿಕೊಂಡು ಹೋಗಲು ಮಾರ್ಗದರ್ಶಿ ಯಾಗಿರುತ್ತದೆ. ಧಾರಾ ಮುಹೂರ್ತದ ನಂತರ ಕೊನೆಯ ಕ್ರಮ ದೊಂಪ ಜಪ್ಪಾವುನಿ ಕುರಿತು ಮತ್ತು ಪೊಣ್ಣು ಒಚ್ಚಿದ್ ಕೊರ್ಪಿನ ಕ್ರಮದ ಮಾಹಿತಿಯನ್ನು ಕೂಡಾ ಲೇಖಕರು ಸುಂದರವಾಗಿ ಕೃತಿಯಲ್ಲಿ ವರ್ಣಿಸಿದ್ದಾರೆ. ಈ ಕೃತಿ ಬಂಟ ಮದುವೆ ನಡೆಸುವ ಗುರಿಕ್ಕಾರರಿಗೆ ಒಂದು ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ಮುಂದಿನ ದಿನಗಳಲ್ಲಿ ಬಂಟ ಸಮುದಾಯದ ಸಂಸ್ಕೃತಿಯಲ್ಲಿ ಮದುವೆ ನಡೆಸುವಂತಹ ಕ್ರಮದ ಪರಂಪರೆಯನ್ನು ಉಳಿಸಿಕೊಂಡು ಹೋಗಲು ಈ ಕೃತಿ ಮುಂದಿನ ಪೀಳಿಗೆಗೆ ನೆನಪಿಸುವಂತಹ ಕೆಲಸದಲ್ಲಿ ಲೇಖಕರ ಪರಿಶ್ರಮ ಸಾರ್ಥಕವಾಗಿರುತ್ತದೆ.

ಅನುಭವಿ ಲೇಖಕರಾದ ದಂಬೆಕ್ಕಾನ ಸದಾಶಿವ ರೈಗಳಿಂದ ಬಂಟರ ಸಂಸ್ಕೃತಿಯಲ್ಲಿ ಬರುವ ಸೀಮಂತ, ನಾಮಕರಣ ಮತ್ತು ಮರಣ ಸಂಸ್ಕಾರ (ಬೊಜ್ಜ)ದ ಕ್ರಮಗಳನ್ನು ಕುರಿತಾಗಿ ಲೇಖನವನ್ನು ಮುಂದಿನ ಜನಾಂಗದ ಮಾರ್ಗದರ್ಶನಕ್ಕಾಗಿ ಆಶಿಸಬಹುದಾಗಿದೆ. ಬಂಟ ಸಂಸ್ಕೃತಿಯು ಭವಿಷ್ಯದಲ್ಲಿ ನಶಿಸಬಾರದು ಎಂಬ ಲೇಖಕರ ಆಶಯ ಬಂಟ ಸಮುದಾಯ ಮೆಚ್ಚಲೇಬೇಕಾಗಿದೆ.

ದಯಾನಂದ ರೈ ಮನವಳಿಕೆಗುತ್ತು

(ಮಾಜಿ ಅಧ್ಯಕ್ಷರು, ಪುತ್ತೂರು ತಾಲೂಕು ಬಂಟರ ಸಂಘ)

(ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು, ಇದರ ಪುತ್ತೂರು ತಾಲೂಕು ಸಮಿತಿ ಸಂಚಾಲಕರು)

ಒಳ್ನುಡಿ - ಕೆ. ಸೀತಾರಾಮ ರೈ ಸವಣೂರು

 ಒಳ್ನುಡಿ

ಕೆ. ಸೀತಾರಾಮ ರೈ ಸವಣೂರು

ದಂಬೆಕ್ಕಾನ ಸದಾಶಿವ ರೈಯವರ ಹೆಸರೇ ಒಂದು ಸದಾಶಯದ ಹೆಸರು. ನಾಡು-ನುಡಿ-ಸಂಸ್ಕೃತಿಗೆ ಬಹಳ ಗೌರವ ಕೊಡುವ ರೈಯವರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕೆಲ: ಕಾರ್ಯಗಳು ಸಮಾಜಮುಖಿಯಾಗಿವೆ. ಪ್ರತಿಯೊಂದನ್ನೂ ಚಿಕಿತ್ಸ ಮನೋಭಾವದಿಂದ ನೋಡುವ ದಂಬೆಕ್ಕಾನ ಅವರು ನಮ್ಮ ಬಂಟ ಒ ಸಮಾಜಕ್ಕೊಂದು ಹಿರಿಮೆ.

ಈಗಾಗಲೇ ಅವರ “ಬದುಕಿನ ಹೆಜ್ಜೆಗಳು" ಹೇಗೆ ಸಾಗಿದವು ಒ ಅವರ ಒಟ್ಟು ಸಮಾಜ ಪ್ರೀತಿ, ಕ್ರಿಯಾಶೀಲತೆ ಹೇಗಿದೆ ಎಂಬುದನ್ನು ಬಹಳ ಹತ್ತಿರದಿಂದ ಕಂಡವರಲ್ಲಿ ನಾನೂ ಒಬ್ಬನು. ಅವರ ಮಾತು-ಕೃತಿ ಒಂದಕ್ಕೊಂದು ಪೂರಕ. ತನ್ನ ಪ್ರೌಢ ಬರಹಗಳೊಂದಿಗೆ ತುಳುನಾಡಿನ ಮನ-ಮನದಲ್ಲಿ ಗೌರವಿಸಲ್ಪಡುವ ದಂಬೆಕ್ಕಾನ ಸದಾಶಿವ ರೈಯವರು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವಿಗಳು, ಚಿಂತಕರು.  

ಬಂಟರ ಮದಿಮೆ: ನಾವು ಬಂಟರು ತುಳು-ಕನ್ನಡ ಕೃತಿಗಳನ್ನು ಲೋಕಾರ್ಪಣೆ ಮಾಡಿರುವ ದಂಬೆಕ್ಕಾನ ಸದಾಶಿವ ರೈಗಳ "ಬದುಕಿನ ಹೆಜ್ಜೆಗಳು", ಅವರು ನಡೆದು ಬಂದ ಹಾದಿಯ ಸಿಂಹಾವಲೋಕನ ಮಾಡಿದ ಅನುಕರಣೀಯ ಕೃತಿ. ತುಳು ನಾಡೆಂದರೆ ಹಾಗೇನೇ. ತುಳು ನಾಡು-ನುಡಿ-ಸಂಸ್ಕೃತಿ-ಆಚಾರ-ವಿಚಾರಗಳು ಇಂದು ಮೇಲ್ಪಂಕ್ತಿಯಲ್ಲಿದ್ದು ತಾಯಿಬೇರೆನಿಸಿ ಕೊಂಡಿವೆ. ಅದರಲ್ಲೂ 'ಬಂಟರ ಮದಿಮೆ' ಇತರ ಸಂಸ್ಕಾರ ಕಾರ್ಯಗಳು ಎಲ್ಲಾ ಜನಾಂಗಗಳವರ ಗಮನ ಸೆಳೆದು ಅನುಕರಣೀಯವಾಗಿದೆ. ನಮ್ಮ ಸಂಪ್ರದಾಯದ ಆಳ-ವಿಸ್ತಾರ ಅರಿತಿರುವ ರೈಗಳು ಅತ್ಯುತ್ತಮ ಮಾತುಗಾರರು. ವಿಚಾರಪೂರಿತ ಅವರ ಮಾತುಗಳಲ್ಲಿ ನಮ್ಮ ಬದುಕಿನ ಆದರ್ಶಗಳು ಅಡಗಿವೆ.

"ಮಾತೃಪ್ರಧಾನ" ಕುಟುಂಬ ವ್ಯವಸ್ಥೆ ಹೊಂದಿರುವ ನಮ್ಮ ಬಂಟ ಸಮಾಜ ಕುಟುಂಬ ವ್ಯವಸ್ಥೆಯನ್ನು ಸತ್ವಭರಿತವಾಗಿ, ಗುಣ ವಿಶೇಷತೆಗಳನ್ನು ಒಳಗೊಂಡಿರುವಂತೆ ರೂಪಿಸಬೇಕಾದರೆ ದಂಬೆಕ್ಕಾನ ಸದಾಶಿವ ರೈಯವರಂಥ ಸಹೃದಯಿ ಬಾಂಧವರು ಒಟ್ಟುಗೂಡಬೇಕಾಗಿದೆ. ಅವರ ಈ ಕಾರ್ಯದಲ್ಲಿ ನಮ್ಮ ಪೂರ್ಣ ಸಹಕಾರವಿದೆ. ಅವರು ಬರೆದಿರುವ ಕೃತಿ ಸಮಾಜ ಪ್ರೀತಿ ಗಳಿಸಲಿ, ಇನ್ನೂ ಹೆಚ್ಚಿನ ಕೃತಿಗಳನ್ನು ಸಮಾಜಕ್ಕೆ ನೀಡಲಿ ಎಂದು ಈ ಒಳ್ಳುಡಿಯ ಮೂಲಕ ಹಾರೈಸುವೆ.

- ಕೆ. ಸೀತಾರಾಮ ರೈ ಸವಣೂರು

ಅಭಿನಂದನಾ ಮಾತು- ಎಂ. ಮಲ್ಲಿಕಾ ಪ್ರಸಾದ

 ಅಭಿನಂದನಾ ಮಾತು

ಎಂ. ಮಲ್ಲಿಕಾ ಪ್ರಸಾದ

ಆತ್ಮೀಯರಾದಂಥ ದಂಬೆಕ್ಕಾನ ಸದಾಶಿವ ರೈಯವರಿಗೆ ನನ್ನತೆ ವಂದನೆಗಳು.

ನಿಮ್ಮ ಈ ಒಂದು ಬಂಟ ಸಮಾಜದ ಮದುವೆಯನ್ನು-ನಡೆಸಿಕೊಡುವ ನಿರೂಪಕರಿಗೆ ನೀವು ಬರೆದಂಥ ಕೈಪಿಡಿಯು ಅತ್ಯಂತ ಅದ್ಭುತವಾಗಿದೆ. ನಿಮಗೆ ಮತ್ತು ನಿಮ್ಮ ಈ ಕೈಪಿಡಿಯಲ್ಲಿ ಸೂಚಿಸಲಾದ ಸಲಹೆ ಸೂಚನೆಗಳು ಅತ್ಯಂತ ಮಹತ್ವದ್ದಾಗಿದೆ. ನಿಮಗೆ ನಾನು ಮನದಾಳದಿಂದ ಅಭಿನಂದನೆಯನ್ನು ಸಲ್ಲಿಸುತ್ತಾ ಇದ್ದೇನೆ.

ಬಂಟ ಸಮಾಜದಲ್ಲಿ ನಾವು ನಮ್ಮ ಹಿರಿಯರಿಂದ ಕಲಿತ ಪ್ರಾಚೀನ ಕಾಲದ ಕ್ರಮಗಳು ರೀತಿ, ನೀತಿಗಳು ಎಲ್ಲವೂ ಪ್ರಸ್ತುತ ಕಾಲಘಟ್ಟದಲ್ಲಿ ಅದು ಅತೀ ಅಗತ್ಯ. ಆದುದರಿಂದ ನಾವು ನಮ್ಮ ಹಿಂದಿನ ಕಾಲದ ರಿವಾಜುಗಳನ್ನು ಬಿಟ್ಟು, ನಮ್ಮದೇ ಶೈಲಿಯಲ್ಲಿ ಯಾವುದೇ ಶುಭ ಸಮಾರಂಭಗಳನ್ನು ಮಾಡಬಾರದು. ಇದರಿಂದ ನಮ್ಮ ತಾಯಿ-ತಂದೆ. ಗುರುಹಿರಿಯರು ಮತ್ತು ಎಲ್ಲರನ್ನು ಗೌರವಿಸುವ ಸಂಸ್ಕೃತಿಯನ್ನು ಕಲಿಯುತ್ತೇವೆ. ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಈ ಕೈಪಿಡಿಯು ನಮ್ಮ ಸಮಾಜ ಬಾಂಧವರಿಗೆ ಒಂದು ಆಶಾದೀಪವಾಗಲಿ. ಇದನ್ನು ಪಾಲಿಸಿದರೆ ನಾವು ಸಮಾಜದಲ್ಲಿ ಅನೇಕ ಸುಧಾರಣೆಗಳನ್ನು ಯಶಸ್ಸನ್ನು ಕಾಣಬಹುದು. ನೀವು ಇಷ್ಟೊಂದು ಮುತುವರ್ಜಿ ವಹಿಸಿ ಈ ಕೈಪಿಡಿ ಸಂಕಲನವನ್ನು ತಯಾರು ಮಾಡಿದ ನಿಮಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತಾ ನಿಮ್ಮ ಕುಟುಂಬ ಜೀವನವೂ ಅತ್ಯಂತ ಸುಖಮಯವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ನನ್ನ ಮಾತುಗಳನ್ನು ಕೊನೆ ಗೊಳಿಸುತ್ತೇನೆ.

ಇತಿ ವಂದನೆಯೊಂದಿಗೆ-

ಎಂ. ಮಲ್ಲಿಕಾ ಪ್ರಸಾದ

ಮಾಜಿ ಅಧ್ಯಕ್ಷರು, ಮಹಿಳಾ ಬಂಟರ ಸಂಘ, ಪುತ್ತೂರು 

ಹಾಲಿ ಎಕ್ಸಿಕ್ಯೂಟೀವ್ ಕಮಿಟಿ ಸದಸ್ಯರು

ಒಂದು ಮಾತು ನಾರಾಯಣ ರೈ ಕುಕ್ಕುವಳ್ಳಿ

 ಒಂದು ಮಾತು

ನಾರಾಯಣ ರೈ ಕುಕ್ಕುವಳ್ಳಿ

ನಮ್ಮ ಬಂಟ ಸಂಸ್ಕೃತಿಯೇ ಹಾಗೆ... ಎಲ್ಲ ಮಾದರಿ. ಆಚಾರ-ವಿಚಾರಗಳಿಗೆ ಅನಾದಿ ಕಾಲದಿಂದಲೂ ಬೆಲೆ ಕೊಟ್ಟವರು ನಾವು. ನಮ್ಮ ಹಿರಿಯರು ಬಾಳಿ ಬೆಳಗಿದ ಆದರ್ಶಗಳೇ ಇಂದು ನಮಗೆ ಬೆಳಕಾಗಿವೆ. ಅಂಥ ಮಹಾನ್ ಹಿರಿಯರಿಗೆ, ಅವರ ಮಾತು, ಮಾಡಿದ ಕಾರ್ಯಗಳಿಗೆ ನಾವು ಇಂದೂ ಗೌರವ ನೀಡುತ್ತಲೇ ಬರುತ್ತಿದ್ದೇವೆ. ನಮ್ಮ ಷೋಡಶ ಸಂಸ್ಕಾರಗಳು ನಮ್ಮ 'ಬಂಟತನ'ದ ಹಿರಿಮೆಯ ಕಲಶಗಳು. ಇಂದು ಆ ಕುರಿತು ಚಿಂತಿಸುವ, ಅಧಿಕಾರ ಯುತವಾಗಿ ಮಾತನಾಡುವ ಹಿರಿಯರು ನಮ್ಮ ನಡುವೆ ಇದ್ದಾರೆಂಬುದೇ ಒಂದು ಹೆಮ್ಮೆ. ಅಂಥವರಲ್ಲಿ ದಂಬೆಕ್ಕಾನ ಸದಾಶಿವ ರೈಗಳ ಹೆಸರೂ ಒಂದು. ಈಗಾಗಲೇ ಬರಹಗಾರರಾಗಿ, ಮಾತುಗಾರರಾಗಿ, ಕಾರ್ಯಕ್ರಮಗಳ ಸುಧಾರಕರಾಗಿ, ಮೇಲಾಗಿ ಸಮಾಜಪ್ರೇಮಿಗಳಾಗಿರುವ ದಂಬೆಕ್ಕಾನ ಅವರು 'ಬಂಟ ಮದಿಮೆ', 'ನಾವು ಬಂಟರು' ಎಂಬ ಎರಡು ಕೃತಿಗಳನ್ನು ನೀಡಿ ಬಂಟರ ಹಿರಿಮೆಯನ್ನು ಮೆರೆದವರು. ಅವರ 68ರ ಹರೆಯದ ಆ ಸಂದರ್ಭ 2016ರಲ್ಲಿ ಮಿತ್ರರಾಗಿರುವ ಡಾ. ರಾಜೇಶ್ ಬೆಜ್ಜಂಗಳ ಅವರು ಬರೆದಿರುವ ಕೃತಿ 'ದಂಬೆಕ್ಕಾನ ಸದಾಶಿವ ರೈ ಬದುಕಿನ ಹೆಜ್ಜೆಗಳು', ದಂಬೆಕ್ಕಾನ ಅವರ ಬದುಕಿನ ಎಳೆ ಎಳೆಗಳನ್ನು ಅನಾವರಣಗೊಳಿಸಿ ಇಂದಿನ ಯುವಕರಿಗೆ, ನಮಗೆಲ್ಲ ಒಂದು ಆದರ್ಶ, ಮಾರ್ಗದರ್ಶಿ ಕೃತಿಯಾಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಸಾಗಿದ 'ಬಂಟ ಗುರಿಕ್ಕಾರ'ನ ಕೈಪಿಡಿ ರೈಗಳು, 'ಬಂಟ ಮದುವೆ ಕಿರುಪುಸ್ತಕ ಹೊರತರುವ ಮನ ಮಾಡಿದ್ದಾರೆ.

ಬಂಟ ಮದುವೆಯ ನಿರ್ವಾಹಕ, ನಿರೂಪಕರ ಕೈಪಿಡಿ; (ಬಂಟ ಗುರಿಕ್ಕಾರನ ಗುರ್ಕಾರ್ಮೆದ ಕೈಪಿಡಿ) ಎನ್ನುವ ಕಿರುಪುಸ್ತಕದ ಹಸ್ತಪ್ರತಿಯನ್ನು ನನಗೆ ನೀಡಿ ಕಣ್ಣಾಡಿಸಲು ತಮ್ಮನ ನೆಲೆಯಲ್ಲಿ = ಹೇಳಿರುವುದು 'ಅಣ್ಣ' ನನಗೆ ನೀಡಿದ ಅವಕಾಶ ಎಂದು = ಭಾವಿಸಿದ್ದೇನೆ. ಮುತ್ತೈದೆ ಭಾಗ್ಯ: 'ಪ್ರಸ್ತಾವನೆ'; ಬಂಟ ಗುರಿಕ್ಕಾರನ | ಮಾರ್ಗಸೂಚಿ, ನಿಶ್ಚಿತಾರ್ಥ (ಬದ್ದೊ); ಮದುವೆ; ಮದುವೆ = ಮಂಟಪಕ್ಕೆ ಸಾಹಿತ್ಯ: ಧಾರಾಕಲಶ, ಕರಿಮಣಿ, ಮಂಟಪ ಆ ಇಳಿಸುವುದು; (ದೊಂಪ ಜಪ್ಪಾವುನಿ); ವಧು ಬಿಟ್ಟುಕೊಡುವುದು ಪ (ಪೊಣ್ಣು ಒಚ್ಚಿದ್ ಕೊರ್ಪುನಿ); ಬೊಂಡ.. ಇತ್ಯಾದಿ ಮಾಹಿತಿಗಳನ್ನು 5 ಅರ್ಥವತ್ತಾಗಿ ನಿರೂಪಿಸಿರುವ ಈ ಕೃತಿ ಬೆಳಕಿಗೆ ಬರಲೇಬೇಕು – 'ಮದುವೆ' ಎಂಬ ಪವಿತ್ರ ಕಾರ್ಯ ಬಾಳ ಬದುಕಿನ ಬಂಧನವಾಗಿ ನೂರುಕಾಲ ಉಳಿಯಬೇಕು.

ಬದುಕಿಗೆ ಸಂದೇಶ ನೀಡುವುದರ ಮೂಲಕ, ತನ್ನ ವ್ಯಕ್ತಿತ್ವದ ದರ್ಶನವನ್ನೇ ಮಾಡಿರುವ ದಂಬೆಕ್ಕಾನ ಸದಾಶಿವ ರೈಗಳ *ತಂದೆ ತಾಯಿಗಿಂತ ಮಿಗಿಲಾದ ದೇವರಿಲ್ಲ , *ಕಷ್ಟಕಾಲದಲ್ಲಿ ಸಹಕರಿಸುವವನೇ ನಿಜವಾದ ಮಿತ್ರ, *ಉಪಕಾರ ಮಾಡಿದವರನ್ನು ಎಂದೂ ಮರೆಯಬಾರದು, *ಆರ್ಥಿಕ ಶ್ರೀಮಂತಿಕೆ ಶಾಶ್ವತವಲ್ಲ ಹೃದಯ ಶ್ರೀಮಂತಿಕೆ ಬೆಳೆಸಿಕೋ* ಗುರುಹಿರಿಯರನ್ನು ಗೌರವಿಸು * ನಿನಗೊಂದು ಗುರಿ ಇರಲಿ, ನಿನಗೊಬ್ಬ ಗುರು ಇರಲಿ * ಸತ್ಯ-ಧರ್ಮ-ನ್ಯಾಯಕ್ಕೆ ಜಯವಾಗಲಿ- ಎಂಬಿತ್ಯಾದಿ ನುಡಿಮುತ್ತುಗಳು ನಮ್ಮ ಹೃದಯ ತುಂಬಿದಾಗ ಬದುಕಿಗೆ ಒಂದು ಅರ್ಥ ಬರುವುದು.

ದಂಬೆಕ್ಕಾನ ಸದಾಶಿವ ರೈಗಳ ಪ್ರತಿಯೊಂದು ಚಿಂತನೆ-ಕಾರ್ಯದ ಹಿಂದೆ ಅವರ ಸಹಧರ್ಮಿಣಿ ಶ್ರೀಮತಿ ಪ್ರಭಾ ಎಸ್. ರೈ: ಹಿರಿಯ ಪುತ್ರ ಅಕ್ಷಿತ್ ರೈ; ಹಿರಿಯ ಸೊಸೆ ಶ್ರೀಮತಿ ಗ್ರೀಷ್ಮಾ ಎ. ರೈ; ಕಿರಿಯ ಪುತ್ರ ಅಕ್ಷಯ ರೈ, ಕಿರಿಯ ಸೊಸೆ ಐಕ್ಯ ಎ. ರೈ ಹಾಗೂ ಮೊಮ್ಮಕ್ಕಳಾದ ಅದ್ವಿಕ್ ರೈ; ಅಯಾನ್ಸ್ ರೈ ಅವರ ಅಭಿಮಾನ ಕೊಡುಗೆಯಿದೆ. ರೈಗಳ ಆದರ್ಶವನ್ನು ಪಾಲಿಸುವುದರ ಮೂಲಕ 'ತರವಾಡಿನ' ಕೀರ್ತಿಕಲಶಗಳಾಗಿ ಬೆಳಗುತ್ತಿದ್ದಾರೆ. ಈ ಕೃತಿ ಮಾದರಿಯಾಗಿ ಮೂಡಿಬರಲಿ. ರೈಗಳು ನಂಬಿರುವ ಮರಕಡ ಶ್ರೀ ಗುರು ಪರಾಶಕ್ತಿ ಮಠದ ಸ್ವಾಮಿ ಶ್ರೀ ಶ್ರೀ ಯೋಗೇಶ್ವರೇಶ್ವರ ಸ್ವಾಮಿಯವರ ಹಾಗೂ ಸರ್ವ ದೈವ-ದೇವರ ಅನುಗ್ರಹವಿರಲೆಂದು ಹಾರೈಸುವ-

ನಾರಾಯಣ ರೈ ಕುಕ್ಕುವಳ್ಳಿ, ಎಂ.ಎ. ಬಿ.ಎಡ್. 

ಪ್ರಧಾನ ಸಂಪಾದಕ, 'ಮಧುಪ್ರಪಂಚ', ಪುತ್ತೂರು

ಕಿರಿ ಮಾತು- ಮಲ್ಲಿಕಾ ಜೆ. ರೈ


ಆಚಾರ-ವಿಚಾರಗಳು ನಮ್ಮ ಬದುಕಿಗೆ ಅವಿಭಾಜ್ಯ ಅಂಗ ವಾಗಿದೆ. ಆದರೆ ತಿಳಿದೋ ತಿಳಿಯದೆಯೋ ಕೆಲವೊಂದು ಸಂಸ್ಕೃತಿ ಸಂಸ್ಕಾರಗಳನ್ನು ನಾವು ಮೂಲೆಗುಂಪು ಮಾಡುತ್ತಿದ್ದೇವೆ. ಹಿಂದಿನ ಕಾಲದ ಒಳ್ಳೆಯ ಉದ್ದೇಶಗಳು ಈಗಿನವರಿಗೆ ಮೂಢನಂಬಿಕೆಗಳಂತೆ ತೋರಲಾರಂಭಿಸುತ್ತಿವೆ. ಆಕರ್ಷಣೆಯ ಸುಳಿಯಲ್ಲಿ ಸಿಲುಕಿ ನಮ್ಮ ಪಾರಂಪರಿಕ ಕಟ್ಟುಕಟ್ಟಳೆಗಳನ್ನು ಅಲ್ಲಗಳೆಯುತ್ತಿದ್ದೇವೆ. ಆದರೆ ಮದುವೆಯೆಂಬುದು ಪವಿತ್ರ ಬಂಧನ. ಆ ವಿಷಯದಲ್ಲಿ ಅಂಧಶ್ರದ್ದೆಯಿರಬಾರದು. ಕೂಡಿ ಬಾಳಬೇಕಾದ ಮನಸ್ಸುಗಳು ಸಂಸ್ಕೃತಿಯ ಚೌಕಟ್ಟು ಮೀರಿದ್ದೇ ಆದಲ್ಲಿ, ರಸ ತೆಗೆದ ಕಬ್ಬಿನ ಜಲ್ಲೆಯಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂದಿಗೂ ಹಾಗಾಗದಿರಲಿ!

ಅದಕ್ಕಾಗಿಯೇ ಹಿರಿಯರು ಕಟ್ಟುನಿಟ್ಟಾಗಿ ಪರಿಪಾಲಿಸಿಕೊಂಡು ಬಂದಂತಹ ಕಟ್ಟುಕಟ್ಟಳೆಗಳು ಮರೆತು ಹೋಗಬಾರದೆನ್ನುವ ಅಭಿಲಾಷೆಯಿಂದ ಸದುದ್ದೇಶದ ಹೊತ್ತಗೆಗಳನ್ನಾದರೂ ಓದಿ ಮನನ ಮಾಡಿ ಸಂಸ್ಕಾರಯುತ ಜೀವನವನ್ನು ರೂಪಿಸಿಕೊಂಡು ಒಳಿತಿನ ದಾರಿಯಲ್ಲಿ ಮುನ್ನಡೆಯಲು ತುಂಬಾ ಸಹಾಯಕವಾಗಬಹುದು. ಎಲ್ಲಿ ನಂಬಿಕೆಯಿದೆಯೋ ಅಲ್ಲಿ ದೇವರ ಆಶೀರ್ವಾದ ಸದಾ ಇರುವುದು. ಹಾಗಾಗಿ ನಂಬಿಕೆಯಿಂದ ಜೀವನದ ದಾರಿ ಸುಗಮ ಗೊಳಿಸೋಣ. ಅದರಲ್ಲೂ ಬಂಟ (ನಮ್ಮ) ಸಮಾಜದ ಮದುವೆಯ ಕ್ರಮ ಈಗೀಗ ಬೇರೆ ಬೇರೆ ರೂಪ ತಾಳುತ್ತಿರುವುದು ಹೆಮ್ಮೆಯ ವಿಚಾರ ಅಲ್ಲವೇ ಅಲ್ಲ. ಶೋಕಿಯ ಮದುವೆ ಶೋಕಕ್ಕೆ ತಳ್ಳಬಹು ದೇನೋ ಎಂಬ ಆತಂಕ ಅನೇಕ ಹಿರಿಯರಲ್ಲಿದೆ.

ಹಿರಿಯರು ನಡೆದ ಅನುಭವದ ಹೆಜ್ಜೆಗಳ ಆಧಾರಗ್ರಂಥ ಇದೆಂದರೂ ತಪ್ಪಿಲ್ಲ. ಅರಿತು ಬಾಳಿದರೆ ಜೇನಿನ ಕಡಲು, ಬೆರೆತು ಬಾಳಿದರೆ ಹಾಲುಜೇನು. ಮರೆಯಬಾರದ ವಿಚಾರಗಳನ್ನು ಮತ್ತೆ ನೆನಪಿಸುವ ಈ ಅಮೂಲ್ಯ ರತ್ನವು ಎಲ್ಲರ ಹೃದಯ ದೇಗುಲದಲ್ಲಿ ಸದಾ ಅನುರಣನವಾಗಿರಲಿ. ಹಿರಿಯರಾದ (ಮಾವ) ದಂಬೆಕ್ಕಾನ ಸದಾಶಿವ ರೈಯವರ ಪರಿಶ್ರಮದ ಈ ಕೂಸನ್ನು ಪೋಷಿಸುವ ಹೊಣೆ ಸಕಲರಿಗೂ ಇದೆ. ಆಚಾರಗಳು ಸಂಸ್ಕೃತಿಯನ್ನು ಕಡೆಗಣಿಸದಿರಲಿ.

ಎರಡು ಮಾತು ಬರೆಯಬೇಕೆಂದು ಹೇಳಿದಾಗ ಒಪ್ಪಿಕೊಂಡೆ. ಹೂವಿನೊಂದಿಗೆ ನಾರೂ ಸ್ವರ್ಗಕ್ಕೇರಿದ ಅನುಭವ ನನ್ನದು. ಅದಕ್ಕಾಗಿ ಸದಾ ಕೃತಜ್ಞೆ.

ಮಲ್ಲಿಕಾ ಜೆ. ರೈ, ಗುಂಡ್ಯಡ್ಕ, ಪುತ್ತೂರು


ಶುಭ ನುಡಿ -ಬೂಡಿಯಾರು ರಾಧಾಕೃಷ್ಣ ರೈ

 ಶುಭ ನುಡಿ

ಬೂಡಿಯಾರು ರಾಧಾಕೃಷ್ಣ ರೈ

ಪರಶುರಾಮ ಸೃಷ್ಟಿಯ ಈ ಕರಾವಳಿ ಜಿಲ್ಲೆಯ ತುಳುವ ಭಾಷೆಗೆ ಸೀಮಿತವಾದ ಬಂಟ ಸಮುದಾಯದ ಜೀವನಶೈಲಿಯು ಯಾವ ರೀತಿಯಲ್ಲಿ ಇರಬೇಕು ಎಂಬ ಬಗ್ಗೆ ಹಿರಿಯರಾದ ದಂಬೆಕ್ಕಾನ ಸದಾಶಿವ ರೈಯವರು ಬರೆಯುತ್ತಿರುವ “ಬಂಟ ಸಮಾಜದ ಮದುವೆಯ ವೇದಿಕೆ" ಹೇಗಿರಬೇಕು, ಬಡವ ಶ್ರೀಮಂತರೆನ್ನದೆ ಸಮಾಜದಲ್ಲಿ ಸಮಾನವಾಗಿ ಒಂದೇ ರೀತಿಯಲ್ಲಿ ಮದುವೆಯ ಕಾರ್ಯಕ್ರಮ ನಡೆಯಬೇಕು ಎಂಬ ಬಗ್ಗೆ ಪುಸ್ತಕವನ್ನು ಬರೆಯುವ ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಲು ಇಚ್ಛಿಸುತ್ತೇವೆ.

ಬಂಟ ಸಮಾಜ ಒಂದು ವಿಶಿಷ್ಟ ರೀತಿಯ ಸಮಾಜ. ಈ ಸಮಾಜ ಎಂದಿಗೂ ಮತ್ತೊಬ್ಬರಿಗೆ ತಲೆಬಾಗುವ ಸಮಾಜ ಅಲ್ಲ. ಆದರೆ ತಾವು ಸ್ವೀಕರಿಸಿದ ಗೌರವಕ್ಕೆ ಇಮ್ಮಡಿ ಗೌರವವನ್ನು ಕೊಡುವ ಸಮುದಾಯ. ಈ ಸಮಾಜ ಕೇವಲ ಕರಾವಳಿ ಜಿಲ್ಲೆಯಲ್ಲಿ ಮಾತ್ರ ತಮ್ಮ ಮೂಲ ಸ್ಥಾನವನ್ನು ಕಂಡಿದ್ದವು. ಆದರೆ ಇಂದು ಇದು ಪಸರಿಸಿ ಈ ಜಗತ್ತನ್ನೆ ಆವರಿಸಿಕೊಂಡಿದೆ. ಜಗತ್ತಿನ ಯಾವ ಪ್ರದೇಶಕ್ಕೆ ಹೋದರು ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಸಮಾಜದಲ್ಲಿ ಬಡವರನ್ನು ಗುರುತಿಸಿ ಅವರನ್ನು ಸಮಾಜದ ಮುಂಚೂಣಿಗೆ ತರುವಲ್ಲಿ ತಾವೆಲ್ಲರೂ ಒಂದಲ್ಲ ಒಂದು ರೀತಿ ಸಹಕಾರಿಯಾಗಬೇಕೆಂದು ತನ್ನ ಬಯಕೆ.

ಈ ಉದ್ದೇಶವನ್ನು ಇಟ್ಟುಕೊಂಡು ದಂಬೆಕ್ಕಾನ ಶ್ರೀಯುತ ಸದಾಶಿವ ರೈಯವರು ಎಲ್ಲಾ ಬಂಟ ಮದುವೆಯ ವೇದಿಕೆಯು ಸಮಾನ ರೀತಿಯಲ್ಲಿ ನಡೆಯಬೇಕೆಂಬ ಆಶಯದೊಂದಿಗೆ ಈ ಪುಸ್ತಕವನ್ನು ಬರೆಯುವುದು ಬಂಟ ಸಮಾಜಕ್ಕೆ ಪೂರಕ ಎಂದು ಭಾವಿಸುತ್ತೇನೆ.

ಬಂಟ ಸಮಾಜ ಬೇರೆ ಎಲ್ಲಾ ಸಮಾಜದವರ ಜೊತೆ ಬೆರೆಯಲು ಇಚ್ಛೆಪಡುವಂತಹ ಸಮಾಜ. ಬಂಟ ಸಮಾಜದ ಶ್ರೀಮಂತರು, ಬಡ ಬಂಟ ಸಮಾಜ ಉಳಿದ ಎಲ್ಲ ಸಮಾಜಕ್ಕಿಂತ ಭಿನ್ನವಾಗಿ ಕಾಣುವುದರಲ್ಲಿ ಸಂಶಯವಿಲ್ಲ. ಪ್ರತಿ ಗ್ರಾಮ ಮಟ್ಟದಲ್ಲಿ ಬಂಟ ಸಮಾಜದ ಸಮಿತಿಗಳನ್ನು ರಚಿಸಿ ನಾವೆಲ್ಲರೂ ಸಮಾನರು, ನಾವೆಲ್ಲರೂ ಬಂಟರು ಎಂಬ ವೇದವಾಕ್ಯದೊಂದಿಗೆ ಜೀವಿಸಬೇಕು.

ಈ ರೀತಿಯಲ್ಲಿಯೇ ಮೊದಲು ಶ್ರೀಯುತರು ಬರೆದಂತಹಾ "ಬಂಟ ಮದಿಮೆ", "ನಾವು ಬಂಟರು" ಎಂಬ ನಾಮಾಂಕಿತದಲ್ಲಿ ಈಗಾಗಲೇ ಪ್ರಕಟಗೊಂಡಿದೆ. ಮುಂದೆ ಬರುವಂತಹ “ಬಂಟ ಸಮಾಜದ ಮದುವೆಯ ವೇದಿಕೆ ಹೇಗಿರಬೇಕು" ಎಂಬ ಪುಸ್ತಕವು ಸಮಾಜಕ್ಕೆ ಮಾದರಿಯಾಗಲಿ ಎಂಬ ಮಾತನ್ನು ಹೇಳಲು ಇಚ್ಛೆ ಪಡುತ್ತೇನೆ.

ಇತೀ ತಮ್ಮವ-

ಬೂಡಿಯಾರು ರಾಧಾಕೃಷ್ಣ ರೈ

ಮಾಜಿ ಅಧ್ಯಕ್ಷರು, ಬಂಟರ ಸಂಘ, ಪುತ್ತೂರು

ಶುಭ ಹಾರೈಕೆ -ಶಶಿಕುಮಾರ್ ರೈ ಬಾಲೊಟ್ಟು

 


ಶುಭ ಹಾರೈಕೆ

ಶಶಿಕುಮಾರ್ ರೈ ಬಾಲೊಟ್ಟು

ಪರಶುರಾಮ ಸೃಷ್ಟಿಯ ಈ ತುಳುನಾಡಿನಲ್ಲಿ ಹಲವಾರು ಜಾತಿ, ಧರ್ಮದ ಜನಾಂಗಗಳಿವೆ. ಅದರಲ್ಲಿ ನಮ್ಮ ಬಂಟ ಕುಲ ಜನಾಂಗದ ಅಳಿಯಕಟ್ಟು ಸಂಸ್ಕೃತಿಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀಯುತ ದಂಬೆಕ್ಕಾನ ಸದಾಶಿವ ರೈ ಇವರು ಬರೆದ ಈ ಕೈಪಿಡಿಯು ನಮ್ಮ ಯುವ ಜನಾಂಗಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಮದುವೆ ಎಂಬುದು ವಧು-ವರರ, ಎರಡು ಮನೆಗಳ ಸಮ್ಮಿಲನದೊಂದಿಗೆ ಆ ಮನೆಗಳ ಸಂಸ್ಕೃತಿ ಸಂಪ್ರದಾಯಗಳ ಸಮ್ಮಿಲನವೂ ಹೌದು. ಅಂತಹ ಮಹತ್ವಪೂರ್ಣವಾದ ಮದುವೆ ಎಂಬ ಕಾರ್ಯದಲ್ಲಿ ಯಾವ ಲೋಪದೋಷಗಳಾಗದೆ ಎಲ್ಲಾ ಸಂಪ್ರದಾಯಗಳನ್ನು ಪಾಲಿಸುವಂತೆ ತಿಳಿಸುವ ಈ ಕೈಪಿಡಿಯು ಬಹಳ ಸಹಾಯಕಾರಿ. ಬಂಟ ಸಮಾಜದ ಕಾರ್ಯಕ್ರಮಗಳು ರೀತಿ ರಿವಾಜುಗಳ ಬಗ್ಗೆ ಶ್ರೀಯುತ ದಂಬೆಕ್ಕಾನ ಸದಾಶಿವ ರೈರವರಿಗೆ ಇರುವ ಕಾಳಜಿ ಶ್ಲಾಘನೀಯ. ಮದುವೆ ಎಂಬುದು ಒಂದು ಪವಿತ್ರ ಧರ್ಮಕಾರ್ಯ. ಮಾತಾ-ಪಿತೃಗಳು ಲಕ್ಷಾಂತರ ಹಣ ಖರ್ಚು ಮಾಡುವುದು ಮಾತ್ರ ಮುಖ್ಯವಲ್ಲ. ಮಕ್ಕಳಿಗೆ ಮದುವೆಯ ಬಗ್ಗೆ ತಿಳುವಳಿಕೆ ನೀಡುವುದೂ ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ದಂಬೆಕ್ಕಾನ ಸದಾಶಿವ ರೈಯವರು ಈ ಪುಸ್ತಕ ಬರೆಯುವ ಮೂಲಕ ತಮ್ಮ ಕಾಣಿಕೆ ನೀಡಿದ್ದಾರೆ. ಅವರ ಈ ಪ್ರಯತ್ನ ನಮ್ಮ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದೆ. ಅವರ ಈ ಉದ್ದೇಶ ಸಫಲವಾಗಲಿ ಎಂದು ಹಾರೈಸುತ್ತೇನೆ.

ಶಶಿಕುಮಾರ್ ರೈ ಬಾಲ್ಯೊಟ್ಟು 

ಅಧ್ಯಕ್ಷರು, ಬಂಟರ ಸಂಘ, ಪುತ್ತೂರು

ಆಶಯದ ಮಾತು- ಚಿಲ್ಕೆತ್ತಾರು ಎ. ಜಗಜೀವನ್ದಾಸ್ ರೈ

 ಆಶಯದ ಮಾತು

ಚಿಲ್ಕೆತ್ತಾರು ಎ. ಜಗಜೀವನ್ದಾಸ್ ರೈ

ದಂಬೆಕ್ಕಾನ ಸದಾಶಿವ ರೈಗಳಿಗೆ ಭಾರತ ದೇಶದ ಬಗ್ಗೆ, ಹಿಂದೂ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ವಿಶೇಷ ಆಸಕ್ತಿ ಹಾಗೂ ಕಾಳಜಿ. ಶಿಸ್ತು ಮತ್ತು ಉತ್ತಮ ಆಚಾರ-ವಿಚಾರಗಳನ್ನು ರೂಢಿಸಿಕೊಂಡು ಬಂದಿರುವ ಇವರು ಎಲ್ಲರಿಗೂ ಮಾದರಿ ಯಾಗುವಂತಹ ಜೀವನವನ್ನು ನಡೆಸುತ್ತಿದ್ದಾರೆ. ಕುಟುಂಬ ಪದ್ಧತಿ ಹೇಗಿರಬೇಕು, ಅಲ್ಲಿನ ಆಚಾರ-ವಿಚಾರಗಳು ಹೇಗಿರಬೇಕು. ದೇವರಲ್ಲಿ ನಂಬಿಕೆ, ಗುರುಹಿರಿಯರಿಗೆ ಗೌರವ, ಇವರ ಜೀವನದಲ್ಲಿ ಅಳವಡಿಸಿಕೊಂಡಿರುವ ವಿಚಾರಗಳು.

ಕಷ್ಟದಲ್ಲಿದ್ದವರಿಗೆ ನೆರವಾಗುವುದು, ಸಭೆ-ಸಮಾರಂಭವನ್ನು ಯೋಗ್ಯ ರೀತಿಯಲ್ಲಿ ನಡೆಸುವುದು ಇವರ ವಿಶಿಷ್ಟತೆ. 

ದಂಬೆಕ್ಕಾನ ಸದಾಶಿವ ರೈಗಳು ಬಂಟ ಸಮುದಾಯದ ಮದುವೆ ಒಂದೇ ರೀತಿ ಕ್ರಮಬದ್ಧವಾಗಿ ಬಂಟ ಸಂಸ್ಕೃತಿಯಂತೆ ಹೇಗೆ ನಡೆಯಬೇಕೆಂದು ತಮ್ಮ ಈ ಕೃತಿಯಲ್ಲಿ ತಿಳಿಸಿದ್ದಾರೆ.

ನಮ್ಮದು ಅಳಿಯ ಸಂತಾನ. ಹೆಣ್ಣಿಗೆ ಅಗ್ರಸ್ಥಾನ. ಆದ್ದರಿಂದ ಹೆಣ್ಣಿಗೆ ಮದುವೆ ಮಾಡುವಾಗ ಧಾರೆ ಏರಿಸಿ ಕೊಡುವುದು ನಮ್ಮ ಸಂಪ್ರದಾಯ. ಧಾರೆ ಎರೆದು ಕುಟುಂಬದಿಂದ ಹೊರಗೆ ಕಳುಹಿಸುವುದು ನಮ್ಮ ಸಂಪ್ರದಾಯವಲ್ಲ.

ಸದಾಶಿವ ರೈಗಳು ಕಳೆದ ಹಲವಾರು ವರ್ಷಗಳಿಂದ ಮದುವೆ ಕಾರ್ಯಕ್ರಮವನ್ನು ಕ್ರಮಬದ್ಧವಾಗಿ ನಡೆಸಿ ಅನುಭವ ಉಳ್ಳವರು. ಗಡಿಬಿಡಿ, ತಪ್ಪುಗಳನ್ನು ಸರಿಪಡಿಸಲು ಹಾಗೂ ಶಿಸ್ತುಬದ್ಧವಾಗಿ ವಿವಾಹ ಕಾರ್ಯಕ್ರಮ ನೆರವೇರಿಸಲು ಈ ಪುಸ್ತಕವನ್ನು ಬಹಳ ಶ್ರಮಪಟ್ಟು ಸಾಕಷ್ಟು ಸಂಶೋಧನೆ ಮಾಡಿ ಬರೆದಿದ್ದಾರೆ.

ಈ ಪುಸ್ತಕ ಬಂಟ ಸಮಾಜದ ವಿವಾಹ ಕಾರ್ಯಕ್ರಮದಲ್ಲಿ ಎಲ್ಲಾ ಬಂಟ ಬಂಧುಗಳಿಗೆ ಉಪಯುಕ್ತವಾಗಲಿ ಹಾಗೂ ಎಲ್ಲಾ ಬಂಟರ ವಿವಾಹ ಕಾರ್ಯಕ್ರಮ ಒಂದೇ ರೀತಿಯಲ್ಲಿ ಶಿಸ್ತುಬದ್ಧ ವಾಗಿ ನಡೆಸಲು ಪ್ರೇರಣೆಯಾಗಲಿ ಎಂದು ನಮ್ಮೆಲ್ಲರ ಆಶಯ.

ಚಿಲ್ಕೆತ್ತಾರು ಎ. ಜಗಜೀವನ್ದಾಸ್ ರೈ 

ನಿವೃತ್ತ ಎ.ಜಿ.ಎಂ., ವಿಜಯಾ ಬ್ಯಾಂಕ್

ಚಿಂತನೆಯ ನುಡಿ -ಮೀರಾ ಭಾಸ್ಕರ ರೈ

 ಚಿಂತನೆಯ ನುಡಿ

ಮೀರಾ ಭಾಸ್ಕರ ರೈ

ಮದುವೆ ಎಂದರೆ ಜೀವನದ ಗಂಡು ಹೆಣ್ಣಿನ ಶಾಶ್ವತ ಬಂಧನ. ಮದುವೆ ಎಂದರೆ ಹೆಣ್ಣಿನ ಪಾಲಿಗೆ ರಕ್ಷಾಕವಚ. ಮದುವೆ ಎಂಬ ಬಂಧನ ಇಲ್ಲದಿದ್ದರೆ ಜೀವನದಲ್ಲಿ ಗಂಡು ಹೆಣ್ಣಿಗೆ ಬೆಲೆ ಇರುತ್ತಿರಲಿಲ್ಲ. ಹಾಗೇ ಗಂಡು ಹೆಣ್ಣಿಗೆ ಮರ್ಯಾದೆಯ ಅಡಿಗಲ್ಲು. ಆರಾಮದಲ್ಲಿ ಪ್ರಪಂಚಕ್ಕೆ ತೋರ್ಪಡಿಸುವಂತಹ ಒಂದು ಕಟ್ಟುಪಾಡು. ತಂದೆ ತಾಯಿಯವರಿಗೆ ಆರಾಮದ ನಿಟ್ಟುಸಿರು. ಮತ್ತು ಮೊಮ್ಮಕ್ಕಳನ್ನು ಪಡೆಯಲು ಕಾನೂನು ಬದ್ಧವಾದ ಒಂದು ಚೌಕಟ್ಟು.

ಒಂದು ಹೆಣ್ಣಿಗೆ ಆರಾಮದಿಂದ ಇರಲು ಜೀವನದ ಒಂದು ಸ್ಥಿರವಾದ ಬಂಧನ. ಮದುವೆ ಇಲ್ಲದೆ ಗಂಡು ಹೆಣ್ಣಿಗೆ ಬದುಕಲು ಸಾಧ್ಯವಿಲ್ಲ. ಯಾಕೆಂದರೆ ಅದಕ್ಕೆ ಬೆಲೆ ಇಲ್ಲ. ಪ್ರಾಣಿಗಳ ಹಾಗೆ ಜೀವಿಸಲು ಸಾಧ್ಯವಿಲ್ಲ.

ಮದುವೆ ಆಗುವುದಿದ್ದರೂ ಹಿರಿಯರ ಆಶೀರ್ವಾದ, ದೇವರ ಕೃಪೆ, ಬಂಧು-ಬಾಂಧವರ ಸಮ್ಮುಖದಲ್ಲಿ ಆಗಬೇಕು. ಆಗ ಇದಕ್ಕೆ ಸಿಗುವ ಬೆಲೆಯೇ ಬೇರೆ. ಹಾಗೇ ಅವರ ಸಾಕ್ಷಿಯೂ ಬೇಕು. ಆಮೇಲೆ ಏನು ಏರುಪೇರಾಗುವುದಿದ್ದರೂ ಹಿರಿಯರ ಸಾಕ್ಷಿ ಇರುತ್ತದೆ.

ವಿಜಾತಿ ಮದುವೆ ಯಾವತ್ತೂ ಸರಿಯಲ್ಲ. ಯಾಕೆಂದರೆ ಯಾವುದೇ ತಂದೆ ತಾಯಿಗೂ ಇದು ಇಷ್ಟವಿರುವುದಿಲ್ಲ. ಜೀವನ ಪರ್ಯಂತ ಕೊರಗಿನಲ್ಲೇ ಕೈ ತೊಳೆಯುತ್ತಾರೆ.

ಆಮೇಲೆ ಮಕ್ಕಳು ಮರಿಗಳು ಆದ್ರೂ ಅವರಿಗೆ ಸಮಾಜದಲ್ಲಿ ಸ್ಥಾನಮಾನ ಸಿಗುವುದಿಲ್ಲ. ಎಲ್ಲರೂ ಕೈ ತೋರಿಸುವಂತಾಗುತ್ತದೆ. ಮತ್ತು ಅವರಿಗೆ ಮದುವೆಯ ಸಂದರ್ಭ ಬರುವಾಗ ಯಾವ ಜಾತಿ ಎಂದು ತೀರ್ಮಾನಿಸಲು ಆಗುವುದಿಲ್ಲ. ಒಳ್ಳೆ ಯೋಗ್ಯ ವ್ಯಕ್ತಿ ಸ್ವಲ್ಪ ಯೋಚಿಸುತ್ತಾನೆ.

ಪ್ರೀತಿ ಮದುವೆಯೂ ಸರಿಯಲ್ಲ. ಆದ್ರೆ ಅವರ ಸ್ಥಾನದಲ್ಲಿ ನಿಂತು ನೋಡಿದ್ರೆ ಒಬ್ಬನನ್ನೇ ಪ್ರೀತಿಸಿ, ಅವನನ್ನೇ ಮದುವೆ ಆದ್ರೆ ಅದು ಉತ್ತಮ. ಯಾಕೆಂದರೆ ಅವರ ಸಂಸಾರವೂ ಎಡರು-ತೊಡರು ಇಲ್ಲದೆ ಉತ್ತಮವಾಗಿ ಜೀವನ ಸಾಗುತ್ತದೆ. ಸಂಸಾರ ಉತ್ತಮವಾಗಿರುತ್ತದೆ. ಒಬ್ಬನನ್ನು ಪ್ರೀತಿಸಿ, ಇನ್ನೊಬ್ಬನನ್ನು ಮದುವೆಯಾಗುವುದು ವ್ಯಭಿಚಾರವಾಗುತ್ತದೆ.

ಹಿಂದಿನ ಕಾಲದಲ್ಲಾದರೆ ರಿಜಿಸ್ಟರ್ ಮದುವೆಯ ಅಗತ್ಯ ಇರಲಿಲ್ಲ. ಯಾಕೆಂದರೆ ಹೆಣ್ಣಿಗೆ ತುಂಬಾ ತಾಳ್ಮೆ, ಸಹನೆ, ಪ್ರೀತಿ, ಗೌರವ ಎಲ್ಲಾ ಇತ್ತು. ಆದ್ರೆ ಈಗಿನ ಕಾಲದಲ್ಲಿ ಗಂಡು ಹೆಣ್ಣು ಇಬ್ಬರೂ ಕಲಿತು ಯಾರಿಗೂ ಕಡಿಮೆ ಇಲ್ಲದಂತೆ ಬದುಕುತ್ತಾರೆ. ಬರುತ್ತಾರೆ. ಆಗ ಹೆಣ್ಣು ಇಬ್ಬರೂ ದುಡಿದು ಸುಸ್ತಾಗಿ ಮನೆಗೆ ಮನೆಯಲ್ಲಿ ಅವಳ ಹಕ್ಕಿನಂತೆ ಅಡಿಗೆ ಕೆಲಸ ಮಾಡಲು ಶುರು ಮಾಡುತ್ತಾಳೆ. ಆಗ ಅವಳಿಗೆ ಸುಸ್ತಾಗಿ ಚಿಕ್ಕ ಪುಟ್ಟ ವಿಷಯಕ್ಕೆ ಸಿಟ್ಟು ಬರುತ್ತದೆ. ಗಂಡಾದವನು ಆರಾಮದಿಂದ ಕೂತಿರುವಾಗ ಅದನ್ನು ನೋಡಿ ಹೆಂಡ್ತಿಗೆ ಬೇಸರ ಬಂದು, ಏನಾದ್ರೂ ಜಗಳ ಮಾಡುತ್ತಾಳೆ. ಆಗ ಅದು ವಿಚ್ಛೇದನದವರೆಗೆ ಬರುತ್ತದೆ. ನಾನು ನಿನ್ನಿಂದ ಕಡಿಮೆ ಇಲ್ಲ ಎಂದು ಜಗಳ ಮಾಡುತ್ತಾರೆ. ಅದಕ್ಕಾಗಿ ಹಿರಿಯರ ಮಾರ್ಗದರ್ಶನಕ್ಕೆ ಕಾನೂನು ಕಟ್ಟಲೆಗೆ ರಿಜಿಸ್ಟರ್ ಆದ್ರೆ ಒಳ್ಳೆಯದು.

ನಮ್ಮ ಮದುವೆ ಎಂಬ ಬಂಧನಕ್ಕೆ ನಿಶ್ಚಿತ ಪದ್ಧತಿ ಬೇಕು. ಒಟ್ಟಾರೆ ಆದ್ರೆ ನಮಗೂ ಪ್ರಾಣಿಗಳಿಗೂ ವ್ಯತ್ಯಾಸವಿರುವುದಿಲ್ಲ. ಒಂದು ಪದ್ಧತಿ ಅಂತ ಇದ್ರೆ ಅದು ಮುಂದಿನ ಜನಾಂಗಕ್ಕೂ ಕಾನೂನು ಅಂತ ಅನಿಸುತ್ತದೆ. ಅದು ವಂಶ ವಂಶಕ್ಕೂ ಕಟ್ಟುಪಾಡು ಅನಿಸುತ್ತದೆ.

ಹಾಗೇ ಮದುವೆಗೆ ಮುಹೂರ್ತ ಬೇಕೇ ಬೇಕು. ಅದನ್ನು ನೋಡಿಯೇ ಮದುವೆ ಪಾರ್ಟಿಯವರು ಸಜ್ಜಾಗುತ್ತಾರೆ.

ಮದುವೆಗೆ ಬರುವವರಿಗೂ ಸಮಯಪ್ರಜ್ಞೆ ಇರುತ್ತದೆ. ಯಾವ ವಿಷಯಕ್ಕಾದರೂ ಸಮಯಪ್ರಜ್ಞೆ ಪ್ರಾಮುಖ್ಯ.

ಅಂತೂ ಈಗಿನ ಕಾಲದಲ್ಲಿ ಜನರೆಲ್ಲರೂ ಅವಸರದಲ್ಲಿರುತ್ತಾರೆ.

ಅದಕ್ಕಾಗಿ ಸಮಯ ಮುಹೂರ್ತ ಬೇಕು. ಮದುವೆಗೆ ಸಾಕ್ಷಿ ದೇವರ ದೀಪ ಹಾಗೂ ನಮಗೆ ಜನ್ಮ ಕೊಟ್ಟ ತಂದೆ ತಾಯಿ ಮತ್ತು ನಮ್ಮನ್ನು ಹೊತ್ತಿರುವ ಭೂಮಾತೆ.

ಕೊನೆಯದಾಗಿ, ಆಮಂತ್ರಣ ಪತ್ರಿಕೆ. ಜನರನ್ನು ಆಮಂತ್ರಿಸಲು, ಒಂದು ಕರೆಯೋಲೆ ಮತ್ತು ಘಳಿಗೆ, ಮುಹೂರ್ತ ಸ್ಥಳ, ದಿವಸಗಳನ್ನು ನೋಡಲು ಒಂದು ಕರೆ.

ಮೀರಾ ಭಾಸ್ಕರ ರೈ

ಅಧ್ಯಕ್ಷರು, ಮಹಿಳಾ ಬಂಟರ ಸಂಘ, ಪುತ್ತೂರು


ಆಶಯ ನುಡಿ- ಕುಮುದ ಎಲ್. ಎನ್. ಶೆಟ್ಟಿ

 ಆಶಯ ನುಡಿ

ಕುಮುದ ಎಲ್. ಎನ್. ಶೆಟ್ಟಿ

ಬಂಟರ ವಿವಾಹ ಪದ್ಧತಿ ವಿವಾಹ ಸಂದರ್ಭದಲ್ಲಿ ಅನುಸರಿಸ ಬೇಕಾದ ಕ್ರಮಗಳನ್ನು ತಾವು ತಮ್ಮ ಹಿಂದಿನ ಪುಸ್ತಕದಲ್ಲಿ ಸವಿವರವಾಗಿ ಬರೆದಿರುತ್ತೀರಿ. ಅದು ನಮ್ಮ ಎಲ್ಲಾ ಬಂಟ ಬಾಂಧವರಿಗೆ ಕೈ ಕನ್ನಡಿಯಾಗಿರುತ್ತದೆ, ಅಂತ ನಾನು ಭಾವಿಸುತ್ತೇನೆ. ಈ ಹಿಂದೆ ನಾನು ಮಹಿಳಾ ಘಟಕದ ಅಧ್ಯಕ್ಷೆಯಾಗಿರುವಾಗ ತಾವು ಬಂಟರ ವಿವಾಹ ಪದ್ಧತಿ ಮತ್ತು ಅನುಸರಿಸಬೇಕಾದ ಕ್ರಮಗಳನ್ನು ಸವಿವರವಾಗಿ ಮಾಹಿತಿ ಕೊಟ್ಟಿರುತ್ತೀರಿ. ಇನ್ನು ಮುಂದೆ ತಾವು ಬರೆದು ಪ್ರಕಾಶಿಸಲಿರುವ ಬಂಟರ ವಿವಾಹ ಪದ್ಧತಿಯನ್ನು ಎಲ್ಲಾ ಬಂಟ ಜಾತಿ ಬಾಂಧವರು ಸ್ವೀಕರಿಸಿ ಅನುಷ್ಠಾನಕ್ಕೆ ತರಲಿ ಎಂದು ಆಶಿಸುವ ನಿಮ್ಮ ಸಂಬಂಧಿ-

ಕುಮುದ ಎಲ್. ಎನ್. ಶೆಟ್ಟಿ

ತಿಂಗಳಾಡಿ ಮನೆ

ಮಾಜಿ ಅಧ್ಯಕ್ಷರು, ಪುತ್ತೂರು ತಾಲೂಕು ಬಂಟರ ಮಹಿಳಾ ಘಟಕ


ಆಶಯ ನುಡಿ - ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ

 


ಬಂಟರ ಜೀವನ ಪದ್ಧತಿ ಆಚಾರ-ವಿಚಾರಗಳು ಬೇರೆ ಜಾತಿ ಯವರಿಂದ ಸ್ವಲ್ಪ ವಿಭಿನ್ನವಾಗಿರುತ್ತದೆ. ಬಂಟರಲ್ಲಿ ಅಳಿಯಕಟ್ಟು, ಹೆಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಬಂಟ ವಿವಾಹದ ಆಚರಣೆಯನ್ನು ಹೇಗಿರಬೇಕೆಂದು ತಮ್ಮ ಹಿಂದಿನ ಪುಸ್ತಕದಲ್ಲಿ ಸವಿವರವಾಗಿ ಬರೆದಿರುತ್ತೀರಿ. ಅದು ನಮ್ಮ ಎಲ್ಲಾ ಬಂಟ ಬಾಂಧವರಿಗೆ ಕೈ ಕನ್ನಡಿಯಾಗಿರುತ್ತದೆ ಅಂತ ನನ್ನ ಭಾವನೆ.

ತಾವು ಮುಂದೆ ಬರೆದು ಪ್ರಕಾಶಿಸಲಿರುವ ಈ ಬಂಟ ಮದುವೆ ಪದ್ಧತಿ, ಕ್ರಮ ಆಚರಣೆ ಎಲ್ಲಾ ಬಂಟ ಜಾತಿ ಬಾಂಧವರಿಗೆ ದಾರಿದೀಪವಾಗಲಿ ಎಂದು ನಾನು ಆಶಿಸುತ್ತೇನೆ. ತನ್ನ ಜಾತಿಯ ಬಗ್ಗೆ ಸದುದ್ದೇಶವನ್ನು ಬೆಳೆಸಿಕೊಂಡಿರುವಂತಹ ತಮಗೆ, ನೀವು ನಂಬಿರುವ ದೇವರು, ದೈವಗಳ ಅನುಗ್ರಹವಿರಲಿ ಎಂದು ನಾನು ಆಶಿಸುತ್ತೇನೆ.

- ಎ. ಲಕ್ಷ್ಮೀನಾರಾಯಣ ಶೆಟ್ಟಿ

ತಿಂಗಳಾಡಿ ಮನೆ

ಮಾಜಿ ಅಧ್ಯಕ್ಷರು, ಪುತ್ತೂರು ತಾಲೂಕು ಬಂಟರ ಸಂಘ

(02-09-2017ರಿಂದ 11-01-2020)

ಅಭಿನಂದನಾ ಮಾತು- ನರೇಂದ್ರ ರೈ ದೇರ್ಲ

 ಅಭಿನಂದನಾ ಮಾತು

ನರೇಂದ್ರ ರೈ ದೇರ್ಲ 

ಹಿರಿಯರಾದ ಶ್ರೀ ದಂಬೆಕ್ಕಾನ ಸದಾಶಿವ ರೈಯವರು ಹಿಂದೊಮ್ಮೆ 'ಬಂಟ ಮದಿಮೆ' ಎಂಬ ಕಿರುಹೊತ್ತಗೆಯನ್ನು ಪ್ರಕಟಿಸಿದ್ದರು. ಅದಕ್ಕೆ ನಾನೇ ಬೆನ್ನುಡಿ ಬರೆದ ನೆನಪು. ಒಂದು ಸಮಾಜದ ಕಟ್ಟುಪಾಡುಗಳನ್ನು ಸಾಂಪ್ರದಾಯಿಕ ಆಯಾಮದಲ್ಲಿ ನಿರ್ಬಂಧಿಸಿ, ನಿಯಮಗಳನ್ನು ಮರುಜೋಡಿಸಿ ನಿರ್ವಚಿಸುವ ಕೃತಿಯದು. ಹಾಗಂತ ಬಂಟರೇ ಇರಲಿ ಈ ಲೋಕದ ಯಾವುದೇ ಮತ, ಧರ್ಮ, ಜಾತಿಯವರೇ ಇರಲಿ ಸಂಸ್ಕೃತಿ, ಆಚಾರ-ವಿಚಾರ. ನಿಯಮ, ವಿಧಿಗಳು ಇದಮಿತ್ಥಂ ಆಗಿ ಉಳಿದಿಲ್ಲ. ವಿಕಾಸವಾದ: ನಾಗರಿಕತೆ, ವಲಸೆ, ಶಿಕ್ಷಣ, ನವಮಾಧ್ಯಮ, ಅಂತರ್ ಜಾತೀಯ; ಮತೀಯ-ಧರ್ಮಿಯ ಮದುವೆಗಳು ಇಂಥ ಅಲಿಖಿತ ಶಿಷ್ಟಾಚಾರ ವಿಧಿ-ವಿಧಾನಗಳನ್ನು ಮುರಿದು ಮುಂದೋಡಿದೆ. ಈ ಕುರಿತು ಇತಿಹಾಸ ಮತ್ತು ವರ್ತಮಾನ ಮನುಷ್ಯ ಕೇಂದ್ರಿತ ಕ್ಷೇಮದ ಹಿನ್ನೆಲೆಯಲ್ಲಿ ಎತ್ತುವ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವೇ ಇಲ್ಲ.

ಬಂಟರು ಸುಶಿಕ್ಷಿತರು. ಬಹುಬಗೆಗಳಲ್ಲಿ ದಾರಿ ಕಂಡುಕೊಂಡು ಇಂದು ಜಗತ್ತನ್ನು ಆವರಿಸಿಕೊಂಡಿದ್ದಾರೆ. ರಾಜಕೀಯ, ಉದ್ಯಮ, ಸಿನಿಮಾ, ಕೃಷಿ, ಶಿಕ್ಷಣ, ಬ್ಯಾಂಕಿಂಗ್ ಹೀಗೆ ಬಹುಬಗೆಗಳಲ್ಲಿ ಬೆಳೆದಿದ್ದಾರೆ. ಇಷ್ಟಾದರೂ ಈ ಸಮಾಜದ ಒಂದು ವಿಶಿಷ್ಟತೆಯೆಂದರೆ ಎಷ್ಟೇ ಆಧುನಿಕರಾದರೂ ಅದೇ ಕಾಲಕ್ಕೆ ಪರಂಪರೆಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುವ ಸಂಪ್ರದಾಯಿಕತೆ ಈ ಸಮಾಜದಲ್ಲಿ ಬೇರೆಯವರಿಗಿಂತ ಹೆಚ್ಚು.

ದಂಬೆಕ್ಕಾನ ಸದಾಶಿವ ರೈಯವರು ಬಂಟ ಸಮಾಜದವರ ಬದಲಾವಣೆಯ ವೇಗ, ಬೀಸುಗಾಳಿಗೆ ಒಂದು ಸಾಂಪ್ರದಾಯಿಕ ಕಟ್ಟ ಹಾಕಲು ಈ ಮದುವೆಯ 'ಕೈಪಿಡಿ'ಯನ್ನು ರಚಿಸಿದ್ದಾರೆ. ಗೃಹಸ್ಥ-ಗೃಹಿಣಿಯಾಗುವ 'ಮದುವೆ' ವ್ಯಕ್ತಿ ಬದುಕಿನ ಬಹುಮುಖ್ಯ ಘಟಕ. ಆಧುನಿಕತೆಯ ಸಂದರ್ಭದಲ್ಲಿ, ಎಲ್ಲವೂ ಕಳೆದುಹೋಗುವ ದಿನಮಾನದಲ್ಲಿ ಅನೇಕ ಹಿರಿಯರನ್ನು, ಬಂಟ ಮದುವೆಯ ನಿರ್ವಾಹಕರನ್ನು ಮಾತನಾಡಿಸಿ ರೈಯವರು ಈ ಕಿರುಹೊತ್ತಗೆಯನ್ನು ಸಿದ್ಧಪಡಿಸಿದ್ದಾರೆ.

ಪುಸ್ತಕ ನೋಡಿಕೊಂಡು ಮದುವೆ ಮಾಡಿಸಲು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮತ್ತು ಅದು ನೂರಕ್ಕೆ ನೂರರಷ್ಟು ಹೀಗೆಯೇ ಆಗಬೇಕೆಂದು ನಿರ್ಬಂಧಿಸುವುದು ಕಷ್ಟವೇ. 

ಜಾತಿ ಒಂದೇ ಆದರೂ ಪ್ರಾದೇಶಿಕವಾದ ಬದಲಾವಣೆಗಳಿರುವುದು ಸಹಜ. ಸ್ಥಳೀಯತೆ-ಸಾಮೀಪ್ಯ ಇಂಥ ಸಂದರ್ಭದಲ್ಲಿ ಪ್ರಭಾವ ಬೀರುತ್ತವೆ. ಹುಡುಗನೋ, ಹುಡುಗಿಯೋ ಬೇರೆ ಜಾತಿ-ಧರ್ಮದವರಾದರೆ ರಾಜಿಯಾಗಲೇ ಬೇಕಾಗುತ್ತದೆ.

ಏನೇ ಇರಲಿ, ಅವ್ಯವಸ್ಥಿತ, ಗೊಂದಲಕಾರಿ ಮದುವೆಯ ವಿಧಿ-ವಿಧಾನಗಳಿಗೆ ಒಂದು ಚೌಕಟ್ಟು ಹಾಕುವುದು ಒಳ್ಳೆಯದೇ ಆಗಿದೆ. ಅಂಥ ಪರಿಪೂರ್ಣ ನೀತಿರೂಪಣೆಯ ಕೈಪಿಡಿ ಇದು. ಎಲ್ಲರ ನೆರವಿಗೆ ಬರಲೆಂದು ಬಯಸಿ ಈ ಕಾರಣಕ್ಕಾಗಿ ದಂಬೆಕ್ಕಾನರನ್ನು ಅಭಿನಂದಿಸುವೆ.

ಪುತ್ತೂರು

18-10-2020

ನರೇಂದ್ರ ರೈ ದೇರ್ಲ

ಹಿರಿಯ ಸಾಹಿತಿ


ಸಂದೇಶ CA ಸುಧೀರ್ ಕುಮಾರ್ ಶೆಟ್ಟಿ

 ಸಂದೇಶ

CA ಸುಧೀರ್ ಕುಮಾರ್ ಶೆಟ್ಟಿ

ಆದರಣೀಯರೇ,

ಬಂಟ ಸಮಾಜದ ಆಚಾರ-ವಿಚಾರ, ನಡೆ-ನುಡಿಗಳ ಬಗ್ಗೆ ಸರಿಯಾದ ತಿಳುವಳಿಕೆಯ ಕೊರತೆ ಇರುವ ಈ ಕಾಲಘಟ್ಟದಲ್ಲಿ ನಿಮ್ಮ ಈ ಕೈಪಿಡಿ ಅತ್ಯಂತ ಮಹತ್ವದ ಪಾತ್ರ ವಹಿಸುವುದರಲ್ಲಿ ಎರಡು ಮಾತಿಲ್ಲ. ಬಂಟರ ಶುಭಕಾರ್ಯಗಳಲ್ಲಿ ಅತ್ಯಂತ ಮಹತ್ವದ ಹಾಗೂ ಪ್ರಾಮುಖ್ಯವಾದ ಮದುವೆ ಸಮಾರಂಭ ಯಾವ ರೀತಿಯಲ್ಲಿ ನಡೆಯಬೇಕು, ನಿಶ್ಚಿತಾರ್ಥ ವಿಧಿಯಿಂದ ತೊಡಗಿ, ಮದುವೆ ಮಂಟಪದ ನಿರ್ವಹಣೆ, ತದನಂತರದ ವಿಧಿ-ವಿಧಾನಗಳನ್ನು ಸವಿವರವಾಗಿ ನೀವು ವಿವರಿಸಿದ್ದೀರಿ.

ನಿಮ್ಮ ಈ ಕೃತಿಯಿಂದ ಮದುವೆ ಸಮಾರಂಭಗಳು ನಮ್ಮ ಪುರಾತನ ಪದ್ಧತಿಯನ್ನು ಅಳವಡಿಸಿಕೊಂಡು ಒಂದೇ ರೀತಿಯಲ್ಲಿ ನಡೆಸಿಕೊಳ್ಳಲು ಸಹಕಾರಿಯಾಗಲಿದೆ ಎನ್ನುವುದಕ್ಕೆ ಯಾವುದೇ ಸಂಕೋಚವಿಲ್ಲ. ಒಂದೊಮ್ಮೆ ದಿ। ಮೂಲ್ಕಿ ಹರಿಪೂಂಜರ, ದಿ। ವಕೀಲ ಸೀತಾರಾಮ ಶೆಟ್ಟರ ಮುತುವರ್ಜಿಯಲ್ಲಿ ಮದುವೆ ಮಂಟಪದಲ್ಲಿ ಮಾರ್ಗದರ್ಶನ ಕಾಣಸಿಗುತ್ತಿತ್ತು. ಈಗ ಅಲ್ಲೊಂದು ಇಲ್ಲೊಂದು ಸಮಾರಂಭದಲ್ಲಿ ಬೆರಳೆಣಿಕೆಯಷ್ಟು ಹಿರಿಯರು  ಮಾರ್ಗದರ್ಶನ ಮಾಡುವುದನ್ನು ಹೊರತುಪಡಿಸಿ, ಹೆಚ್ಚಿನ ಕಡೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮದುವೆ ಮಂಟಪದ ಕಾರ್ಯ ನಿರ್ವಹಿಸುವುದನ್ನು ನಾವು ಕಾಣುತ್ತಿದ್ದೇವೆ. ನೀವು ಬಹಳ ಶ್ರಮದಿಂದ, ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಮದುವೆ ಸಮಾರಂಭದಲ್ಲಿ ಸಮಾನತೆ ಬಯಸುವ ನಿಟ್ಟಿನಲ್ಲಿ ಈ ಕೈಪಿಡಿ ಮುದ್ರಿಸಿದುದರಿಂದ ಬರುವ ದಿನಗಳಲ್ಲಿ ಗುರಿಕ್ಕಾರರು ಒಂದೇ ರೀತಿಯ ವಿಧಾನಗಳನ್ನು ಅನುಸರಿಸುವರು ಎಂದು ನಂಬುತ್ತೇನೆ.

ಜಾಗತಿಕ ಬಂಟ ಪ್ರತಿಷ್ಠಾನದ ಸರ್ವ ಸದಸ್ಯರಿಗೆ ಈ ಕೈಪಿಡಿಯ ಪ್ರತಿಯನ್ನು ತಲಪಿಸುವ ಕಾರ್ಯವನ್ನು ನಾವು ಮಾಡ ಬಯಸುತ್ತೇವೆ. ನಿಮ್ಮ ಕೈಪಿಡಿಯನ್ನು ಇಂಗ್ಲಿಷ್ಗೆ ಭಾಷಾಂತರ ಮಾಡಿ ಮುದ್ರಿಸುವ ಕಾರ್ಯ ನಡೆದರೆ, ನಮ್ಮ ಮುಂದಿನ ಪೀಳಿಗೆಗೆ ಇದನ್ನು ಓದಿ, ಮದುವೆ ಸಮಾರಂಭದ ನಿರ್ವಹಣೆಯ ಮಾಹಿತಿ ಪಡೆಯುವಲ್ಲಿ ಸಹಕಾರಿಯಾಗಬಹುದು. ಈ ಸಾಧನೆ ಕೂಡಾ ನಿಮ್ಮಿಂದ ನೆರವೇರುವುದರೊಂದಿಗೆ, ಇನ್ನೂ ಹಲವು ಕೃತಿಗಳನ್ನು ರಚಿಸುವ ಸದವಕಾಶವನ್ನು ಭಗವಂತ ಅನುಗ್ರಹಿಸಲಿ ಎಂದು ಬೇಡುತ್ತಾ,

ಇತೀ,

- CA ಸುಧೀರ್ ಕುಮಾರ್ ಶೆಟ್ಟಿ 

ಯಣ್ಮಕಜೆ                                                                                                                         ಕಾರ್ಯದರ್ಶಿ

27-12-2021                                                                             ಜಾಗತಿಕ ಬಂಟ ಪ್ರತಿಷ್ಠಾನ (ರಿ.), ಮಂಗಳೂರು

ಸಂದೇಶ - ಐಕಳ ಹರೀಶ್ ಶೆಟ್ಟಿ

 ಸಂದೇಶ

ಐಕಳ ಹರೀಶ್ ಶೆಟ್ಟಿ

ಬಂಟ ಸಮಾಜದಲ್ಲಿ ಮದುವೆ ఎంబ ಕಾರ್ಯವನ್ನು బంట ಸಮಾಜದ ಇತಿಹಾಸವನ್ನು ಅರಿತು ಅದಕ್ಕನುಗುಣವಾಗಿ ವ್ಯವಸ್ಥಿತವಾಗಿ ನಡೆಯಬೇಕಾದರೆ ಬಂಟರ ಆಚಾರ, ವಿಚಾರಗಳೊಂದಿಗೆ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಜೋಡಿಸಿಕೊಂಡು 'ಬಂಟ ಮದುವೆ' ಎಂಬ ಪುಸ್ತಕವನ್ನು ಹೊರತರಲು ತೀರ್ಮಾನಿಸಿರುವುದು ಅತ್ಯಂತ ಸಂತೋಷದಾಯಕವಾದ ವಿಚಾರ.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷನ ನೆಲೆಯಲ್ಲಿ ನಾನು ಈ ವಿಚಾರವನ್ನು ಇಡೀ ಬಂಟ ಸಮಾಜಕ್ಕೆ ಅರ್ಪಣೆ ಯಾಗಲು ಪ್ರಯತ್ನಿಸುತ್ತೇನೆ. ಅಲ್ಲದೆ ನಿಮ್ಮ ಯೋಚನೆ ಯೋಜನೆಗಳು ಉತ್ತಮ ರೂಪದಲ್ಲಿ ಮೂಡಿ ಬಂದು 'ಬಂಟ ಮದುವೆ' ಎಂಬ ಪುಸ್ತಕವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಹಿರಿಯರಾದ ತಮ್ಮ ಆಶೀರ್ವಾದವನ್ನು ಬೇಡಿಕೊಳ್ಳುತ್ತೇನೆ.

- ಶುಭಾಶಯಗಳೊಂದಿಗೆ

ಐಕಳ ಹರೀಶ್ ಶೆಟ್ಟಿ

ಅಧ್ಯಕ್ಷರು

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು


ಸಂದೇಶ - ಸಂಜೀವ ಶೆಟ್ಟಿ ಸಂಪಿಗೇಡಿ

 ಸಂದೇಶ

ಸಂಜೀವ ಶೆಟ್ಟಿ ಸಂಪಿಗೇಡಿ

11-11-2021

ಬಂಟ ಸಮಾಜದ ಮದುವೆಯ ವಿಧಿವಿಧಾನಗಳನ್ನು ವ್ಯವಸ್ಥಿತ ರೀತಿ ಯಲ್ಲಿ ನಿರ್ವಹಿಸುವ ಬಗ್ಗೆ 'ಬಂಟ ಮದುವೆ ಹಾಗೂ ಬಂಟ ಗುರಿಕ್ಕಾರ' ಎಂಬ ಒಂದು ಕೈಪಿಡಿಯನ್ನು ತಾವು ಪ್ರಕಟಿಸುವ ಚಿಂತನೆಯನ್ನು ಮಾಡಿರುವುದು ಅತ್ಯುತ್ತಮ ಚಿಂತನೆಯಾಗಿದೆ.

ಬಂಟ ಸಮಾಜದ ಶುಭ ಕಾರ್ಯಕ್ರಮಗಳು ನಮ್ಮ ಹಿರಿಯರು ನಡೆಸಿಕೊಂಡು ಬಂದ ಕಟ್ಟುಕಟ್ಟಲೆಯಂತೆ ಕ್ರಮಬದ್ಧವಾಗಿ ನಡೆಯಲು ತಾವು ಪ್ರಕಟಿಸುತ್ತಿರುವ ಈ ಕೈಪಿಡಿಯು ಸಮಾಜಕ್ಕೆ ಒಂದು ಮಾರ್ಗದರ್ಶಿ ಕೃತಿಯಾಗಿ ಮೂಡಿಬರಲಿ.

ಈ ಕೃತಿಯೂ ಸುಂದರವಾಗಿ ಪ್ರಕಟಗೊಂಡು ಸಮಾಜ ಬಾಂಧವರಿಗೆ ದೊರಕಲಿ ಹಾಗೂ ಮುಂದೆಯೂ ಸಮಾಜಕ್ಕೆ ಉತ್ತಮ ಕೃತಿಗಳನ್ನು ನೀಡಲು ದೇವರು ತಮಗೆ ಆಯುರಾರೋಗ್ಯ ಭಾಗ್ಯವನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ,

ಸಂಜೀವ ಶೆಟ್ಟಿ ಸಂಪಿಗೇಡಿ

ಜೊತೆ ಕಾರ್ಯದರ್ಶಿ

ಬಂಟರ ಯಾನೆ ನಾಡವರ ಮಾತೃ ಸಂಘ (ರಿ.), ಮಂಗಳೂರು


ಸಂದೇಶ - ಗೋಪಾಲಕೃಷ್ಣ ಶೆಟ್ಟಿ

 ಸಂದೇಶ

ಗೋಪಾಲಕೃಷ್ಣ ಶೆಟ್ಟಿ

06-11-2021

ಬಂಟ ಸಮುದಾಯದ ಮದುವೆಯ ವಿಧಿವಿಧಾನಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುವ ಬಗ್ಗೆ 'ಬಂಟ ಮದುವೆ ಹಾಗೂ ಬಂಟ ಗುರಿಕ್ಕಾರ' ಎಂಬ ಮಹತ್ತ್ವದ ಮಾರ್ಗದರ್ಶಿ ಕೈಪಿಡಿಯೊಂದನ್ನು ಪ್ರಕಟಿಸುವ ತಮ್ಮ ಚಿಂತನೆ ಅತ್ಯುತ್ತಮ ಹಾಗೂ ಅಭಿನಂದನಾರ್ಹ.

ಬಂಟ ಸಮಾಜದ ಅವೆಷ್ಟೋ ಶುಭ ಕಾರ್ಯಕಲಾಪಗಳು, ಕೌಟುಂಬಿಕ ಕಾರ್ಯಕ್ರಮಗಳು ಅನ್ಯ ಸಮಾಜದ ಪ್ರಭಾವ-ಅನುಕರಣೆಗಳಿಂದ ವಿಭಿನ್ನ ರೀತಿಯಲ್ಲಿ ನಡೆಯುತ್ತಿರುವ ಇಂದಿನ ದಿನಗಳಲ್ಲಿ ತಾವು ಪ್ರಕಟಿಸುತ್ತಿರುವ ಕೈಪಿಡಿಯು ಸಮಾಜಕ್ಕೆ ಒಂದು ದಾರಿದೀಪವಾಗಲೆಂಬುದೇ ನಮ್ಮ ಆಶಯ.

ನಮ್ಮ ಬಂಟ ಸಮಾಜದ ಬಗ್ಗೆ ವಿಶೇಷ ಒಲವು ಹಾಗೂ ಕಾಳಜಿಯನ್ನು ಹೊಂದಿರುವ ತಾವು ಈಗಾಗಲೇ 'ಬಂಟರ ಮದುವೆ' ಮತ್ತು 'ನಾವು ಬಂಟರು' ಎಂಬೆರಡು ಕೃತಿಗಳನ್ನು ಹೊರತಂದಿರುವುದು ಹೆಮ್ಮೆಯ ಸಂಗತಿ.

ಬಂಟರ ಸಾಮಾಜಿಕ, ಕೌಟುಂಬಿಕ ಆಚರಣೆ-ನಡವಳಿಕೆಗಳ ಬಗ್ಗೆ ವಿಶೇಷ ಬೆಳಕು ಚೆಲ್ಲಬಲ್ಲ ತಮ್ಮ ಕೃತಿಗಳು ಬಂಟ ಸಮುದಾಯದ ಅಸ್ಮಿತೆಯನ್ನು ಉಳಿಸುವಲ್ಲಿ ಅತ್ಯಂತ ಪ್ರಮುಖ ವಾದವುಗಳು ಎಂಬ ಪ್ರಾಮಾಣಿಕ ಅನಿಸಿಕೆ ನಮ್ಮೆಲ್ಲರದಾಗಿದೆ. ತಮ್ಮ ಇಂತಹ ಕೃತಿರಚನಾ ಕಾರ್ಯ ಇನ್ನಷ್ಟು ಮುಂದುವರಿಯಲಿ ಮತ್ತು ಸಮಾಜಮುಖಿಯಾದ ತಮ್ಮ ಚಿಂತನೆಗಳು ತಮ್ಮ ಬರವಣಿಗೆಯಲ್ಲಿ ಅನೂಚಾನವಾಗಿ ಹರಿದುಬರಲಿ ಎಂದು ಮನದುಂಬಿ ಹಾರೈಸುತ್ತಿದ್ದೇವೆ.

ಅಧ್ಯಯನಶೀಲವಾಗಿರುವ ತಮ್ಮ ನೂತನ ಕೃತಿಯೂ ಸುಂದರವಾಗಿ ಪ್ರಕಟಗೊಂಡು ಸಮಾಜಬಾಂಧವರೆಲ್ಲರನ್ನು ತಲುಪಲಿ ಹಾಗೂ ಮುಂದೆಯೂ ಸಮಾಜಕ್ಕೆ ಉತ್ತಮ ಕೃತಿಗಳನ್ನು ನೀಡುವಂತೆ ದೇವರು ತಮಗೆ ಆಯುರಾರೋಗ್ಯ ಭಾಗ್ಯವನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ,

ಗೋಪಾಲಕೃಷ್ಣ ಶೆಟ್ಟಿ

ಪ್ರಧಾನ ಕಾರ್ಯದರ್ಶಿ

ಬಂಟರ ಯಾನೆ ನಾಡವರ ಮಾತೃ ಸಂಘ (ರಿ.), ಮಂಗಳೂರು


ಸಂದೇಶ - ಕೃಷ್ಣಪ್ರಸಾದ್ ರೈ

 ಸಂದೇಶ

ಕೃಷ್ಣಪ್ರಸಾದ್ ರೈ

ಶ್ರೀಯುತ ದಂಬೆಕ್ಕಾನ ಸದಾಶಿವ ರೈಯವರಿಗೆ ಮಾಡುವ ಸಪ್ರೇಮ ವಂದನೆಗಳು.

ಶ್ರೀಯುತರೇ, ಬಂಟ ಸಮಾಜದ ಆಚಾರ-ವಿಚಾರಗಳು, ತುಳು ಸಂಸ್ಕೃತಿಗಳು ಗೊಂದಲದ ಗೂಡಾಗಿರುವ ಈ ಸಂದರ್ಭದಲ್ಲಿ ಇವುಗಳಿಗೆ ಸಂದರ್ಭಕ್ಕನುಗುಣವಾಗಿ ಮಾರ್ಗಸೂಚಿಯಾಗಿ, ಬಂಟ ಸಮಾಜದ ನಿಶ್ಚಿತಾರ್ಥ, ಮದುವೆಯ ಬಗ್ಗೆ ಕೈಪಿಡಿಯನ್ನು ವಿಶೇಷ ಪುಸ್ತಕ ರೂಪದಲ್ಲಿ ಹೊರತರಲುದ್ದೇಶಿಸಿದ್ದೀರಿ. ಇದು ಸಮಯೋಚಿತವಾಗಿದೆ.

ನಮ್ಮ ಸಮಾಜದಲ್ಲಿ, ನಿಶ್ಚಿತಾರ್ಥ, ಮದುವೆಯಿಂದ ಮೊದಲ್ಗೊಂಡು, ವ್ಯಕ್ತಿಯ ಮರಣದ ತನಕ ಹಲವಾರು ಕಾರ್ಯಕ್ರಮಗಳಿವೆ. ಈ ಕಾರ್ಯಕ್ರಮಗಳು ನಿಶ್ಚಿತ ನಿರ್ದೇಶನಗಳ ಕೊರತೆಯಿಂದ, ಸಮಾಜದ ಕುಟುಂಬದ ಹಿರಿಯರ ಮಾರ್ಗದರ್ಶನದ ಕೊರತೆಯಿಂದ, ತಿಳುವಳಿಕೆಯ ಕೊರತೆಯಿಂದ, ಅನ್ಯ ಸಮಾಜದ ಅನುಕರಣೆಗಳಿಂದ, ಸಮಾಜದ ಕಾರ್ಯಕ್ರಮಗಳ ವಿಧಿ-ವಿಧಾನಗಳು ದಾರಿ ತಪ್ಪಿದಂತಿವೆ. ಆದುದರಿಂದ ನಿಮ್ಮ ಈ ಪ್ರಯತ್ನವು ಸಮಾಜಕ್ಕೆ, ಸಮಾಜದ ಕಾರ್ಯಕ್ರಮಗಳಿಗೆ ದಾರಿದೀಪದಂತೆ, ಪ್ರತಿಯೊಂದು ಮನೆಯಲ್ಲಿಯು ಈ ಪುಸ್ತಕವು ಮಾರ್ಗದರ್ಶಕ ಕೃತಿಯಂತಾಗುವುದರಲ್ಲಿ ಸಂಶಯವಿಲ್ಲ.

ಶ್ರೀಯುತರೇ, ತಮ್ಮಿಂದ ಇನ್ನು ಮುಂದೆಯೂ ಈ ತರಹದ ಸಂಶೋಧನ ಕೃತಿಗಳು ಹೊರಬರಲಿ, ಅವುಗಳಿಂದ ಈಗಿರುವ ಕುಟುಂಬಗಳ ಗುರಿಕ್ಕಾರರ ಕೊರತೆಯು ನೀಗುವಂತಾಗಲಿ, ಸಮಾಜವು ಅಭ್ಯುದಯವನ್ನು ಕಾಣುವಂತಾಗಲಿ, ನೀವು ನಂಬಿರುವ ದೈವ, ದೇವರುಗಳು ನಿಮ್ಮನ್ನು ಸದಾ ಹರಸಿ, ಆಯುರಾರೋಗ್ಯ ಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ-

ಕೃಷ್ಣಪ್ರಸಾದ್ ರೈ

ಕೋಶಾಧಿಕಾರಿ

ಬಂಟರ ಯಾನೆ ನಾಡವರ ಮಾತೃ ಸಂಘ (ರಿ.)

ಬಂಟ್ಸ್ ಹಾಸ್ಟೆಲ್, ಮಂಗಳೂರು - 575 003


ಸಂದೇಶ-ಮಾಲಾಡಿ ಅಜಿತ್ ಕುಮಾರ್ ರೈ

 ಸಂದೇಶ

ಮಾಲಾಡಿ ಅಜಿತ್ ಕುಮಾರ್ ರೈ

30-03-2021

ಸನ್ಮಾನ್ಯ ದಂಬೆಕ್ಕಾನ ಸದಾಶಿವ ರೈಗಳು ಬಂಟ ಮದುವೆ ಹಾಗೂ ಬಂಟ ಗುರಿಕ್ಕಾರ ವಿಷಯದಲ್ಲಿ ಬರೆದ ಕೃತಿಯು ಸಮಾಜ ಬಾಂಧವರಿಗೆ ನಮ್ಮ ಸಂಪ್ರದಾಯದ ವಿಷಯದಲ್ಲಿ ದಾರಿದೀಪದಂತಿದೆ. ಇದು ಅನುಭವ ಹಾಗೂ ಅಧ್ಯಯನದಿಂದ ರಚಿಸಿದ ಉತ್ತಮ ಕೃತಿಯಾಗಿದೆ.

ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅವುಗಳದೇ ಆದ ಕಟ್ಟುಪಾಡು ರೀತಿ ರಿವಾಜುಗಳಿವೆ. ಈ ಎಲ್ಲಾ ಕಾರ್ಯಕ್ರಮಗಳು ನಂಬಿಕೆ, ಸಂಪ್ರದಾಯ ಅನುಭವದಿಂದ ರೂಪುಗೊಂಡಿದ್ದು ಅವುಗಳಿಗೆ ಅದರದ್ದೇ ಆದ ಸೊಬಗು, ಮಹತ್ವ, ಶಕ್ತಿ ಇದೆ. ಆದರೆ ಇತ್ತೀಚೆಗೆ ನಮ್ಮ ಕೆಲವು ಸಮಾಜ ಬಾಂಧವರು ಮಾಹಿತಿ ಅಥವಾ ಮಾರ್ಗದರ್ಶನದ ಕೊರತೆಯಿಂದ ಈ ಉತ್ತಮ ಕ್ರಮಗಳನ್ನು ಮರೆತು ಬಿಟ್ಟಿದ್ದಾರೆ. ನಮ್ಮ ಉನ್ನತವಾದ ಈ ಆಚಾರ ವಿಚಾರ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಪರಂಪರೆ ಉಳಿಯಬೇಕು. ಅದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳು ವಂತಾಗಬೇಕು ಎಂಬ ಸದುದ್ದೇಶದಿಂದ ಈ ಕೃತಿಯು ರೂಪ ಪಡೆದಿದೆ.

ಕೌಟುಂಬಿಕ ಬದುಕಿನಲ್ಲಿ ಗಂಡು ಹೆಣ್ಣಿನ ಕರ್ತವ್ಯ ಜವಾಬ್ದಾರಿ, ಹಕ್ಕುಗಳ ಬಗ್ಗೆ, ಸಾಮರಸ್ಯದ ಸಹಜೀವನ, ಸುಖ ಸಂತೋಷ ನೆಮ್ಮದಿಯ ಸುಖಿ ಸಂಸಾರವನ್ನು ನಡೆಸಲು ಬೇಕಾದ ಮಾರ್ಗದರ್ಶನ ಈ ಕೃತಿಯಲ್ಲಿದೆ.

ಮದುವೆಗಿಂತ ಮೊದಲು ಆಗಬೇಕಾದ, ಮದುವೆಯ ಸಂದರ್ಭದಲ್ಲಿ ಆಗಬೇಕಾದ, ಅನಂತರ ಆಗುವ ಎಲ್ಲಾ ಕ್ರಮಗಳ ಬಗ್ಗೆ ಉತ್ತಮವಾದ ಮಾಹಿತಿ ವಿವರಗಳನ್ನು ದಂಬೆಕ್ಕಾನ ಸದಾಶಿವ ರೈಗಳು ಸಮಾಜಕ್ಕೆ ಒದಗಿಸಿ ಕೊಟ್ಟಿದ್ದಾರೆ.

ಈ ಕೃತಿಯು ಬಂಟ ಸಮಾಜಕ್ಕೆ ಮಾರ್ಗದರ್ಶನ, ಮಾಹಿತಿ ನೀಡುವ ಒಂದು ಉತ್ತಮ ಕೃತಿ ಆಗುತ್ತದೆ ಎಂಬ ವಿಶ್ವಾಸ ನನಗಿದೆ. ಪುಸ್ತಕವು ಸುಂದರವಾಗಿ ಮುದ್ರಣಗೊಂಡು ಸಮಾಜ ಬಾಂಧವರಿಗೆ -ದೊರಕುವಂತಾಗಲಿ. ಈ ಹೊತ್ತಗೆ ಸಮಾಜ ಬಾಂಧವರಿಗೆ -ದಾರಿದೀಪವಾಗಲಿ. ಸಮಾಜ ಬಾಂಧವರು ಪುಸ್ತಕವನ್ನು ಖರೀದಿಸಿ ಅದರಲ್ಲಿರುವ ಉತ್ತಮ ಮಾಹಿತಿಯ ಉಪಯೋಗವನ್ನು ಪಡೆಯಲಿ = ಎಂದು ಹಾರೈಸುತ್ತಾ ಶುಭ ಕೋರುವ-

- ಮಾಲಾಡಿ ಅಜಿತ್ ಕುಮಾರ್ ರೈ -

ಅಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ (ರಿ)

ಬಂಟ್ಸ್ ಹಾಸ್ಟೆಲ್, ಮಂಗಳೂರು - 575 008

ಸಮರ್ಪಣೆ

 ಸಮರ್ಪಣೆ

ನನಗೆ ಮಾಹಿತಿ ಕೊಟ್ಟು ಆಶೀರ್ವದಿಸಿದ ಹಿರಿಯ ಬಂಟ ಚೇತನಗಳಿಗೆ ಹಾಗೂ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲು ಪ್ರೇರೇಪಿಸಿದ ಮಹನೀಯರುಗಳಿಗೆ ಈ ಕಿರು ಕಾಣಿಕೆ ಸಮರ್ಪಿತ.




ಅನುಕ್ರಮಣಿಕೆ

 ಅನುಕ್ರಮಣಿಕೆ

1. ಸಂದೇಶ - 17

ಮಾಲಾಡಿ ಅಜಿತ್ ಕುಮಾರ್ ರೈ


2. ಸಂದೇಶ – 19

ಕೃಷ್ಣಪ್ರಸಾದ್ ರೈ


3. ಸಂದೇಶ- 21

- ಗೋಪಾಲಕೃಷ್ಣ ಶೆಟ್ಟಿ


4. ಸಂದೇಶ- 23

ಸಂಜೀವ ಶೆಟ್ಟಿ ಸಂಪಿಗೇಡಿ


5. ಸಂದೇಶ- 24

ಐಕಳ ಹರೀಶ್ ಶೆಟ್ಟಿ


6. ಸಂದೇಶ- 25

- CA ಸುಧೀರ್ ಕುಮಾರ್ ಶೆಟ್ಟಿ


7. ಅಭಿನಂದನಾ ಮಾತು- 27

ನರೇಂದ್ರ ರೈ ದೇರ್ಲ


8. ಆಶಯ ನುಡಿ- 30

- ಎ. ಲಕ್ಷ್ಮೀನಾರಾಯಣ ಶೆಟ್ಟಿ


9. ಆಶಯ ನುಡಿ- 31

- ಕುಮುದ ಎಲ್. ಎನ್. ಶೆಟ್ಟಿ


10. ಚಿಂತನೆಯ ನುಡಿ- 32

- ಮೀರಾ ಭಾಸ್ಕರ ರೈ


11. ಆಶಯದ ಮಾತು- 36

- ಚಿಲ್ಕೆತ್ತಾರು ಎ. ಜಗಜೀವನ್ದಾಸ್ ರೈ

12. ಶುಭ ಹಾರೈಕೆ- 38

ಶಶಿಕುಮಾರ್ ರೈ ಬಾಲ್ಯೊಟ್ಟು


13. ಶುಭ ನುಡಿ- 40

ಬೂಡಿಯಾರು ರಾಧಾಕೃಷ್ಣ ರೈ


14. ಕಿರಿ ಮಾತು- 43

- ಮಲ್ಲಿಕಾ ಜೆ. ರೈ, ಗುಂಡ್ಯಡ್ಕ, ಪುತ್ತೂರು


15. ಒಂದು ಮಾತು- 45

- ನಾರಾಯಣ ರೈ ಕುಕ್ಕುವಳ್ಳಿ


16. ಅಭಿನಂದನಾ ಮಾತು- 48

 - ಎಂ. ಮಲ್ಲಿಕಾ ಪ್ರಸಾದ


17. ಒಳ್ನುಡಿ- 50

- ಕೆ. ಸೀತಾರಾಮ ರೈ ಸವಣೂರು


18. ಬಂಟ ಮದುವೆ ಕೈಪಿಡಿಯ ಬಗ್ಗೆ- 52

ದಯಾನಂದ ರೈ ಮನವಳಿಕೆಗುತ್ತು


19. ಶುಭ ಹಾರೈಕೆಗಳು- 55

- ಶ್ರೀಮತಿ ರಾಜಶ್ರೀ ಟಿ. ರೈ, ಪೆರ್ಲ


20. ನಲ್ನುಡಿ- 58

- ಕುಂಬ್ರ ದುರ್ಗಾಪ್ರಸಾದ್ ರೈ


21. ಪ್ರಶ್ನೆಗಳು- 61


22. ಮುತ್ತೈದೆ ಭಾಗ್ಯ- 62


23. ಪ್ರಸ್ತಾವನೆ- 63


24. ಬಂಟ ಗುರಿಕ್ಕಾರನ ಮಾರ್ಗಸೂಚಿ- 70


25. ನಿಶ್ಚಿತಾರ್ಥ (ಬದ್ದೊ)- 72


26. ಮದುವೆ ಮಂಟಪಕ್ಕೆ ಸಾಹಿತ್ಯ- 77


27. ಮದುವೆ ಕಾರ್ಯಕ್ರಮ- 79


28. ಧಾರಾಕಲಶ- 82


29. ಕರಿಮಣಿ- 84


30. ದೇಸೆ- 86


31. ಮಂಟಪ ಇಳಿಸುವುದು- 87


32. ವಧು ಬಿಟ್ಟು ಕೊಡುವುದು- 88


33. ಬೊಂಡ-90


34. ನನಗೆ ಮಾಹಿತಿ ಕೊಟ್ಟ ಬಂಟ ಮಹನೀಯರು- 92


35. ಪುಸ್ತಕ ಬರೆಯಲು ಪ್ರೇರೇಪಿಸಿದವರು- 93


36. ಕಾರ್ಯಕ್ರಮ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬಂಟ ಮಹನೀಯರು- 94


37. ನೀತಿಪಾಠ- 95


38. ಬೆನ್ನುಡಿ ಎ. ಹೇಮನಾಥ ಶೆಟ್ಟಿ ಕಾವು – 96


39. ಆಮಂತ್ರಣ ಪತ್ರಿಕೆ- 101

ಪ್ರಸ್ತಾವನೆ - ದಂಬೆಕ್ಕಾನ ಸದಾಶಿವ ರೈ

 ಪ್ರಸ್ತಾವನೆ

ದಂಬೆಕ್ಕಾನ ಸದಾಶಿವ ರೈ

ನಾನು ಈ ಮೊದಲು ಬಂಟ ಮದುವೆಯ ಬಗ್ಗೆ ಪ್ರಕಟಿಸಿದ ಎರಡು ಪುಸ್ತಕಗಳ ಅನುಭವದ ಆಧಾರದಲ್ಲಿ ಹಾಗೂ ಅನೇಕ ಹಿರಿಯರ ಮಾರ್ಗದರ್ಶನದಲ್ಲಿ ಒಂದು ಕಿರು ಕೈಪಿಡಿಯ ಅವಶ್ಯಕತೆಯನ್ನು ಮನಗಂಡು ಮುಂದಡಿಯಿಟ್ಟಿದ್ದೇನೆ.

ಎಲ್ಲಾ ಬಂಟ ಮನೆಗಳಲ್ಲಿ ಈ ಕಿರು ಪುಸ್ತಕ ಹರಿದಾಡು ವಂತಾಗಲಿ ಎಂಬುದು ನನ್ನ ಆಶಯ. ಹಿರಿಯರಿಂದ ಕೇಳಿ ತಿಳಿದುಕೊಂಡಂತಹ ವಿಚಾರಗಳನ್ನು ಮಂಡಿಸಿದ್ದೇನೆ. ಇನ್ನೂ ಅನೇಕ ಹಿರಿಯರನ್ನು ಭೇಟಿ ಮಾಡಬೇಕಿತ್ತು. ನನ್ನಿಂದಾಗಿಲ್ಲ. ಅದಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ಈ ಬಗ್ಗೆ ತಮ್ಮ ಅನುಭವದ ವಿಚಾರಗಳನ್ನು ವಿಮರ್ಶಿಸಿ ಮುಂದಿನ ಪ್ರಕಟಣೆಯಲ್ಲಿ ಸೇರ್ಪಡೆ ಗೊಳಿಸೋಣ. ಆ ನಿಟ್ಟಿನಲ್ಲಿ ತಮ್ಮ ಸಹಕಾರ ಬಯಸುತ್ತಿದ್ದೇನೆ. 

ನನಗೆ ಮಾಹಿತಿ ಕೊಟ್ಟು ಸಹಕರಿಸಿದ ಎಲ್ಲಾ ಹಿರಿಯ ಮಹನೀಯರುಗಳಿಗೆ, ಪುಸ್ತಕ ಬರೆದು ಪ್ರಕಟಿಸಲು ಪ್ರೇರೇಪಿಸಿದ ನನ್ನೆಲ್ಲಾ ಆತ್ಮೀಯರಿಗೆ, ಕಾರ್ಯಕ್ರಮ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿ, ಹುರಿದುಂಬಿಸಿದ ಅನೇಕ ಮಹನೀಯರುಗಳಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು.

ಈ ಸಣ್ಣ ಕೈಪಿಡಿಗೆ ಮುನ್ನುಡಿಯನ್ನು ದಯಪಾಲಿಸಿ, ಇದರ ಮಹತ್ವವನ್ನು ತಿಳಿಯಪಡಿಸಿ, ಪುಸ್ತಕದ ಘನತೆಯನ್ನು ಬೆಳಗಿಸಿದ ನನ್ನ ಆತ್ಮೀಯ ಬಂಧುವಾದ ಶ್ರೀ ಮೋಹನ ಆಳ್ವರಿಗೆ ಹೃದಯ ತುಂಬಿದ ನಮನಗಳು.

ಈ ಕಿರುಹೊತ್ತಗೆ ಹೊರತರಲು ಎಲ್ಲಾ ರೀತಿಯ ಸಹಕಾರ ನೀಡಿ ಬೆನ್ನುಡಿಯನ್ನು ಕೊಟ್ಟು ಬಿಡುಗಡೆಯ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ನನ್ನ ಆತ್ಮೀಯರಾದ ಶ್ರೀ ಕಾವು ಹೇಮನಾಥ ಶೆಟ್ಟಿಯವರಿಗೆ ಅನಂತಾನಂತ ಕೃತಜ್ಞತೆಗಳು.

ಮಾತೃ ಸಂಘದ ಅಧ್ಯಕ್ಷರ ನೆಲೆಯಲ್ಲಿ ಶುಭಾಶಂಸನೆ ಗೈದ ಹಾಗೂ ಈ ಪುಸ್ತಕ ಬಿಡುಗಡೆಯ ಹೊಣೆಯನ್ನು ತಮ್ಮ ಸಂಘಟನೆಯ ಮುಖಾಂತರ ಬಿಡುಗಡೆಗೊಳಿಸಲು ಪ್ರಾಮಾಣಿಕ ವಾಗಿ ಸಹಕರಿಸಿದ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿಯವರಿಗೆ ಹಾಗೂ ಅವರ ಕಾರ್ಯಕಾರಿ ಸಮಿತಿಯ ಸದಸ್ಯರಿಗೂ ಮನಃಪೂರ್ವಕ ವಂದನೆಗಳು.

ಸಂದೇಶಗಳನ್ನು ಕಳುಹಿಸಿ ಪ್ರೋತ್ಸಾಹಿಸಿದ ಎಲ್ಲಾ ನನ್ನ ಬಂಧು-ಭಗಿನಿಯರಿಗೆ ಮನದಾಳದ ಕೃತಜ್ಞತೆಗಳು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರ ನೆಲೆಯಲ್ಲಿ ಶ್ರೀ ಐಕಳ ಹರೀಶ್ ಶೆಟ್ಟಿಯವರ ಸಂದೇಶ ಮತ್ತು ಅವರ ಮನಃಪೂರ್ವಕ ಸಹಕಾರಕ್ಕಾಗಿ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಿಗೂ ಮನದುಂಬಿದ ಅಭಿವಂದನೆಗಳು.

ಪುತ್ತೂರು ಬಂಟರ ಸಂಘದ ಮಾಜಿ ಹಾಗೂ ಹಾಲಿ ಆಡಳಿತ ಸಮಿತಿಯ ಎಲ್ಲಾ ಸದಸ್ಯರುಗಳಿಗೆ ವಂದನೆಗಳು.

ಕೈಪಿಡಿಯ ಪ್ರತಿಯನ್ನು ಮುಖಪುಟದೊಂದಿಗೆ ವಿನ್ಯಾಸ ಗೊಳಿಸಿ, ಪುಸ್ತಕರೂಪ ನೀಡಿ ಎಲ್ಲಾ ರೀತಿಯ ಸಹಕಾರ ನೀಡಿದ ಶ್ರೀಮತಿ ಜಯಲಕ್ಷ್ಮೀ ಎಸ್. ಜೋಯಿಸ್ ಇವರಿಗೆ ಹೃದಯಾಂತರಾಳದ ಕೃತಜ್ಞತೆಗಳು.

ಅಂದ ಚಂದವಾಗಿ ಸಕಾಲದಲ್ಲಿ ಮುದ್ರಣ ಮಾಡಿಕೊಟ್ಟ ಹೊಸ ದಿಗಂತ ಮುದ್ರಣಾಲಯದ ಸರ್ವರಿಗೂ ವಂದನೆಗಳು.

- ದಂಬೆಕ್ಕಾನ ಸದಾಶಿವ ರೈ

ನೂಜಿ ತರವಾಡು ಮನೆ

ಕೆಯ್ಯೂರು ಗ್ರಾಮ, ಅಂಚೆ : ಮಾಡಾವು ಪುತ್ತೂರು ತಾಲೂಕು, 

ದ. ಕ. ಜಿಲ್ಲೆ, ಕರ್ನಾಟಕ - 574 210

ಮೊಬೈಲ್: 8277558477, 9980879993

ಮುನ್ನುಡಿ

 ಮುನ್ನುಡಿ

ಡಾ| ಎಂ. ಮೋಹನ ಆಳ್ವ

ಬಂಟ ದಂಬೆಕ್ಕಾನ ಸದಾಶಿವ ರೈಯವರು ನನಗೆ ಅತ್ಯಂತ ಆತ್ಮೀಯರು ಮತ್ತು ಗೌರವಾನ್ವಿತರು. ಬೇರೆ ಬೇರೆ ಸಂದರ್ಭಗಳಲ್ಲಿ ನಾನು ಅವರನ್ನು ಭೇಟಿಯಾಗಿದ್ದೇನೆ. ಅವರ ವ್ಯಕ್ತಿತ್ವ, ನಡೆ-ನುಡಿ-ತಿಳುವಳಿಕೆಗಳಿಗೆ ನಾನು ಮಾರುಹೋಗಿದ್ದೇನೆ. ಸಮುದಾಯದ ಮುಖಂಡರಾಗಿ ಅವರು ನಿಶ್ಚಯ-ಮದುವೆ ಕಾರ್ಯಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಿ ಕೊಟ್ಟದ್ದನ್ನು ನೋಡಿ ನಾನು ಸಂತೋಷಗೊಂಡಿದ್ದೇನೆ. ಸರಳವಾಗಿ, ಆತ್ಮೀಯ ವಾಗಿ ಆದರೆ ಸಂಪ್ರದಾಯಬದ್ಧವಾಗಿ ನಡೆಸಿಕೊಡುವ ಶುಭಕಾರ್ಯ ಗಳಲ್ಲಿ ಹುಡುಕಿದರೂ ಕೊರತೆ ಕಾಣದಷ್ಟು ಪರಿಪೂರ್ಣ ನಿರ್ವಹಣೆ ಅವರದು. ಬಿ.ಕಾಂ., ಬಿ.ಎ., ಸಿ.ಇ.ಐ. ಪದವೀಧರರಾಗಿ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅವೆಲ್ಲವನ್ನೂ ಬಿಟ್ಟು ಮರಳಿ ಊರಿಗೆ ಬಂದು ನೂಜಿ ತರವಾಡಿನ ನೇತೃತ್ವ ವಹಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದು, ಬಂಟ ಸಮುದಾಯದ ಕೌಟುಂಬಿಕ-ಧಾರ್ಮಿಕ ಆಚಾರ- ವಿಚಾರಗಳಲ್ಲಿ ಸಂಪ್ರದಾಯನಿಷ್ಠತೆಯನ್ನು ಚಾಚೂ ತಪ್ಪದೆ ಪಾಲನೆ ಮಾಡಲು ತೊಡಗಿದ್ದು ಮತ್ತು ಇತರರನ್ನು ಅದೇ ರೀತಿ ನಡೆಯಲು ಪ್ರೇರೇಪಿಸಿದ್ದು ನಮ್ಮ ಸಮುದಾಯದ ಬಹುದೊಡ್ಡ ಭಾಗ್ಯವೇ ಆಗಿದೆ.

ಬಂಟರ ಶುಭಶೋಭನಾದಿ ಆಚಾರ-ವಿಚಾರಗಳಲ್ಲಿ ಸಮಾನತೆ ಗಳಿಲ್ಲ. ಹೀಗೆ ಇರಬೇಕೆಂದು ಮಾರ್ಗದರ್ಶನ ಮಾಡುವ ಪ್ರಾತಿನಿಧಿಕ ಕೃತಿಗಳೂ ಇಲ್ಲ. ಸಮಾನತೆ ತರಬೇಕೆಂದು 'ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಮಾಳ್ವವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ, ಕೆಲವಂ ಸಜ್ಜನ ಸಂಗದಿಂದ ಅರಿಯಲ್' ಎಂಬಂತೆ ದಂಬೆಕ್ಕಾನ ಸದಾಶಿವ ರೈಯವರು ಮಾಹಿತಿಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದುದರಿಂದ 'ಬಂಟ ಮದಿಮೆ' ಎನ್ನುವ ಕೃತಿ ತುಳು ಭಾಷೆಯಲ್ಲಿ ಮೂಡಿಬಂತು. ಅವರ ಇನ್ನೊಂದು ಕೃತಿ ಕನ್ನಡ ಭಾಷೆಯಲ್ಲಿ ಬರೆದ 'ನಾವು ಬಂಟರು'. ಬಂಟ ಸಮುದಾಯದ ಸವಿಸ್ತಾರ ಪರಿಚಯ ಮಾಡಿಕೊಡುತ್ತಾ 'ಬಂಟ ಮದಿಮೆ'ಗೆ ಮುನ್ನುಡಿ ಬರೆದವರು ಖ್ಯಾತ ಕವಿಗಳಾದ ನಾಡೋಜ ಕಯ್ಯಾರ ಕಿಂಞಣ್ಣ ರೈಯವರು. ವಿದ್ವಾಂಸರಾಗಿ, ಕನ್ನಡ-ತುಳು ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧರಾದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರು 'ನಾವು ಬಂಟರು' ಕೃತಿಗೆ ಮುನ್ನುಡಿ ಬರೆದ ಶ್ರೇಷ್ಠರು. ಇವರ ಬದುಕಿನ ಕುರಿತು "ದಂಬೆಕ್ಕಾನ ಸದಾಶಿವ ರೈ ಬದುಕಿನ ಹೆಜ್ಜೆಗಳು' ಎಂಬ ಕೃತಿಯನ್ನು ಡಾ. ರಾಜೇಶ್ ಬೆಜ್ಜಂಗಳರವರು ಸಂಪಾದಿಸಿ ಪ್ರಕಟಿಸಿದ್ದಾರೆ. 

ಸದಾಶಿವ ರೈಯವರು 'ಬಂಟರ ಮದುವೆ-ಬಂಟ ಗುರಿಕ್ಕಾರನ ಮಾಹಿತಿ' ಎಂಬ ಕೈಬರಹದ ಪ್ರತಿಯೊಂದನ್ನು ನನ್ನ ಕೈಗಿತ್ತು 'ಮುನ್ನುಡಿ'ಯ ನಾಲ್ಕು ಮಾತುಗಳನ್ನು ಬರೆದು ಕೊಡಬೇಕೆಂದು. ಕೇಳಿದಾಗ ನನಗೆ ಆಶ್ಚರ್ಯವೋ ಆಶ್ಚರ್ಯ. ಏಕೆಂದರೆ ಸಾಹಿತಿಯೂ ಅಲ್ಲದ, ವಿದ್ವಾಂಸನೂ ಅಲ್ಲದ ನನ್ನಲ್ಲಿ ಮುನ್ನುಡಿ ಬರೆಸುವುದರ ಔಚಿತ್ಯವು ತೀರಾ ಯೋಚನೆಗೆ ಹಚ್ಚುವಂತೆ ಮಾಡಿತು. ಬೇರೆ ಬೇರೆ ಸಂದರ್ಭಗಳಲ್ಲಿ ದಂಬೆಕ್ಕಾನ ಸದಾಶಿವ ರೈಯವರಂತೆ ಶುಭಸಮಾರಂಭಗಳ ನಿರ್ವಾಹಕ (ಬಂಟ ಗುರಿಕ್ಕಾರ)ನ ಕೆಲಸವನ್ನು ನಾನೂ ಮಾಡಿದ್ದಿದೆ. ನನ್ನ ಈ ನಿರೂಪಕತನವೇ ಈ ಕೃತಿಗೆ ಮುನ್ನುಡಿ ಬರೆಯುವ ಅರ್ಹತೆ ಎಂದು ಭಾವಿಸಿ ನಾಲ್ಕು ಮಾತುಗಳನ್ನು ಬರೆಯಲು ಸಂತೋಷ ವಾಗುತ್ತದೆ.

ಮೂಲತಃ ತುಳುನಾಡೆಂದು ಕರೆಯುವ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳು ಬಂಟ ಸಮುದಾಯದ ಮೂಲ ಜಿಲ್ಲೆಗಳಾಗಿದ್ದು, ಇಂದು ಬಂಟರು ಜಗತ್ತಿನಾದ್ಯಂತ ವಿಸ್ತರಿಸಿಕೊಂಡಿದ್ದಾರೆ. ಸ್ವಾಭಿಮಾನ, ಧೈರ್ಯ, ಸಾಹಸ ಪ್ರವೃತ್ತಿ ಮತ್ತು ಇತರರಿಂದ ಗೌರವಿಸಲ್ಪಡುವವರಾದ ಬಂಟರ ಇತಿಹಾಸ ಅಲುಪ ಅರಸರ ಕಾಲಕ್ಕೆ ಹೋಗುತ್ತದೆ. ವಿಜಯನಗರ ಅರಸರ ಕಾಲದಲ್ಲಿ ಭಟರಾಗಿದ್ದು 'ಬಂಟ'ರಾದರು ಎಂಬ ಸರ್ವಸಮ್ಮತ ಒಪ್ಪಿಗೆ ಇರುವ ಬಂಟ ಸಮುದಾಯ ಭೂತಾರಾಧನೆಯ ಜೊತೆಗೆ 'ಮೃತಾತ್ಮಗಳ' ಆರಾಧಕರೂ, ನಾಗಾರಾಧಕರೂ ಹೌದು.

ಮಾತೃಮೂಲೀಯ ಸಂಪ್ರದಾಯವೂ ನಮ್ಮದಾಗಿರುವುದರಿಂದ ಇತರ ಜನಾಂಗಗಳಿಗಿಂತ ನಾವು ಭಿನ್ನರು. ಈ ಭಿನ್ನತೆ ಹುಟ್ಟಿನಿಂದ ಸಾವಿನವರೆಗಿನ ಎಲ್ಲಾ ಆಚಾರ-ವಿಚಾರಗಳಲ್ಲಿ ರೂಢಿಯಲ್ಲಿದ್ದು ನಾವು ನಮ್ಮದೇ ಆದ ವಿಶಿಷ್ಟ ಸಂಪ್ರದಾಯಕ್ಕೆ ಒಳಪಟ್ಟವರು.

ಈ ಕುರಿತಾಗಿ ನಾಡೋಜ ಕಯ್ಯಾರ ಕಿಂಞಣ್ಣ ರೈಯವರ 'ಸಂಪರ್ಕ', ಡಾ. ಇಂದಿರಾ ಹೆಗ್ಗಡೆಯವರ 'ಬಂಟರು-ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ' ಮತ್ತು ಬಿ. ಸುರೇಂದ್ರ ರಾವ್ ಅವರ 'Bunts in History and Culture' ಕೃತಿಗಳು ಮಾಹಿತಿಗಳನ್ನೊದಗಿಸುತ್ತವೆ. ಸಂಶೋಧನಾತ್ಮಕ ಹಿನ್ನಲೆಯ ಈ ಕೃತಿಗಳಿಗಿಂತ ಅನುಭವದ ಆಧಾರದ ಮೇಲೆ ರೂಪುಗೊಂಡ ದಂಬೆಕ್ಕಾನರ ಕೃತಿ ಬಹು ಭಿನ್ನವಾದುದು. ಈ ಹಿನ್ನಲೆಯಲ್ಲಿ ಗೌರವಾನ್ವಿತರಾದ ಶ್ರೀ ಮುಲ್ಕಿ ಹರಿಪೂಂಜರು ಬಂಟರ ಆಚಾರ-ವಿಚಾರಗಳ ಬಗ್ಗೆ ವಿಶೇಷ ಒಲವಿದ್ದವರು. ನಿರ್ವಾಹಕರಾಗಿ ಬಂಟ ಸಹಜ ಗತ್ತಿನಲ್ಲಿ, ನಿಷ್ಠುರವಾಗಿ ಆದರೆ ಸಂಪ್ರದಾಯಬದ್ಧವಾಗಿ ಮದುವೆ ಕಾರ್ಯಕ್ರಮಗಳನ್ನು ಅವರು ನಡೆಸಿಕೊಡುವ ರೀತಿಯೇ ಬಲುಸೊಗಸು. ಬಂಟರ ಶುಭಶೋಭನಾದಿ ಕಾರ್ಯಕ್ರಮಗಳ ಕುರಿತು ಅಧಿಕೃತವಾಗಿ ಮೊದಲು ಮಾತನಾಡಿದವರು, ಬರೆದವರು ಸನ್ಮಾನ್ಯ ಶ್ರೀ ಮುಲ್ಕಿ ಹರಿಪೂಂಜರು.

ಹಿಂದಿನ ಕಾಲದಲ್ಲಿ ಬಂಟ ಸಮುದಾಯದ ಮದುವೆಗಳು ಬಹಳ ಹತ್ತಿರದ ಸಂಬಂಧಗಳಲ್ಲಿ ನಡೆಯುತ್ತಿದ್ದುವು. ಇಂದು ದೂರದೂರದ ಊರುಗಳಿಗೆ ಸಂಬಂಧಗಳಾಗುತ್ತಿವೆ. ಹಿಂದೆ ಮದುವೆಗಳು ವರನ ಅಥವಾ ವಧುವಿನ ಮನೆಗಳಲ್ಲಾಗು ತಿದ್ದುವು. ಕ್ರಮೇಣ ಕಲ್ಯಾಣ ಮಂಟಪಗಳ ಬಳಕೆ ಬಂತು.

ಬೇರೆ ಸಮುದಾಯಗಳ ಆಚಾರ-ವಿಚಾರಗಳು ಇದರೊಂದಿಗೆ ಸೇರಿಕೊಂಡವು. ಜಾಗತೀಕರಣದ ಅವಸರ ಇಲ್ಲೂ ಕಾಣಿಸಿ ಕೊಂಡಿತು. ಒಟ್ಟಿನಲ್ಲಿ ಬಂಟರ ವಿಶಿಷ್ಟ ಆಚರಣೆಗಳು ಮಾಯವಾಗಿ ಅಲ್ಲಿ ಆರ್ಯರೇ ಮೊದಲಾದ ಇತರ ಸಮುದಾಯಗಳ ಆಚಾರ-ವಿಚಾರಗಳು ಮತ್ತು ಇಂದಿನ ಅವಸರ-ಧಾವಂತಗಳು ಮೇಲೈಸಿ ಕೊಂಡವು. ಪರಿಣಾಮವಾಗಿ ನಿಶ್ಚಿತಾರ್ಥ, ಮದುವೆ ಮೊದಲಾದ ಪದ್ಧತಿಗಳು ತನ್ನ ಮೂಲ ಸ್ವರೂಪವನ್ನೇ ಮರೆತು ಹೋಮ-ಹವನಗಳಿಗೆ, ಅದ್ದೂರಿಗೆ, ಹಣದ ದುಂದುವೆಚ್ಚಕ್ಕೆ ದಾರಿ ಮಾಡಿ ಕೊಟ್ಟಿತು. ಸಂಪ್ರದಾಯವಾಗಲೀ ಪಾವಿತ್ರ್ಯವಾಗಲೀ ಇಲ್ಲದೆ ನಡೆಯುವ ಈ ಆಚಾರಗಳನ್ನು ಕಂಡು ದುಃಖಗೊಂಡು ಅವುಗಳನ್ನು ಮರುರೂಪಿಸಲು ನಡೆಸುವ ಪ್ರಯತ್ನವೇ ಅಕ್ಷರರೂಪ ಪಡೆದು ದಂಬೆಕ್ಕಾನರ ಲೇಖನಿಯಿಂದ 'ಬಂಟರ ಮದುವೆ-ಬಂಟ ಗುರಿಕ್ಕಾರನ ಮಾಹಿತಿ' ಎಂಬ ಉಪಯುಕ್ತ ಕಿರುಹೊತ್ತಗೆಯಾಗಿ ಮೂಡಿಬಂದಿದೆ.

ಈ ಕೃತಿಯಲ್ಲಿ ಮದುವೆ ಸಂಪ್ರದಾಯ ರೂಪುಗೊಂಡ ವಿವರಗಳಿವೆ. ಸ್ತ್ರೀಪುರುಷರಿಗೆ ವಿವಾಹವೆನ್ನುವುದು ಮರ್ಯಾದೆ, ಗೌರವ ಹಾಗೂ ಧಾರ್ಮಿಕ ವಿಧಿ ಎನ್ನುತ್ತಾ ನಮ್ಮ ಸಂಸ್ಕೃತಿಯಲ್ಲಿ ಸಂಸಾರ ಮತ್ತು ವಂಶಾಭಿವೃದ್ಧಿಯ ಮಹತ್ವಗಳನ್ನು ವಿವರಿಸ ಲಾಗಿದೆ. ಸಂಸಾರದಲ್ಲಿ ಹೆಣ್ಣೂ ಮೇಲಲ್ಲ-ಗಂಡೂ ಮೇಲಲ್ಲ. ಇಲ್ಲಿ ಸ್ಪರ್ಧಾ ಮನೋಭಾವ ಸಲ್ಲದು; ಸಹಕಾರ ಮನೋಭಾವ ಇರಬೇಕು. 'ಕಾಡಲ್ಲೇ ಹುಟ್ಟಿದ ಮಾವಿನಕಾಯಿಗೆ ಸಮುದ್ರದಲ್ಲಿ ಹುಟ್ಟಿದ ಉಪ್ಪಿನ ಜೊತೆಯಾಗುವ ವೈವಿಧ್ಯಮಯ ಬೆಸುಗೆ! ಎಲ್ಲೋ ಹುಟ್ಟಿದ ಮಾಮರವು ಎಲ್ಲೋ ಹುಟ್ಟಿದ ಕೋಗಿಲೆಗೆ ಆಶ್ರಯ ಅನುಮೋದನೆ ನೀಡುವ ಸುಮಧುರ ಬಾಂಧವ್ಯವೇ ವಿವಾಹ' ಎನ್ನುವ ಸಾಂಸಾರಿಕ ಸಾಮರಸ್ಯದ ಸೌರಭವಿದೆ. ಸಾಂಸಾರಿಕ ಸಂಬಂಧವು ಸುಮಧುರವಾಗಿ ಮುಂದುವರಿಯಲು ಅದರ ಪ್ರಾರಂಭವೂ ಸೊಗಸಾಗಿಯೇ ಇರುವುದು ಅಗತ್ಯ. ಅದಕ್ಕಾಗಿ ಮದುವೆ ನಿಶ್ಚಯ-ಮದುವೆ ಕಾರ್ಯಕ್ರಮಗಳೆಲ್ಲವೂ ಸಂಪ್ರದಾಯಬದ್ಧವಾಗಿ ಒಂದೇ ರೀತಿ ನಡೆಯಬೇಕು ಮತ್ತು ಸಾರ್ವತ್ರಿಕವಾಗಿ ಪಾಲನೆಯಾಗಬೇಕು. ಅದಕ್ಕಾಗಿ ಶುಭಸಮಾರಂಭಗಳನ್ನು ನಡೆಸಿಕೊಡುವ ನಿರ್ವಾಹಕರಿಗೆ ಅನುಕೂಲವಾಗಲು ಈ ಕೈಪಿಡಿಯನ್ನು ದಂಬೆಕ್ಕಾನರು ರಚಿಸಿದ್ದಾರೆ. ಈ ಕೈಪಿಡಿಯನ್ನು 'ಬಂಟ ಗುರಿಕ್ಕಾರನ ಮಾರ್ಗಸೂಚಿ' ಎಂದು ಕರೆಯುತ್ತಾ ನಿರ್ವಾಹಕರು ತಿಳಿದಿರಬೇಕಾದ ನಿಶ್ಚಿತಾರ್ಥ-ಮದುವೆಯ 32 ಅಂಶಗಳನ್ನು ಪಟ್ಟಿ ಮಾಡುತ್ತಾರೆ. ನಿಶ್ಚಿತಾರ್ಥ (ಬದ್ದೊ)ದಲ್ಲಿ ಇರಬೇಕಾದ ಸಾಹಿತ್ಯ ಮತ್ತು ನಿಶ್ಚಿತಾರ್ಥ ವಿಧಿ ನಿರ್ವಹಣೆ. ಮದುವೆ ಮಂಟಪಕ್ಕೆ ಬೇಕಾದ ಸಾಹಿತ್ಯ, ಮದುವೆ ಕಾರ್ಯಕ್ರಮ ನಿರ್ವಹಿಸುವುದರ ಮಾಹಿತಿ, ಧಾರಾಕಲಶದ ಮಹತ್ವ, ಒಡ್ಡಿಉಂಗಿಲ ಮಹತ್ವ, ಧಾರೆಯೆರೆಯುವ ಕ್ರಮ, ಕರಿಮಣಿ ಧಾರಣೆಯ ಮಹತ್ವ, ದೇಸೆ, ಮಂಟಪ ಇಳಿಸುವುದು, ವಧು ಬಿಟ್ಟು ಕೊಡುವುದು, ಬೊಂಡ ಕುಡಿಯುವುದು- ಹೀಗೆ ನಿಶ್ಚಿತಾರ್ಥ-ಮದುವೆ ಕಾರ್ಯಗಳಲ್ಲಿ ಆಗಬೇಕಾದ ವಿಧಿ-ವಿಧಾನಗಳನ್ನು ಅವುಗಳ ಮಹತ್ವದೊಂದಿಗೆ ಲೇಖಕರು ನಿರ್ವಾಹಕನಿಗೆ ಅನುಕೂಲ ವಾಗುವಂತೆ ವಿವರಿಸಿದ್ದಾರೆ.

ಒಟ್ಟಿನಲ್ಲಿ ದಂಬೆಕ್ಕಾನ ಸದಾಶಿವ ರೈಯವರು ಬಂಟ ಸಮುದಾಯದ ಮದುವೆ ನಿಶ್ಚಯದಿಂದ ತೊಡಗಿ ಮದುವೆಯ ಮುಕ್ತಾಯದವರೆಗೆ ಬೇಕಾದ ಸಾಹಿತ್ಯ ಮತ್ತು ವಿಧಿ-ವಿಧಾನಗಳ ಸಾದ್ಯಂತ ವಿವರಣೆಯನ್ನು ಈ ಸಣ್ಣ ಕೈಪಿಡಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಕೇವಲ ನಿರ್ವಾಹಕನಿಗೆ ಅಗತ್ಯವಾದ ಮಾಹಿತಿ ಅನಿಸಿದರೂ ಬಂಟ ಸಮುದಾಯದ ಪ್ರತಿಯೊಬ್ಬರೂ ಅರಿತುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ. ಪ್ರತಿಯೊಬ್ಬ ಬಂಟನ ಮನೆಯಲ್ಲಿಯೂ ಈ ಕೈಪಿಡಿಗೆ ಅವಕಾಶ ನೀಡುವುದು ಒಳಿತು. ಈ ಕೈಪಿಡಿಯನ್ನು ಬಂಟ ಸಮುದಾಯ ಒಪ್ಪಿಕೊಂಡು, ಅಪ್ಪಿಕೊಂಡು ನಮ್ಮ ಸಂಸ್ಕೃತಿ-ಅಸ್ಮಿತೆಯನ್ನು ಪುನರ್ ಸ್ಥಾಪಿಸುವುದು, ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಬಂಟರ ನಿಶ್ಚಿತಾರ್ಥ ಮತ್ತು ಮದುವೆಗೆ ಸಂಬಂಧಿಸಿದ ಉತ್ತಮ ಕೈಪಿಡಿಯೊಂದನ್ನು ಬಂಟ ಸಮುದಾಯಕ್ಕೆ ನೀಡಿದ ದಂಬೆಕ್ಕಾನ ಸದಾಶಿವ ರೈಗಳು ಪ್ರಶಂಸಾರ್ಹರು. ಅವರ ಈ ಸಾಧನೆ ಸಾಮಾಜಿಕವಾಗಿ ಗುರುತಿಸಿ ಗೌರವಿಸಲ್ಪಡಲಿ, ಇನ್ನಷ್ಟು ಕೃತಿಗಳು ಅವರ ಲೇಖನಿಯಿಂದ ಮೂಡಿಬರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.

- ಡಾ| ಎಂ. ಮೋಹನ ಆಳ್ವ

ಚೆಯರ್ಮೇನ್, ಆಳ್ವಾಸ್ ಎಜುಕೇಶನ್ ಫೌಂಡೇಶನ್ (ರಿ.)

ಮೂಡುಬಿದಿರೆ- 574 227